Advertisement

ಮಂಗಳೂರು: ಪೊಲೀಸ್ ಕಮಿಷನರ್ ರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ದಂಪತಿ!

01:29 PM Aug 17, 2021 | Team Udayavani |

ಸುರತ್ಕಲ್: ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಳಾಯಿ ಚಿತ್ರಾಪುರಯಲ್ಲಿ ನಡೆದಿದೆ.

Advertisement

ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿ ಮೊದಲು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ:ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ ನಿಧನ

ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಶಶಿಕುಮಾರ್ ಅವರು ಕೂಡಲೇ ಕಾರ್ಯ ಪೃವೃತ್ತರಾಗಿ ಸ್ಥಳಕ್ಕೆ ಪೊಲೀಸ್ ಪಡೆ ಕಳುಹಿಸಿದರೂ ಅದಾಗಲೇ ದಂಪತಿ ನೇಣಿಗೆ ಶರಣಾಗಿದ್ದರು.

Advertisement

ಪತ್ನಿ ಗುಣವತಿ ಸುವರ್ಣ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಮತ್ತು ಇತರ ಭಾಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನನ್ನ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೂ ಭಯ ಕಾಡುತ್ತಿದೆ. ನನ್ನ ಗಂಡನಿಗೂ ಮೂರು ದಿನದಿಂದ ಕೋವಿಡ್ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ.

ನನ್ನತಂದೆ ತಾಯಿ ತಮ್ಮನಿಗೆ ಕೋವಿಡ್ ಸೋಂಕು ತಾಗಿ ಈಗ ಚೇತರಿಸಿಕೊಂಡಿದ್ದಾರೆ. ತಾಯಿ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆ ಕೊಡಬಾರದು. ನಾನು ಮತ್ತು ಗಂಡ ನಿರ್ಧರಿಸಿದ ಪ್ರಕಾರ ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರು ನಮ್ಮ ಅಂತ್ಯಕ್ರಿಯೆಯನ್ನು ನಡೆಸಬೇಕು. ಅದಕ್ಕಾಗಿ ಒಂದು ಲಕ್ಷ ರೂ. ಇಟ್ಟಿದ್ದೇವೆ ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next