Advertisement

ಮತ ಎಣಿಕೆ ಬಿರುಸು: ಮತ ಕೇಂದ್ರದ ಹೊರಗೆ ಕೈ ಕಮಲ ಶಾಲ್ ಸೇಲ್ !

11:08 AM May 13, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವೇಗಗತಿಯಲ್ಲಿ ಸಾಗುತ್ತಿದ್ದು, 6 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ಮತ ಎಣಿಕೆ ಕೇಂದ್ರದ ಹೊರಗೆ ಕೈ ಕಮಲ ಶಾಲ್ ಸೇಲ್ ಭರ್ಜರಿಯಾಗಿ ನಡೆಯುತ್ತಿದೆ.

Advertisement

ಇಸ್ಮಾಯಿಲ್ ಜೆಪ್ಪು ಶಾಲು ಮಾರಾಟದಲ್ಲಿ ಬ್ಯುಸಿ ಆಗಿರುವವರು. ಇವರು ಕಳೆದ ಹತ್ತು ವರ್ಷಗಳಿಂದ ಚುನಾವಣೆ, ಪ್ರಚಾರ ಸೇರಿದಂತೆ ನಾಮಪತ್ರ ಸಲ್ಲಿಕೆ ಯಾವುದೇ ರಾಜಕೀಯ ಪ್ರಚಾರ ಕಾಲದಲ್ಲಿ ಕಾಣಸಿಗುವ ವ್ಯಕ್ತಿ. ಈ ಬಾರಿಯು ಅವರು ಎಲ್ಲಾ ಪಕ್ಷಗಳ ಶಾಲುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next