ಬೆಂಗಳೂರು: ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ವಿರಚಿತ ಟಿಪ್ಪು ಕನಸುಗಳು ಕೃತಿಯ ಮಾರಾಟಕ್ಕೆ 14ನೇ ಹೆಚ್ಚುವರಿ ಸಿಸಿಎಚ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಬೆಂಗಳೂರು ನಿವಾಸಿ ಬಿ.ಎಸ್.ರಫೀವುಲ್ಲಾ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಪ್ರತಿವಾದಿಗಳು ಗೈರಾಗಿದ್ದರಿಂದ ಏಕಪಕ್ಷೀಯ ಮನವಿ ಆಲಿಸಿದ ಬಳಿಕ ತಡೆಯಾಜ್ಞೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಜತೆಗೆ ಮುಂದಿನ ವಿಚಾರಣೆಯನ್ನು ಡಿ. 3ಕ್ಕೆ ಮುಂದೂಡಲಾಗಿದೆ. ಅದುವರೆಗೂ ಈ ಕೃತಿ ಆನ್‌ಲೈನ್ ಮತ್ತು ಆಫ್ಲೈನ್ ಸೇರಿ ಎಲ್ಲಿಯೂ ಮಾರಾಟ ಮಾಡಬಾರದು ಎಂದು ಕೋರ್ಟ್ ಆದೇಶ ನೀಡಿದ್ದು, ಜತೆಗೆ ಪ್ರತಿವಾದಿಗಳಾದ ಕೃತಿ ರಚಿಸಿದ ಅಡ್ಡಂಡ ಸಿ. ಕಾರ್ಯಪ್ಪ, ಪ್ರಕಾಶಕರಾದ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣಕಾರರಾದ ರಾಷ್ಟ್ರೋತ್ಥಾನ ಮುದ್ರಣಾಲಯಕ್ಕೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿದ್ದಾರೆ.
ಟಿಪ್ಪು ನಿಜ ಕನಸುಗಳು ಕೃತಿ ಆಧಾರಿತ ನಾಟಕ ಪ್ರದರ್ಶನಕ್ಕೆ ಯಾವುದೇ ತಡೆ ಯಾಜ್ಞೆ ನೀಡಿಲ್ಲ. ಹೀಗಾಗಿ, ನಾಟಕ ಪ್ರದ ರ್ಶನ ನಿಗದಿಯಂತೆ ನಡೆಯಲಿದೆ.