Advertisement

ನರಗುಂದ ರೈತರಿಗೂ ಕೋರ್ಟ್‌ ಸಮನ್ಸ್‌!

02:54 PM Apr 12, 2017 | |

ನರಗುಂದ: ನವಲಗುಂದದಲ್ಲಿ ನಡೆದ ಪೊಲೀಸ್‌ ದೌರ್ಜನ್ಯದಲ್ಲಿ 187 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಳಿಕ ಸರ್ಕಾರದ ಮಟ್ಟದಲ್ಲಿ ಅವನ್ನು ಹಿಂಪಡೆಯಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮಹದಾಯಿ ಹೋರಾಟ ಹುಟ್ಟು ಹಾಕಿದ ನರಗುಂದ ತಾಲೂಕಿನಲ್ಲಿ 53 ಜನರ ವಿರುದ್ಧ 
ಪೊಲೀಸರು ಪ್ರಕರಣ ದಾಖಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಇದು ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮಹದಾಯಿ ಹೋರಾಟಗಾರರಲ್ಲಿ ಆಕ್ರೋಶದ ಅಲೆ ಸೃಷ್ಟಿಸಿದೆ. ಇದರಿಂದ ಸಹಜವಾಗಿ 636 ದಿನ ನಿರಂತರ ಹೋರಾಟ ನಡೆಸಿದವರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಮಾಯಕರ ವಿರುದಟಛಿ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಹೋರಾಟಗಾರರು ಮತ್ತೂಂದು ಹಂತದಲ್ಲಿ ಹೋರಾಟಕ್ಕೆ ಅಣಿಯಾಗುವ ಮುನ್ಸೂಚನೆ ನೀಡಿದ್ದಾರೆ.

2015, ಜುಲೈ 16ರಂದು ನರಗುಂದ ವೇದಿಕೆಯಲ್ಲಿ ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ಪ್ರಾರಂಭವಾದ ಬಳಿಕ ಕೆಲ ತಿಂಗಳು ಉಗ್ರ ಸ್ವರೂಪಪಡೆದುಕೊಂಡ ಸಂದರ್ಭದಲ್ಲಿ ಕಿಡಿಗೇಡಿಗಳನ್ನು ಕೈಬಿಟ್ಟು ಅಮಾಯಕ 53 ಜನರ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ. ಏ.10ರಂದು ನ್ಯಾಯಾಲಯ ಸಮನ್ಸ್‌ ಕೈಗೆ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಸಂಖ್ಯೆ ಇನ್ನೂಹೆಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ.

ತಾಲೂಕಿನ ಭೈರನಹಟ್ಟಿ ಗ್ರಾಮದ ಹನುಮಂತಪ್ಪ ಮರಗಪ್ಪ ಸಿದ್ದಣ್ಣವರ, ಮರಿಗೌಡ ಪರ್ವತಗೌಡ ಪಾಟೀಲ, ಚನ್ನಬಸಪ್ಪ ಶಿವಪ್ಪ ನರಸಾಪುರ, ರಾಜೇಶ ಶಿವಾನಂದ ಖಾನಾಪುರ,ಮಂಜುನಾಥ ಹನುಮಪ್ಪ ಮಾದರ, ರಾಜೇಸಾಬ ಬುಡೆ°àಸಾಬ ಅಗಸರ, ಶ್ರೀಕಾಂತ ಬಸವಂತಪ್ಪ ಮೆಣಸಿನಕಾಯಿ ಸೇರಿದಂತೆ ಏಳು ಜನರಿಗೆ ಏ.11ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನರಗುಂದ ಪೊಲೀಸರು ಖುದ್ದು ಸಮನ್ಸ್‌ ನೀಡಿದ್ದಾರೆ.

ಈ ಪೈಕಿ ಹನುಮಂತಪ್ಪ ಸಿದ್ದಣ್ಣವರ ಬೀಳಗಿಯಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾರೆ. ರಾಜೇಶ ಖಾನಾಪುರ ಆಟೋ ಚಾಲಕರಾಗಿದ್ದರೆ, ಉಳಿದವರೆಲ್ಲರೂ ಕೂಲಿಕಾರರು, ಯುವ ರೈತರು.

Advertisement

ಕೊಣ್ಣೂರಿನ 24 ಜನರ ಮೇಲೂ ಕೇಸ್‌: ತಾಲೂಕಿನ ಕೊಣ್ಣೂರ ಗ್ರಾಮದಲ್ಲೂ 24 ಅಮಾಯಕರ ವಿರುದಟಛಿ ಪ್ರಕರಣ ದಾಖಲಿಸಲಾಗಿದೆ. ತಾಲೂಕಿನ ಮದಗುಣಕಿ ಗ್ರಾಮದ ಮೂವರು, ಹದಲಿ ಗ್ರಾಮದಲ್ಲಿ 19 ಜನರ ಮೇಲೂ ಪ್ರಕರಣ ದಾಖಲಾಗಿದೆ.ಈವರೆಗೆ 53 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಗೊತ್ತಾಗಿದೆ. ತಾಲೂಕಿನ ಸುರಕೋಡ, ಹುಣಸೀಕಟ್ಟಿ, ಬನಹಟ್ಟಿ ಗ್ರಾಮಸ್ಥರ ಮೇಲೂ ಪ್ರಕರಣ ದಾಖಲಿಸಿದ್ದು, ವಿವರ ತಿಳಿದು ಬಂದಿಲ್ಲ. 20ರಿಂದ 25 ವಯೋಮಿತಿಯ ಇವರೆಲ್ಲರ ಮೇಲೆ ಐಪಿಸಿ ಸೆಕ್ಷನ್‌ 143, 147, 148, 427, 353, 504 ಹಾಗೂ ಆರ್‌ಡಬ್ಲೂ Â 149 ಐಪಿಸಿ ಮುಂತಾದ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ದೊಂಬಿ, ಸರ್ಕಾರಿ ಆಸ್ತಿ ಧ್ವಂಸ, ಗುಂಪು ಘರ್ಷಣೆ ಪ್ರಕರಣಗಳಲ್ಲಿ ಅಮಾಯಕರನ್ನು ಸೇರಿಸಿದ್ದು, ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶದ ಅಲೆ ಸೃಷ್ಟಿಸಿದೆ.

ಇಲ್ಲಿ ನಾವು ನೀರಿಗಾಗಿ ಹೋರಾಟ ನಡೆಸಿದ್ದರೆ ಅತ್ತ ರಾಜಕಾರಣಿಗಳ ಕುಮ್ಮಕ್ಕಿನಿಂದ ಪೊಲೀಸರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಬಂಡಾಯ ನೆಲದಲ್ಲಿ ಎರಡನೇ ಬಂಡಾಯಕ್ಕೆ ಪೊಲೀಸರೇ ನಾಂದಿ ಹಾಡಿದ್ದಾರೆ. ತಾಕತ್ತಿದ್ದರೆ ಪೊಲೀಸರು ನನ್ನ ಮೇಲೆ ಪ್ರಕರಣ ದಾಖಲಿಸಲಿ.
– ವೀರೇಶ ಸೊಬರದಮಠ ಸ್ವಾಮೀಜಿ, ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ

– ಸಿದ್ಧಲಿಂಗಯ್ಯ ಮಣ್ಣೂರು ಮಠ

Advertisement

Udayavani is now on Telegram. Click here to join our channel and stay updated with the latest news.

Next