Advertisement

ಸರ್ಕಾರದ ಆದೇಶ ರದ್ದುಗೊಳಿಸಿದ ಕೋರ್ಟ್‌

12:42 AM May 29, 2019 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇನ್ನುಳಿದ ಮೂರು ನಿಗಮಗಳಿಗೆ ಕ್ಲಾಸ್‌ -1 ಮತ್ತು ಕ್ಲಾಸ್‌-2 ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ವರ್ಗಾವಣೆಗೊಳಿಸಲು ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ 2000ನೇ ಇಸ್ವಿಯಲ್ಲಿ ಹೊರಡಿಸಿದ್ದ ಆದೇಶ “ಅಸಾಂವಿಧಾನಿಕ’ ಎಂದು ಹೇಳಿರುವ ಹೈಕೋರ್ಟ್‌ ಮಂಗಳವಾರ ಈ ಆದೇಶವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.

Advertisement

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿಯಿಂದ ಬೇರೆ ನಿಗಮಗಳಿಗೆ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿರುವ ಎಚ್‌.ಸಿ. ಬಸವರಾಜಪ್ಪ ಹಾಗೂ ಅಬ್ದುಲ್‌ ಅಜೀಜ್‌ ಸೇರಿ ಐವರು ಕ್ಲಾಸ್‌-1 ಅಧಿಕಾರಿಗಳು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ
ನ್ಯಾ. ಆರ್‌. ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ತೀರ್ಪು ಪ್ರಕಟಿಸಿತು. ಕೆಎಸ್‌ಆರ್‌ಟಿಸಿಯಲ್ಲಿ ಕ್ಲಾಸ್‌-1 ಮತ್ತು ಕ್ಲಾಸ್‌-2 ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಹಲವು ಅಧಿಕಾರಿಗಳನ್ನು ಹೊಸದಾಗಿ ರಚನೆಯಾದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ  ನಿಗಮ (ಎನ್‌ಇಕೆಆರ್‌ಟಿಸಿ) ಮತ್ತು ವಾಯುವ್ಯ ಕರ್ನಾಟಕ
ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲೂಕೆಆರ್‌ಟಿಸಿ) ಗಳಿಗೆ ನಿಯೋಜನೆ ಮೇರೆಗೆ ವರ್ಗಾವಣೆಗೊಳಿಸಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು 2000ರ ಆಗಸ್ಟ್‌ 5ರಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ರದ್ದುಗೊಳಿಸಿದೆ.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ಅವರ ಒಪ್ಪಿಗೆ ಇಲ್ಲದೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ,
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಬಿಎಂಟಿಸಿ ಸೇರಿ ಇತರೆ ನಿಗಮಗಳಿಗೆ ನಿಯೋಜನೆ
ಮಾಡುವುದು ಅಸಿಂಧು ಮತ್ತು ಕಾನೂನು ಬಾಹಿರ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದೆ. ಅದೇ
ರೀತಿ ಒಂದು ನಿಗಮದ ಸಿಬ್ಬಂದಿಯನ್ನು ಹೊಸದಾಗಿ ಸ್ಥಾಪಿಸಲಾದ ಮತ್ತೂಂದು ನಿಗಮಕ್ಕೆ ಅಗತ್ಯಕ್ಕೆ
ಅನುಗುಣವಾಗಿ ವರ್ಗಾವಣೆ ಮಾಡಿದರೆ, ಆ ಸಿಬ್ಬಂದಿ ಯಾವ ನಿಗಮಕ್ಕೆ ವರ್ಗಾವಣೆ ಆಗಿರುತ್ತಾ
ರೋ ಆ ನಿಗಮದ ಸಿಬ್ಬಂದಿಯಾಗುತ್ತಾರೆಯೇ ವಿನಃ ಮೊದಲು ಸೇವೆ ಸಲ್ಲಿಸುತ್ತಿದ್ದ ನಿಗಮದ
ಸಿಬ್ಬಂದಿಯಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಷ್ಟಕ್ಕೂ ಕೆಎಸ್‌ಆರ್‌ಟಿಸಿ
ಸಿಬ್ಬಂದಿಯನ್ನು ಕಾನೂನುಪ್ರಕಾರ ಬಿಎಂಟಿಸಿ, ಎನ್‌ ಡಬ್ಲೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿಗೆ ವರ್ಗಾವಣೆಗೆ ಅವಕಾಶವಿಲ್ಲ. ಮೂರೂ ನಿಗಮಗಳು ಕೆಎಸ್‌ಆರ್‌ಟಿಸಿಯ ಉಪ ಸಂಸ್ಥೆಗಳಲ್ಲ. ಅವು ಬೇರೆ ಬೇರೆ ಮತ್ತು ಸ್ವತಂತ್ರ ನಿಗಮಗಳು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?
ಕೆಎಸ್‌ಆರ್‌ಟಿಸಿಯಿಂದ ಬೇರೆ ಸಾರಿಗೆ ನಿಗಮಗಳಿಗೆ ಕ್ಲಾಸ್‌-1 ಮತ್ತು ಕ್ಲಾಸ್‌-2 ಅಧಿಕಾರಿಗಳನ್ನು ನಿಯೋಜನೆಗೆ ಅವಕಾಶ ಮಾಡಿಕೊಡಲು 2000ರ ಆ.5ರಂದು ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿತ್ತು. “ಕ್ಲಾಸ್‌-1 ಹಾಗೂ ಕ್ಲಾಸ್‌-2 ಕೇಡರ್‌ ಅಧಿಕಾರಿಗಳ ನಿರ್ವಹಣೆ ಕೆಎಸ್‌ಆರ್‌ಆರ್‌ಟಿಸಿಯಲ್ಲಿಯೇ ಮುಂದುವರಿಯುತ್ತದೆ. ಆ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಹೊಸದಾಗಿ ರಚನೆಯಾದ ಇತರೆ ಸಾರಿಗೆ ನಿಗಮಗಳಿಗೆ ನಿಯೋಜನೆ ಮಾಡುವ ಅಧಿಕಾರ ಕೆಎಸ್‌ಆರ್‌
ಟಿಸಿ ಹೊಂದಿದೆ. ಎರವಲು ಸೇವೆಗಾಗಿ ನಿಯೋಜನೆ ಗೊಂಡವರು ನಿಯೋ ಜಿತ ನಿಗಮದ ಭತ್ಯೆ ಪಡೆಯಲು ಅವಕಾಶವಿರುವು ದಿಲ್ಲ’ ಎಂದು ಹೇಳಲಾಗಿತ್ತು. ಅದರಂತೆ, 2000ರ ಆದೇಶವನ್ನು ಮುಂದಿ ಟ್ಟುಕೊಂಡು ಅರ್ಜಿದಾರ ಐವರು ಅಧಿಕಾರಿಗಳನ್ನು ಕೆಎಸ್‌ಆರ್‌ಟಿಸಿಯಿಂದ ಬೇರೆ ಸಾರಿಗೆ ನಿಗಮಕ್ಕೆ
ನಿಯೋಜನೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಅಧಿಕಾರಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next