Advertisement

ಕೋಲ್ಕತಾ ಮೆಟ್ರೋದಲ್ಲಿ ತಬ್ಬಿಕೊಂಡಿದ್ದ ಜೋಡಿಗೆ ಸಹಪ್ರಯಾಣಿಕರ ಗೂಸಾ 

02:49 PM May 02, 2018 | Team Udayavani |

ಕೋಲ್ಕತಾ : ಇಲ್ಲಿನ ಡಮ್‌ಡಮ್‌ ಮೆಟ್ರೋ ಸ್ಟೇಷನ್‌ ಬಳಿ  ತಬ್ಬಿಕೊಂಡು ಪ್ರಯಾಣಿಸುತ್ತಿದ್ದ  ಪ್ರೇಮಿಗಳಿಗೆ ಸಹ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು , ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆಯೂ ನಡೆದಿದೆ. 

Advertisement

ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯ ವರ್ತನೆಗೆ ವೃದ್ಧರೊಬ್ಬರು ಆಕ್ಷೇಪ ವ್ಯಕ್ತ ಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಯುವಕ ವೃದ್ಧನ ಮೇಲೆ ಎಗರಾಡಿದ್ದು, ಇತರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿ ಥಳಿಸಲಾಗಿದೆ. ಯುವಕನನ್ನು ಬಿಡಿಸಲು ಬಂದ ಯುವತಿಗೂ ಸಾರ್ವಜನಿಕರು ಥಳಿಸಿದ್ದಾರೆ. 

ಘಟನೆ ಖಂಡಿಸಿ  ವಿದ್ಯಾರ್ಥಿಗಳ ಗುಂಪೊಂದು ನೈತಿಕ ಪೊಲೀಸ್‌ಗಿರಿ ನಡೆದಿದೆ ಎಂದು ಮೆಟ್ರೋ ಸ್ಟೇಷನ್‌ ಹೊರಗೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. 

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next