ಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಸರ್ವೆ ನಡೆಸಲು ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣದಲ್ಲಿ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅ.6ರಂದು ಮೂಡುಬಿದಿರೆ ತಾಲೂಕು ಕಂದಾಯ ನಿರೀಕ್ಷಕರು, ತಾಲೂಕು ಭೂಮಾಪಕರು, ಗ್ರಾಮಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕರು ಸರ್ವೆ ನಡೆಸಲು ಹೋಗಿದ್ದಾಗ ಜೀವನ್ ಕಿರಣ್ ಡೆಲಿಯಾ, ನೆಲ್ಲಿ ಮೋನಿಸ್, ರೀಟಾ ಕುಟಿನ್ಹಾ ಮತ್ತು ಇತರರು ಸರ್ವೆಗೆ ಅಡ್ಡಿಪಡಿಸಿರುವ ಬಗ್ಗೆ ಹಾಗೂ ಈ ಪೈಕಿ ಜೀವನ್ ಕಿರಣ್ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಹೊಡೆಯಲು ಬಂದಿದ್ದ ಬಗ್ಗೆ ಮತ್ತು ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪರವಾಗಿ ನ್ಯಾಯವಾದಿ ನಾರಾಯಣ ಎಲ್ ವಾದಿಸಿದ್ದರು.