Advertisement

‘ದೇಶ, ನಾಗರಿಕರಿಗೆ ಯಾವುದೇ ಲಾಭವಾಗಿಲ್ಲ ‘

11:40 AM Nov 09, 2017 | |

ಬಂಟ್ವಾಳ: ಮೋದಿ ಸರಕಾರ ಒಂದು ರೀತಿಯಲ್ಲಿ ತುಘಲಕ್‌ ದರ್ಬಾರ್‌ ನಡೆಸುತ್ತಿರುವ ಸರ್ವಾಧಿಕಾರಿ ಸರಕಾರವಾಗಿದೆ. ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿರುವ ‘ನೋಟ್‌ ಅಪಮೌಲ್ಯ’ ಕ್ರಮವನ್ನು ಸಮರ್ಥಿಸಲು ಕೋಟ್ಯಂತರ ರೂ. ಖರ್ಚು ಮಾಡಲಾಯಿತಾದರೂ ಅದರಿಂದ ದೇಶಕ್ಕೆ, ಯಾವುದೇ ನಾಗರಿಕನಿಗೆ ಒಂದು ಪೈಸೆಯೂ ಲಾಭವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ತಿಳಿಸಿದರು.

Advertisement

ಅವರು ನ. 8ರಂದು ಬಿ.ಸಿ.ರೋಡ್‌ನಲ್ಲಿ ಕಾಂಗ್ರೆಸ್‌ನ ಮುಂಚೂಣಿ ಘಟಕಗಳ ವತಿಯಿಂದ ನೋಟ್‌ ಬ್ಯಾನ್‌ಗೆ ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಕರಾಳ ದಿನ, ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ ಮಾತನಾಡಿ ಬಣ್ಣದ ಮಾತುಗಳಿಂದ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಪೂರೈಸಿದ ನರೇಂದ್ರ ಮೋದಿ ಸರಕಾರ ಒಂದೇ ಒಂದು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಯುಪಿಎ ಸರಕಾರದ ಯೋಜನೆಗಳನ್ನೇ ಕೈಗೆತ್ತಿಕೊಂಡು ಅದನ್ನೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಪ್ಪು ಹಣವನ್ನು ಬಯಲಿಗೆಳೆಯಲು ಮೋದಿಗೆ ಸಾಧ್ಯವಾಗುತ್ತಿಲ್ಲ. ಆಡಳಿತ ವೈಫಲ್ಯ ಮರೆಮಾಚಲು ಮೋದಿ ಸರಕಾರ ಮಾಧ್ಯಮಗಳನ್ನು ಕೊಂಡುಕೊಳ್ಳುವ ಕಾರ್ಯಕ್ಕೂ ಕೈ ಹಾಕುತ್ತಿದೆ ಎಂದು ಆರೋಪಿಸಿದರು.

ಜಿ.ಪಂ. ಸದಸ್ಯೆ ಮಂಜುಳಾ ಮಾವೆ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್‌ ಎಲ್‌. ರೋಡ್ರಿಗಸ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಜನಾರ್ದನ ಚಂಡ್ತಿಮಾರ್‌ ಮೊದಲಾದವರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.

Advertisement

ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಜಿ ಬಿ.ಎಚ್‌. ಖಾದರ್‌, ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಸದಸ್ಯೆ ವಸಂತಿ ಚಂದಪ್ಪ, ವಾಸು ಪೂಜಾರಿ, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ, ಅರಾಧನ ಸಮಿತಿ ಸದಸ್ಯ ಯೂಸುಫ್‌ ಕರಂದಾಡಿ, ತಾ.ಪಂ. ಸದಸ್ಯೆ ಗಾಯತ್ರಿ ಆರ್‌. ಸಪಲ್ಯ, ಬಿ.ಕೆ. ಇದಿನಬ್ಬ, ಪಕ್ಷದ ಪ್ರಮುಖರಾದ ಶರೀಫ್‌ ಶಾಂತಿಅಂಗಡಿ, ಜನಾರ್ದನ ಚೆಂಡ್ತಿಮಾರ್‌, ವಸಂತಿ ಚಂದಪ್ಪ, ಅಬೂಬಕ್ಕರ್‌ ಸಿದ್ದಿಕ್‌ ಗುಡ್ಡೆಅಂಗಡಿ, ಪ್ರಶಾಂತ್‌ ಕುಲಾಲ್‌, ಗಂಗಾಧರ್‌, ಮುಹಮ್ಮದ್‌ ನಂದಾವರ, ಸಿದ್ದೀಕ್‌ ಸರವು, ಚಿತ್ತರಂಜನ್‌ ಶೆಟ್ಟಿ ಬೊಂಡಾಲ, ಮಹೇಶ್‌ ನಾಯಕ್‌ ಖಂಡಿಗ, ವೆಂಕಪ್ಪ ಪೂಜಾರಿ, ಶ್ರೀಧರ್‌ ರೈ, ಮಧುಸೂಧನ ಶೆಣೈ, ಐಡಾ ಸುರೇಶ್‌, ಹಸೈನಾರ್‌, ಆದಂ ಪಲ್ಲ, ಕಾಸಿಂ ಶಾಂತಿಅಂಗಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಅಲಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಪ್ರತಿಭಟನೆಯಲ್ಲಿ ಎಲ್ಲರೂ ಕಪ್ಪು ಶಾಲು ಹಾಕಿಕೊಳ್ಳುವ ಮೂಲಕ ನೋಟ್‌ಬ್ಯಾನ್‌ ಕರಾಳ ದಿನಾಚರಣೆ ಆಚರಿಸಿದರು.

ಬಡ ಜನರ ಮೇಲೆ ಗದಾ ಪ್ರಹಾರ
ಕಪ್ಪು ಹಣದ ಹೆಸರಿನಲ್ಲಿ ಮೋದಿ ಸರಕಾರ ನೋಟ್‌ಅಪಮೌಲ್ಯ ನಡೆಸಿ ಜನರ ಮುಂದೆ ಬೆತ್ತಲಾಗಿದೆ. ನೋಟ್‌ ಅಪಮೌಲ್ಯದಿಂದ ದುಡಿದು ತಿನ್ನುವ ಬಡ ಜನರ ಮೇಲೆ ಸವಾರಿ ನಡೆಸಿದರೇ ಹೊರತು ದೊಡ್ಡ ದೊಡ್ಡ ಕುಳಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದೀಗ ಪರಿವರ್ತನೆ ಯಾತ್ರೆಯ ಹೆಸರಿನಲ್ಲಿ ರಾಜ್ಯ ಬಿಜೆಪಿ ನಾಯಕರು ಮತ್ತೂಂದು ನಾಟಕಕ್ಕೆ ಯತ್ನಿಸುತ್ತಿದ್ದಾರೆ.
ರಮಾನಾಥ ರೈ, ಉಸ್ತುವಾರಿ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next