Advertisement

ಸಾರಂಗ್‌ಖೇಡಾದಲ್ಲಿ ದೇಶದ ಮೊದಲ ಹಾರ್ಸ್‌ ಮ್ಯೂಸಿಯಂ

11:49 AM Dec 10, 2017 | Team Udayavani |

ನಂದುರ್ಬಾರ್‌: ಏಷ್ಯಾದ ಅತ್ಯಂತ ಪುರಾತನ ಕುದುರೆ ಉತ್ಸವಗಳಲ್ಲಿ ಒಂದಾದ ಜಿಲ್ಲೆಯ ಸಾರಂಗ್‌ಖೇಡಾ ಗ್ರಾಮದ ಪ್ರಸಿದ್ಧ ಚೇತಕ್‌ ಉತ್ಸವಕ್ಕೆ ಶುಕ್ರವಾರ ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್‌ ಅವರು ಭೇಟಿ ನೀಡಿದರು. ಇದೇ ಸಂದರ್ಭಲ್ಲಿ ಸಾರಂಗ್‌ಖೇಡಾ ಗ್ರಾಮ ದಲ್ಲಿ ಪ್ರಸ್ತಾವಿತ ದೇಶದ ಮೊದಲ ಕುದು ರೆ ವಸ್ತುಸಂಗ್ರಹಾಲಯಕ್ಕೆ ಅವರು ಭೂ ಮಿ ಪೂಜೆ ನೆರವೇರಿಸಿದರು.

Advertisement

ಅನಂತರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾ ತನಾ ಡಿದ ಸಿಎಂ ಫಡ್ನವೀಸ್‌ ಅವರು, ಸಾರಂ ಗ್‌ಖೇಡಾದಲ್ಲಿ ತಲೆ ಎತ್ತಲಿರುವ ಕುದುರೆ ವಸ್ತುಸಂಗ್ರಹಾಲಯವು ವಿಶ್ವ ಆಕರ್ಷ ಣೆಯ ಕೇಂದ್ರವಾಗಲಿದೆ. ಇದರೊಂದಿಗೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಸಾರಂಗ್‌ಖೇಡಾದ ಹೆಸರು ಜಾಗತಿಕ ನಕ್ಷೆಯಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದರು.

ಮಹಾಭಾರತ ಕಾಲದ ಕೆಲವು ಅವಶೇಷಗಳು ಈ ಕ್ಷೇತ್ರದಲ್ಲಿ ಕಾಣಲು ಸಿಕ್ಕಿವೆ. ಸಾರಂಗ್‌ಖೇಡಾದ ಕುದುರೆ ಮೇಳವು 300 ವರ್ಷ ಹಳೆಯ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕುದುರೆ ವಸ್ತುಸಂಗ್ರಹಾಲಯವು ದೇಶದಲ್ಲೇ ಅತಿ ಸುಂದರ ವಸ್ತು ಸಂಗ್ರಹಾಲಯವಾಗಿ ಮೂ ಡಿಬರಲಿದೆ ಎಂದೂ ಅವರು ನುಡಿದಿದ್ದಾರೆ.

ಕುದುರೆ ಅಭಿವೃದ್ಧಿ ಮತ್ತು ಸಂಶೋ ಧನಾ ಕೇಂದ್ರ ಹಾಗೂ ಪಶುವೈದ್ಯಕೀಯ ಆಸ್ಪತ್ರೆಯನ್ನು ಶೀಘ್ರದಲ್ಲೇ ಇಲ್ಲಿ ಸ್ಥಾಪಿಸಲಾಗುವುದು ಎಂದೂ ಸಿಎಂ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಫಡ್ನವೀಸ್‌ ಅವ ರೊಂದಿಗೆ ಪ್ರವಾಸೋದ್ಯಮ ಸಚಿವ ಜಯಕುಮಾರ್‌ ರಾವಲ್‌, ಸಂಸದೆ ಡಾ| ಹೀನಾ ಗಾವಿತ್‌, ಪ್ರವಾ ಸೋದ್ಯಮ ಕಾರ್ಯದರ್ಶಿ ನಿತಿನ್‌ ಗಾದ್ರೆ, ಕಂದಾಯ ಆಯುಕ್ತ ಮಹೇಶ್‌ ಜಗದೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಪ್ರತಿ ವರ್ಷ ಡಿಸೆಂಬರ್‌ನಲ್ಲಿ ನಡೆಯುವ ಸಾರಂಗ್‌ಖೇಡಾ ದ ಚೇತಕ್‌ ಕುದುರೆ ಮೇಳಕ್ಕೆ ದೇಶದಾದ್ಯಂತ    ದೊಡ್ಡ -ದೊಡ್ಡ ಕುದುರೆ ವ್ಯಾಪಾರಿಗಳು ಆಗಮಿಸುತ್ತಾರೆ. ಈ ವಾರ್ಷಿಕ ಮೇಳದಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ದೇಶದ ಮೊದಲ ಹಾರ್ಸ್‌ ಮ್ಯೂಸಿಯಂ ನಂದುರ್ಬಾರ್‌ ಜಿಲ್ಲೆಯ ಸಾರಂಗ್‌ಖೇಡಾದಲ್ಲಿ ತಲೆ ಎತ್ತಲಿರುವ ಹಾರ್ಸ್‌ ಮ್ಯೂಸಿಯಂ (ಕುದುರೆ ವಸ್ತುಸಂಗ್ರಹಾಲಯ) ದೇಶದಲ್ಲಿ ಅಂತಹ ಮೊದಲ ಹಾಗೂ ವಿಶ್ವದಲ್ಲಿ ಮೂರನೇ ಮ್ಯೂಸಿಯಂ ಆಗಿರಲಿದೆ.  ಇದರ ನಿರ್ಮಾಣ ಕಾರ್ಯ ಎರಡು ಹಂತಗಳಲ್ಲಿ ಪೂರ್ಣವಾಗಲಿದ್ದು, ಮೊದಲ ಹಂತದ ಅಡಿಯಲ್ಲಿ ಸದ್ಯಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ  ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಂಟಿಡಿಸಿ)ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ತಾಪಿ ನದಿ ತಟದಲ್ಲಿ: ತಾಪಿ ನದಿಯ ತಟದಲ್ಲಿ ಸುಮಾರು 6.5 ಎಕರೆ ಜಮೀನಿ ನಲ್ಲಿ ಹಾರ್ಸ್‌ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಅದು ಗುಮ್ಮಟಾಕಾರದಲ್ಲಿರಲಿದೆ. ಈ  ಸಂಗ್ರಹಾಲಯದಲ್ಲಿ ದೇಶದಾದ್ಯಂತ ಕಾಣಸಿಗುವ ವಿವಿಧ ಜಾತಿಯ ಕುದುರೆಗಳ ಪ್ರತಿಕೃತಿಯನ್ನು ಇಡಲಾಗುವುದು. ಜೊತೆಗೆ ಕುದುರೆಗಳ ಇತಿಹಾಸ ಹಾಗೂ ದೇಶದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಸ್ತುಗಳನ್ನೂ ಅಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಈ ಮ್ಯೂಸಿಯಂ ಆರ್ಟ್‌ ಗ್ಯಾಲರಿ, ಪ್ರದರ್ಶನ ಸ್ಥಳ, ಆಡಿಯೋ ವಿಶುವಲ್‌ ರೂಮ್‌, ರಿಸೆಪ್ಶನ್‌ ಡೆಸ್ಕ್, ಫುಡ್‌ ಸ್ಟಾಲ್‌, ವೈಟಿಂಗ್‌ ರೂಂ ಹಾಗೂ  ಇತರ ಮಳಿಗೆಗಳನ್ನು ಹೊಂದಿರಲಿದೆ.

4.98 ಕೋ.ರೂ. ನಿಧಿ ಮಂಜೂರು ಸರಕಾರವು ಮ್ಯೂಸಿಯಂಗೆ 4.98 ಕೋ.ರೂ. ನಿಧಿ ಮಂಜೂರು ಮಾಡಿದ್ದು, ಅದರಲ್ಲಿ 1.25 ಕೋ.ರೂ. ಬಿಡುಗಡೆ ಮಾಡ ಲಾಗಿದೆ. ನಿರ್ಮಾಣದ ಎರಡನೇ ಹಂತದಲ್ಲಿ ಸುಮಾರು 5 ಕೋ.ರೂ. ಮೊತ್ತದ ಕೆಲಸಗಳು ನಡೆಯಲಿವೆ ಎಂದು ಎಂಟಿಡಿಸಿ ಅಧಿಕಾರಿ ನುಡಿದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಮ್ಯೂಸಿಯಂನ ಮುಖ್ಯ ದ್ವಾರ,  ಪರಿಸರದ, ಉದ್ಯಾನ ಮತ್ತು ತಾಪಿ ನದಿಯ ತಟವನ್ನು ಆಕರ್ಷಣೀಯ ಹಾಗೂ ಸೌಂದಯೀìಕರಣ ಮಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

ಜವಾಬ್ದಾರಿ ಗ್ರಾಮ ಪಂಚಾಯತ್‌ಗೆ
ಮ್ಯೂಸಿಯಂ ನಿರ್ಮಾಣ ಕಾರ್ಯ ಪೂ ರ್ಣಗೊಂಡ ಬಳಿಕ ಸಾರಂಗ್‌ಖೇಡಾ ಗ್ರಾ ಮ ಪಂಚಾಯತ್‌ಗೆ  ಅದರ  ನಿರ್ವಹಣೆಯ  ಜವಾಬ್ದಾರಿಯನ್ನು ವಹಿಸಲಾಗುವುದು. ಪ್ರ ವಾಸಿಗರ ಶುಲ್ಕ ದರವನ್ನು ಗ್ರಾಮ ಪಂಚಾ ಯತ್‌ ನಿರ್ಣಯಿಸಲಿದೆ. ಈ ಮ್ಯೂಸಿಯಂ ನಿಂದ ಸಾರಂಗ್‌ಖೇಡಾ ಕುದುರೆ ಮೇಳಕ್ಕೆ ಹೊಸ ಮೆರುಗು ಸಿಗಲಿದೆ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next