Advertisement

Delhi Metro: ಮೆಟ್ರೋದಲ್ಲಿ ಲಿಪ್‌ಲಾಕ್‌ ಕಿಸ್ ಮಾಡಿದ ಜೋಡಿ: ವಿಡಿಯೋ ವೈರಲ್

02:00 PM May 10, 2023 | Team Udayavani |

ದೆಹಲಿ: ದೇಶದ ರಾಜಧಾನಿ ದೆಹಲಿ ಮೆಟ್ರೋ ರೈಲು ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಮೆಟ್ರೋದಲ್ಲಿ ಏನೇ ನಡೆದರೂ ಅದು ವೈರಲ್‌ ಆಗುತ್ತದೆ. ಇದೀಗ ಅಂಥದ್ದೇ ವೈರಲ್‌ ಘಟನೆಯೊಂದು ದೆಹಲಿ ಮೆಟ್ರೋದಲ್ಲಿ ನಡೆದಿದೆ.

Advertisement

ಯುವಕ – ಯುವತಿ ಜೋಡಿಯೊಂದು ಮೆಟ್ರೋದಲ್ಲಿ ಕೂತುಕೊಂಡು ರೊಮ್ಯಾನ್ಸ್‌ ಮಾಡಿದ್ದಾರೆ. ಯುವತಿ ಯುವಕನ ತೊಡೆಯ ಮೇಲೆ ಮಲಗಿದ್ದಾರೆ. ಯುವಕ ಅವಳ ತುಟಿಯನ್ನು ಚುಂಬಿಸಿದ್ದಾನೆ. ಲಿಪ್‌ ಲಾಕ್‌ ನಲ್ಲಿ ನಿರತರಾದ ಜೋಡಿಯ ವಿಡಿಯೋವನ್ನು ಸಹ ಪ್ರಯಾಣಿಕರು ತೆಗೆದಿದ್ದು, ದೆಹಲಿ ಮೆಟ್ರೋವಿನ ಮತ್ತೊಂದು ಅವಾಂತರ ಈಗ ವೈರಲ್‌ ಆಗಿದೆ.

ಇಂಟರ್‌ ನೆಟ್‌ ನಲ್ಲಿ ಜೋಡಿ ರೊಮ್ಯಾನ್ಸ್‌ ವಿಡಿಯೋ ಬಗ್ಗೆ ನಾನಾ ಕಮೆಂಟ್‌ ಗಳು ಬಂದಿದೆ. ಇವರು ನಾಚಿಕೆಯಿಲ್ಲದ ಜನ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. “ಹಾಗಾದರೆ ಇದು ನಿಜವಾದ ಪ್ರೀತಿಯೇ ಅಥವಾ ಸೋಷಿಯಲ್ ಮೀಡಿಯಾಕ್ಕಾಗಿಯೇ? ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಯುವಕ ಯುವತಿಗೆ ಸಿಪಿಆರ್‌ ನೀಡುತ್ತಿದ್ದಾನೆ ಎಂದು ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮೆಟ್ರೋದಲ್ಲಿ ಯುವಕನೊಬ್ಬ ಆಶ್ಲೀಲ ವಿಡಿಯೋ ನೋಡುತ್ತಾ, ಹಸ್ತಮೈಥುನ ಮಾಡುತ್ತಿದ್ದ ಘಟನೆ ನಡೆದಿದ್ದು, ಇದಕ್ಕೂ ಮುನ್ನ ಯುವತಿಯೊಬ್ಬಳು ಬಿಕಿಸಿ ಧರಿಸಿಕೊಂಡು ಮೆಟ್ರೋ ಪ್ರಯಾಣ ಮಾಡಿದ್ದಳು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next