Advertisement

3 ವರ್ಷದ ಮಗುವಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

03:40 PM Oct 16, 2017 | udayavani editorial |

ಅಸನೋಲ್‌, ಪಶ್ಚಿಮ ಬಂಗಾಲ : 3 ವರ್ಷದ ತಮ್ಮ ಮಗುವಿಗೆ ಬೆಂಕಿ ಹಚ್ಚಿ ಕೊಂದ ದಂಪತಿ ಆ ಬಳಿಕ ತಮ್ಮ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ವರ್ಧಮಾನ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಶೇರ್‌ತಲಾವೋ ಗ್ರಾಮದಲ್ಲಿ ನಿನ್ನೆ ಭಾನುವಾರ ರಾತ್ರಿ ಮೊಹಮ್ಮದ್‌ ಶಾಹೀದ್‌ (37) ಮತ್ತು ತಬಸ್ಸಂ ಪರ್ವೀನ್‌ (20) ದಂಪತಿ, ತಮ್ಮ 3 ವರ್ಷದ ಮಗು ತೈಬಾ ಖತೂನ್‌ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಬಳಿಕ ತಮ್ಮ ಮೇಲೆ ಕೂಡ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿತೆಂದು ವರದಿಯಾಗಿದೆ.

ಎಲ್ಲ ಮೂವರ ದೇಹ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ವಿವಾದವೇ ಈ ಘಟನೆಗೆ ಕಾರಣ ಇರಬಹುದೆಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next