Advertisement

ಚಳಿಗಾಲದ ಅಧಿವೇಶನಕ್ಕೆ ಮತ್ತೆ ಕೋಟಿಗಳ ಲೆಕ್ಕ

06:00 AM Dec 05, 2018 | |

ಬೆಳಗಾವಿ: ಕುಂದಾನಗರಿ ಬೆಳಗಾವಿ ಮತ್ತೂಂದು ಚಳಿಗಾಲದ ಅಧಿವೇಶನಕ್ಕೆ ಸಜ್ಜಾಗಿದೆ. ಸಮ್ಮಿಶ್ರ ಸರಕಾರಕ್ಕೆ ಸುವರ್ಣ ವಿಧಾನಸೌಧದಲ್ಲಿ ಇದು ಮೊದಲ ಅಧಿವೇಶನ. ಹೀಗಾಗಿ, ಅಧಿವೇಶನದ ಬಗ್ಗೆ ಉತ್ತರ ಕರ್ನಾಟಕದ ಭಾಗದ ಜನರಲ್ಲಿ ಸಾಕಷ್ಟು 
ಕುತೂಹಲ ಮೂಡಿದೆ. ಕಳೆದ ಅಧಿವೇಶನದ ಸಮಯದಲ್ಲಿ ಸಾಕಷ್ಟು ದುಂದು ವೆಚ್ಚ ಮಾಡಲಾಗಿದೆ. ಹೆಚ್ಚು ಹಣ ಖರ್ಚು ಮಾಡಿದರೂ ಸಾಕಷ್ಟು ಲೋಪದೋಷಗಳಿದ್ದವು ಎಂಬ ದೂರುಗಳ ಹಿನ್ನೆಲೆಯಲ್ಲಿ ಸರಕಾರ ಆಧಿವೇಶನ ಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿ ಅದರ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು ಸೂಚಿಸಿರುವದು ಈ ಅಧಿವೇಶನದ ವಿಶೇಷ.

Advertisement

ಸರಕಾರ ಈ ಬಾರಿ ಖರ್ಚು ವೆಚ್ಚದ ಹಣವನ್ನು ನೆಫ್ಟ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಪಾವತಿ ಮಾಡಲು ನಿರ್ಧರಿಸಿದೆ. ಇದರ ಜೊತೆಗೆ, ಜಿಎಸ್‌ಟಿ ಬಿಲ್‌ ಕಡ್ಡಾಯಗೊಳಿಸಿದೆ. ಪ್ರತಿ ಬಾರಿ ಅಧಿವೇಶನಕ್ಕೆ 10 ಕೋಟಿ ರೂ.ಗಳಿಗೂ ಅಧಿಕ ಹಣ ವೆಚ್ಚವಾಗುತ್ತಿದೆ.
ಅದರಲ್ಲಿ ಬಹುಪಾಲು ವೆಚ್ಚವಾಗುವುದು ವಸತಿ ಹಾಗೂ ಊಟಕ್ಕೆ. ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಸೇರಿದಂತೆ ಸುಮಾರು ಎಂಟು ಸಾವಿರ ಸಿಬ್ಬಂದಿಗಳಿಗೆ ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೂ ಸ್ವಂತ ಕಟ್ಟಡ ಇರದೇ ಇರುವ ಕಾರಣ ಎಲ್ಲವನ್ನೂ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು ಅದಕ್ಕೆ ಹಣ ಪಾವತಿಸಲಾಗುತ್ತಿದೆ.
ಈ ಬಾರಿಯ ಅಧಿವೇಶನಕ್ಕೆ ಸರಕಾರ 21 ಕೋಟಿ ರೂ.ತೆಗೆದಿಟ್ಟಿದೆ. ಅಧಿವೇಶನದ ಸಂದರ್ಭ ಗಣ್ಯರಿಗೆ ವಸತಿ-ಊಟದ ವ್ಯವಸ್ಥೆ, ಸಾರಿಗೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಈ ಅನುದಾನ ಬಳಕೆ ಮಾಡಲಾಗುವುದು ವಸತಿ ವ್ಯವಸ್ಥೆ ಸಂಬಂಧ ಈಗಾಗಲೇ ಹೋಟೆಲ್‌ ಮಾಲೀಕರ ಸಭೆ ನಡೆಸಲಾಗಿದೆ. ಬೆಳಗಾವಿ ಜತೆಗೆ ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧ ಹೊಟೇಲ್‌ಗ‌ಳಲ್ಲಿ ಸುಮಾರು
1,600 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಭರದ ಸಿದ್ದತಾ ಕಾರ್ಯ: ವಿಧಾನಸೌಧ ನಿರ್ವಹಣೆ, ರಸ್ತೆಗಳ ದುರಸ್ತಿಗೆ ಸುಮಾರು ಒಂದು ಕೋಟಿ ವೆಚ್ಚ, ಸೌಧದ ಹೊರಗಡೆ ಊಟದ ವ್ಯವಸ್ಥೆ ಹಾಗೂ ಪ್ರತಿಭಟನಾ ಸ್ಥಳದಲ್ಲಿ ಪೆಂಡಾಲ್‌ ವ್ಯವಸ್ಥೆಗೆ ಸುಮಾರು 75 ಲಕ್ಷ ರೂ. ವೆಚ್ಚ ತಗಲುವ ಅಂದಾಜಿದೆ. ವಿಧಾನಸೌಧದ ಸ್ವತ್ಛತೆ ಹಾಗೂ ದುರಸ್ತಿ ಕಾರ್ಯಗಳಿಗಾಗಿ ಸುಮಾರು 400 ರಿಂದ 500 ಕೆಲಸಗಾರರನ್ನು ತೊಡಗಿಸಲಾಗಿದೆ ಎಂದು
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜನಿಯರ್‌ ಸಂಜೀವಕುಮಾರ ಹುಲಕಾಯಿ ತಿಳಿಸಿದ್ದಾರೆ. ಕಳೆದ ವರ್ಷ ರಸ್ತೆಗಳ ದುರಸ್ತಿ, ಸ್ವಚ್ಛತೆ ಹಾಗೂ ವೃತ್ತಗಳ ಅಭಿವೃದಿಟಛಿಗಾಗಿ 35 ಲಕ್ಷ ರೂ.ವೆಚ್ಚ ಮಾಡಿದ್ದ ಪಾಲಿಕೆ ಈ ಬಾರಿಯೂ ಅದೇ ಪ್ರಮಾಣದಲ್ಲಿ
ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಿದೆ. ಪೊಲೀಸ್‌ ಸಿಬ್ಬಂದಿಗಾಗಿ, ಪ್ರತಿಭಟನೆ ಸ್ಥಳ ಹಾಗೂ ಸುವರ್ಣ ವಿಧಾನಸೌಧದ ಬಳಿ ಸೇರಿದಂತೆ ಒಟ್ಟು 80 ಸಂಚಾರಿ ಶೌಚಾಲಯಗಳನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತ ಶಶಿಧರ
ಕುರೇರ. ಹಾಳಾಗಿರುವ ರಸ್ತೆಗಳ ದುರಸ್ತಿ ಹಾಗೂ ವೃತ್ತಗಳ ಸೌಂದರೀಕರಣಕ್ಕೆ ವಿಶೇಷ ಅನುದಾನ ಕೋರಿ ಮಹಾನಗರಪಾಲಿಕೆಯು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ 14.72 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ.

ವಾಸ್ತವ್ಯದ ವಿವರ: ಮುಖ್ಯಮಂತ್ರಿಗಳು ಮತ್ತು ಅವರ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಪ್ರವಾಸಿ ಮಂದಿರ; ವಿಧಾನಸಭೆ ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ವಿಟಿಯು ಅತಿಥಿ ಗೃಹ; ಸಚಿವರು, ವಿಧಾನಸಭೆ ವಿರೋಧ ಪಕ್ಷದ ನಾಯಕರು, ಮಾಜಿ
ಮುಖ್ಯಮಂತ್ರಿ, ಸರಕಾರದ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಶಾಸಕರಿಗೆ ಈಫಾ ಹೋಟೆಲ್‌, ಸನ್ಮಾನ, ಆದರ್ಶ ಹೋಟೆಲ್‌, ಸಂಕಮ್‌ ಹೋಟೆಲ್‌; ವಿಧಾನಪರಿಷತ್‌ ಸದಸ್ಯರಿಗೆ ರಾಮದೇವ, ರೋಹನ್‌ ರೆಸಿಡೆನ್ಸಿ, ಹನುಮಾನ ಹೋಟೆಲ್‌, ರಕ್ಷಿತಾ ಮತ್ತು ಶ್ರೀಸಾಗರ ಮೊದಲಾದ ಹೋಟೆಲ್‌ಗ‌ಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. 

ಅಧಿವೇಶನದ ಅವಧಿಯ ಖರ್ಚು ವೆಚ್ಚದ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಸರಕಾರ ನೇಮಕ ಮಾಡಿದ ವಿಶೇಷ ಅಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ  ಜಿಲ್ಲಾಧಿಕಾರಿಗಳು ಒಟ್ಟಾಗಿ ಚರ್ಚೆ ಮಾಡಿ ದರ ನಿಗದಿ ಮಾಡುತ್ತೇವೆ. ಆ ಮೂಲಕ ಹಣ ಪಾವತಿ ವಿಷಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ.  
ಪಿ ಎ ಮೇಘಣ್ಣವರ, ಪ್ರಾದೇಶಿಕ ಆಯುಕ್ತ

Advertisement

● ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next