Advertisement

ವೆಡ್ಡಿಂಗ್ ಫೋಟೋಶೂಟ್ ನಲ್ಲಿ ಸಿಂಹದ ಮರಿ ಬಳಕೆ : ಖಂಡನೆ

06:55 PM Mar 13, 2021 | Team Udayavani |

ಲಾಹೋರ್ (ಪಾಕಿಸ್ತಾನ) :  ದಿನದಿಂದ ದಿನಕ್ಕೆ ವೆಡ್ಡಿಂಗ್ ಫೋಟೋಶೂಟ್ ಗಳು ವಿಶೇಷ ರೀತಿಯತ್ತ ಸಾಗುತ್ತಿವೆ. ವಿಶೇಷ ಸ್ಥಳಗಳಿಗೆ ಹೋಗಿ ವಧು-ವರರು ಸುಂದರವಾದ ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳ ಜೊತೆ ನಿಂತು ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಜೋಡಿ ಸಿಂಹದ ಮರಿ ಜೊತೆ ಫೋಟೋ ಶೂಟ್ ಮಾಡಿಸಿದ್ದು, ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಈ ಘಟನೆ ನಡೆದಿರುವುದು ಪಾಕಿಸ್ತಾನದ ಲಾಹೋರ್ ನಲ್ಲಿ. ಫೋಟೋ ಶೂಟ್ ಇಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಕಾರಣ, ಫೋಟೋ ಶೂಟ್ ವೇಳೆ ಆ ಸಿಂಹದ ಮರಿಗೆ ಅರವಳಿಕೆ ಮದ್ದು ಅಥವಾ ಅಮಲು ಬರುವಂತಹ ಪದಾರ್ಥವನ್ನು ನೀಡಲಾಗಿದೆ. ಈ ಕಾರಣಕ್ಕೆ ಪ್ರಾಣಿ ಪ್ರಿಯರು ಈ ಬಗ್ಗೆ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ.

ಫೋಟೋಶೂಟ್ ಅನ್ನು ‘ಸ್ಟುಡಿಯೋ ಅಫ್ಜಲ್’ ಎಂಬುವವರು ಶೇರ್ ಮಾಡಿದ್ದು,  ಸುದ್ದಿಯಾಗುತ್ತಿದ್ದಂತೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲಿಟ್ ಮಾಡಿದ್ದಾರೆ. ಆದ್ರೆ ಫೋಟೋದ ಕೆಲವು ಸ್ಕ್ರೀನ್ ಶಾಟ್ ವೈರಲ್ ಆಗುತ್ತಿವೆ.

ಈ ಬಗ್ಗೆ ಖಂಡನೆ ವ್ಯಕ್ತಪಡಿಸಿರುವ ಪಾಕಿಸ್ತಾನದ ಸ್ವಯಂ ಸೇವಕ ಸಂಸ್ಥೆ ‘ಸೇವ್ ದಿ ಅನಿಮಲ್’ ಪಂಜಾಬ್ ನ ವನ್ಯ ಜೀವಿ ಇಲಾಖೆ ಮೇಲೆ ಗರಂ ಆಗಿದೆ. ಅಲ್ಲದೆ ಈ ಸಿಂಹದ ಮರಿಯನ್ನು ಫೋಟೋಶೂಟ್ ಗೆ ಹೇಗೆ ಕೊಟ್ಟಿರಿ ಎಂದು ತರಾಟೆಗೆ ತೆಗೆದುಕೊಂಡಿದೆ.

Advertisement

ಸದ್ಯ ಈ ವೆಡ್ಡಿಂಗ್‍ ಫೋಟೋ ಶೂಟ್ ಬಗ್ಗೆ ನೆಟ್ಟಿಗರು ಗರಂ ಆಗಿದ್ದು, ಈ ರೀತಿ ಮುಂದೆ ನಡೆಯಬಾರದು ಎಂದು ಅಲ್ಲಿನ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next