Advertisement
ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಸುಳ್ಯ ವತಿಯಿಂದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಗಣ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸಂವಿಧಾನದ ನಾಲ್ಕು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಇವುಗಳ ಮೇಲೆ ನಂಬಿಕೆ ಮುಖ್ಯ. ಇವುಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳದಂತೆ ಎಲ್ಲರೂ ಹೊಣೆಗಾರಿಕೆ ನಿಭಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದು, ದೇಶದ ಸಾರ್ವಭೌಮತೆ ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.
Related Articles
Advertisement
ಕೃಷಿಕರಿಗೆ ಸಮ್ಮಾನ2017-18ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರಾದ ರಾಧಾಕೃಷ್ಣ ದಾಸ್ ಉಬರಡ್ಕ (ಜೇನು ಕೃಷಿ) ಪಿ.ವಿ. ರಮೇಶ್ ಅರಂತೋಡು (ತೋಟಗಾರಿಕೆ), ಶಿವರಾಮ ಎಣ್ಮೂರು (ಹೈನುಗಾರಿಕೆ), ಚಂದ್ರಶೇಖರ ಡಿ. ಎಸ್. ಅಮರ ಮುಟ್ನೂರು ( ಸಾವಯವ ಕೃಷಿ), ಚಂದ್ರಶೇಖರ ಕೇನಾಜೆ, ರಾಮ ಮಲೆ ಪರ್ವತಮುಖೀ ಹಾಗೂ ಸುಶೀಲಾ ಪೂಜಾರಿ ಮನೆ (ಭತ್ತದ ಬೆಳೆ) ಅವರನ್ನು ಸಮ್ಮಾನಿಸಲಾಯಿತು. ಬೆಳಗ್ಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು, ಗೃಹ ರಕ್ಷಕ ದಳದ ಸಿಬಂದಿ, ಪೊಲೀಸರ, ಹಾಗೂ ಸ್ಕೌಟ್ಸ್ ಎಂಡ್ ಗೈಡ್ಸ್, ಎನ್ನೆಸೆಸ್ ತಂಡ, ಬುಲ್ ಬುಲ್ಸ್ ಘಟಕ ಹಾಗೂ ವಿದ್ಯಾರ್ಥಿ ಗಳ ಆಕರ್ಷಕ ಪಥಸಂಚಲ ನಡೆಯಿತು. ತಹಸಿಲ್ದಾರ್ ಬಿ.ಎಂ ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವದ ಸಂದೇಶ ವಾಚಿಸಿದರು. ರೋಟರಿ ಪ್ರಾ. ಶಾಲೆ, ಶಾರದಾ ಪ್ರೌಢಶಾಲೆ, ಜಟ್ಟಿಪಳ್ಳ ಪ್ರಾ. ಶಾಲೆ, ಪ.ಪೂ. ಕಾಲೇಜು, ಸುಳ್ಯ, ಗಾಂಧಿನಗರ ಪ್ರೌಢಶಾಲೆ, ಗಾಂಧಿನಗರ ಪ್ರಾ. ಶಾಲೆ, ಸುಳ್ಯ ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಕೆಂಪ ಲಿಂಗಪ್ಪ ಸ್ವಾಗತಿಸಿ, ಅಕ್ಷರ ದಾಸೋಹ ಸಂಯೋಜಕ ಚಂದ್ರಶೇಖರ ಪೆರಾಲ್ ವಂದಿಸಿದರು. ಅಚ್ಯುತ ಅಟ್ಲೂರು ನಿರೂಪಿಸಿದರು.