Advertisement

ರುಜಿರಾ ಬ್ಯಾನರ್ಜಿ ವಿರುದ್ಧ ಜಾಮೀನು ಸಹಿತ ವಾರಂಟ್‌

09:50 PM May 07, 2022 | Team Udayavani |

ಕೋಲ್ಕತಾ/ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ಜಾಮೀನು ಸಹಿತ ವಾರಂಟ್‌ ಅನ್ನು ದೆಹಲಿಯ ಕೋರ್ಟ್‌ ಹೊರಡಿಸಿದೆ.

Advertisement

ಹೊಸ ದಿನಾಂಕದ ಪ್ರಕಾರ 21, 22ರಂದು ನವದೆಹಲಿಯಲ್ಲಿರುವ ಇ.ಡಿ.ಕಚೇರಿಗೆ ಬರುವಂತೆ ಸೂಚಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಮತ್ತೊಮ್ಮೆ ವಾರಂಟ್‌ ಹೊರಡಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅಭಿಷೇಕ್‌ ಅವರನ್ನು ಜಾರಿ ನಿರ್ದೇಶನಾಲಯ 2 ಬಾರಿ ಪ್ರಶ್ನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next