Advertisement

ಹುಬ್ಬಳ್ಳಿ: ಮಗುವಿನ ಶವ ಬಿಟ್ಟು ಆಸ್ಪತ್ರೆಯಿಂದ ಪರಾರಿಯಾದ ದಂಪತಿ

10:01 AM Aug 23, 2019 | Team Udayavani |

ಹುಬ್ಬಳ್ಳಿ: ಮಗುವಿನ ಸಾವಿನ ಸುದ್ದಿ ಕೇಳಿದ ದಂಪತಿ ಆಸ್ಪತ್ರೆಯಲ್ಲೆ ಮಗವಿನ ಶವ ಬಿಟ್ಟು ಪರಾರಿಯಾಗಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ‌ .

Advertisement

ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ದಂಪತಿ ಕರೆ ತಂದಿದ್ದು, ಮಗು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ದಂಪತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ದಂಪತಿಗಳು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ದಂಪತಿಗಳು ಕಾಣದ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡಿದಾಗ ದಂಪತಿಗಳ ಮಾಹಿತಿ ಬಯಲಿಗೆ ಬಂದಿದೆ‌.

ಮಗುವಿನ ಶವ ಬಿಟ್ಟು ಪರಾರಿಯಾದ ಹಿನ್ನೆಲೆಯಲ್ಲಿ ಕಿಮ್ಸ ವೈದ್ಯರು ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಮಗುವನ್ನು ದಾಖಲಿಸುವ ಸಂದರ್ಭದಲ್ಲಿ ಹೆಸರು ನೊಂದಾಯಿಸಿದ ಮಾಹಿತಿಯನ್ನು ಪೊಲೀಸರು ಪರಿಶೀಲಿಸಿದಾಗ ದಾದಪೀರ್ ಶೇಕ್ ಹಾಗೂ ಪೂಜಾ ಠಾಕೂರ್ ಎಂಬುವುದು ಗೊತ್ತಾಗಿದೆ.

ನಾಲ್ಕುದ ವರ್ಷ ಮಗುವಾಗಿದ್ದು, ದಂಪತಿಗಳು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮಗುವಿನ ಸಾವಿನ ಬಗ್ಗೆ ಅನುಮಾನಗಳು ಶುರುವಾಗಿವೆ.
ದಂಪತಿಗಳು ನೀಡಿರುವ ವಿಳಾಸ ಪೊಲೀಸರು ತಡಕಾಡಿದ್ದು, ಒಂದು ವಾರದ ಹಿಂದೆ ಗೋಕುಲ ಗ್ರಾಮದ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದಂಪತಿಗಳು ಅಥವಾ ಮಗುವಿನ ಪಾಲಕರು ಇಲ್ಲದ ಕಾರಣ ಶವ ಪಂನಾಮೆ ಮಾಡಿಲ್ಲ. ಮಗುವಿನ ಕೆನ್ನೆ ಮೇಲೆ ರಕ್ತ ಹೆಪ್ಪುಗಟ್ಟಿದ ಕಲೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಗುವಿನ ಸಾವಿನ ಬಗ್ಗೆ ಹಲವು ಅನುಮಾನಗಳು ಉದ್ಭವಿಸಿವೆ.

ನೇಕಾರ ನಗರ ನಿವಾಸಿಯಾಗಿರುವ ದಾದಪೀರ್ ಎಪಿಎಂಸಿ‌ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next