Advertisement

ಶಿಕ್ಷಣ ಕ್ರಾಂತಿಯಿಂದ ದೇಶ ರಕ್ಷಣೆ: ಹರೀಶ್‌ ಬಿಜತ್ರೆ 

07:50 AM Aug 22, 2017 | Team Udayavani |

 ಕುಂಬ್ರ : ಶಿಕ್ಷಣ ಕ್ರಾಂತಿ ಮೂಲಕ ದೇಶದ ರಕ್ಷಣೆಯಾಗಬೇಕು ಎಂದು ತಾ.ಪಂ. ಸದಸ್ಯ ಹರೀಶ್‌ ಬಿಜತ್ರೆ ತಿಳಿಸಿದರು. 

Advertisement

ದ.ಕ.ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು, ದ.ಕ. ಜಿ.ಪಂ. ಮಾ.ಹಿ.ಪ್ರಾ.ಶಾಲೆ ಕುಂಬ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ಮಕ್ಕಳಲ್ಲಿ ಆಡಗಿರುವ ಪ್ರತಿಭೆ ಗುರುತಿಸುವಲ್ಲಿ  ಇಂತಹ ಕಾರ್ಯ ಕ್ರಮಗಳು ಮಹತ್ವವಾಗಿವೆ. ಪ್ರತಿಭೆಯನ್ನು  ಗುರುತಿಸಿ ಪ್ರೋತ್ಸಾಹಿ ಸುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯಕ್ರಮವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮಾಡುವಲ್ಲಿ ಪೂರಕ ವಾಗಿದೆ. ದೇಶದ ರಕ್ಷಣೆ ದೃಷ್ಟಿಯಿಂದ ಚೀನೀ ವಸ್ತುಗಳನ್ನು ಖರೀದಿಸದಂತೆ ಮನವಿ ಮಾಡಿ ಶಿಕ್ಷಣ ಕ್ರಾಂತಿ ಮೂಲಕ ರಾಷ್ಟ್ರದ ರಕ್ಷಣೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಜಾಗೃತಿ ಮೂಡಿಸಿ
ಒಳಮೊಗ್ರು ಗ್ರಾ.ಪಂ. ಸದಸ್ಯ ಪಿ.ಎ. ಮಹಮ್ಮದ್‌ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಜಾಗೃತಿ ಮೂಡಿ ಸುವಂತಾಗಲಿ ಮುಂದೆ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು. ಸಭೆಯಿಂದ ಕುಂಬ್ರ ಮಸೀದಿಯ ಅಧ್ಯಾಪಕ  ಅಬ್ದುಲ್‌ ಸತ್ತರ್‌ ಮಾತನಾಡಿ ಶುಭ ಹಾರೈಸಿದರು.

ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನಿರ್ಪಾಡಿ ಅಧ್ಯಕ್ಷತೆ ವಹಿಸಿ , ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಪುತ್ತೂರು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಕುಕ್ಕ ಮಾಸ್ಟರ್‌, ಗ್ರಾ.ಪಂ. ಸದಸ್ಯರಾದ ಶೀನಪ್ಪ ನಾಯ್ಕ, ಸುಂದರಿ, ಬೊಳ್ಳಿಕಳ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ, ಬ್ಯಾಡ್ಮಿಂಟನ್‌ ಕೋಚ್‌ ಪ್ರಕಾಶ್‌ ರೈ ಕೈಕಾರ,  ಎಸ್‌.ಡಿ.ಎಂ.ಸಿ. ಅಧ್ಯಕ್ಷ  ಅಬ್ದಲ್‌ ಸಿದ್ಧಿಕ್‌  ಉಪಸ್ಥಿತರಿದ್ದರು.ಕ್ಲಸ್ಟರ್‌ ಮಟ್ಟದ  10 ಸರಕಾರಿ ಶಾಲೆ ಹಾಗೂ 2 ಅನುದಾನಿತ ಶಾಲೆಯಿಂದ ಸಮಾರು 500 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. 

Advertisement

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಹೆತ್ತವರು, ಶಿಕ್ಷಣಾಭಿಮಾನಿಗಳು ಹಾಗೂ ಅಧ್ಯಾಪಕ ವೃಂದದವರು ಭಾಗ ವಹಿಸಿದರು. ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ  ಶಶಿಕಲಾ ಸ್ವಾಗತಿಸಿ, ಪ್ರಸ್ತಾವಿಸಿದರು. ಶಾಲಾ ಮುಖ್ಯ ಶಿಕ್ಷಕಿ  ಗೋದಾವರಿ ವಂದಿಸಿದರು. ಸಹ ಶಿಕ್ಷಕಿ ಶೋಭಾ  ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next