Advertisement

ಜು.10ರ ವರೆಗೆ ಕಾರ್ತಿ ಚಿದಂಬರಂ ಬಂಧನ ಇಲ್ಲ: ದಿಲ್ಲಿ ಕೋರ್ಟ್‌

11:58 AM May 02, 2018 | Team Udayavani |

ಹೊಸದಿಲ್ಲಿ : 2ಜಿ ತರಂಗಾಂತರ ಕೇಸುಗಳಿಗೆ ಸಂಬಂಧಿಸಿದ ಏರ್‌ಸೆಲ್‌ ಮ್ಯಾಕ್ಸಿಸ್‌ ವಿಷಯದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಕೇಸುಗಳಲ್ಲಿ  ಜುಲೈ 10ರ ತನಕ ಕಾರ್ತಿ ಚಿದಂಬರಂ ಅವರಿಗೆ ದಿಲ್ಲಿ ನ್ಯಾಯಾಲಯ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿತು.

Advertisement

ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿ ಬಗ್ಗೆ ವಾದಿಸಲು ತನಗೆ ಸ್ವಲ್ಪ ಸಮಯಾವಕಾಶ ಬೇಕೆಂದು ಜಾರಿ ನಿರ್ದೇಶನಾಲಯ ಹೇಳಿದುದನ್ನು ಅನುಸರಿಸಿ ವಿಶೇಷ ನ್ಯಾಯಾಧೀಶರಾದ ಒ ಪಿ ಸೈನಿ ಅವರು ಕಾರ್ತಿ ಚಿದಂಬರಂ ಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ನೀಡಿದರು. 

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಿದ್ದ ವಕೀಲ ನಿತೇಶ್‌ ರಾಣಾ ಅವರು ಪ್ರಕರಣದ ವಿಚಾರಣೆಯ ಮುಂದೂಡಿಕೆಯನ್ನು ಕೋರುತ್ತಾ, ಈ ಕೇಸಿಗೆ ಸಂಬಂಧಿಸಿದ ಪ್ರಕರಣವೊಂದು ಸುಪ್ರೀಂ ಕೋರ್ಟ್‌ ಮುಂದೆ ವಿಚಾರಣಗೆ ಬಾಕಿ ಇರುವ ಕಾರಣ ಜುಲೈ 2ರಂದು ತಾನು ಈ ವಿಷಯವನ್ನು ಕೈಗೆೊRಳ್ಳುವುದಾಗಿ ಹೇಳಿದರು. 

ಸಿಬಿಐ ವಕೀಲರು ಕೂಡ ಇಡಿ ವಕೀಲರ ಈ ವಾದವನ್ನು ಬೆಂಬಲಿಸಿ ಪ್ರಕರಣವನ್ನು ಮುಂದಿನ ದಿನಾಂಕಕ್ಕೆ ನಿಗದಿಸಲು ಕೋರಿದರು. ಅಂತೆಯೇ ಕೋರ್ಟ್‌ ಅದನ್ನು ಪುರಸ್ಕರಿಸಿ ಜು.10ರ ವರೆಗೆ ಕಾರ್ತಿ ಚಿದಂಬರಂ ಬಂಧನಕ್ಕೆ ತಾತ್ಕಾಲಿಕ ರಕ್ಷಣೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next