Advertisement

ಖೋಟಾನೋಟು ಪ್ರಕರಣ: ಎನ್‌ಐಎ ಕಸ್ಟಡಿಗೆ ಶುಕ್ರುದ್ಧೀನ್‌

11:26 AM Nov 02, 2018 | |

ಬೆಂಗಳೂರು: ರಾಜ್ಯದ ಖೋಟಾನೋಟು ಸರಬರಾಜು ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)  ಅಧಿಕಾರಿಗಳು, ಪ್ರಕರಣದ ಕಿಂಗ್‌ ಪಿನ್‌ ಎಂದು ಪರಿಗಣಿಸಲಾಗಿರುವ ಪಶ್ಚಿಮ ಬಂಗಾಳದ ಶುಕ್ರುದ್ಧೀನ್‌ ಶೇಕ್‌ ಅಲಿಯಾಸ್‌ ಶುಕ್ರುದ್ಧೀನ್‌ ಅನ್ಸಾರಿಯನ್ನು 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

Advertisement

ಕೆಲ ದಿನಗಳ ಹಿಂದೆ  ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬಂಧಿಸಲಾದ ಆರೋಪಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಅಧಿಕಾರಿಗಳು, ಆರೋಪಿ ವಿಚಾರಣೆಗೆ 10 ದಿನಗಳ ಕಾಲ ವಶಕ್ಕೆ ನೀಡುವಂತೆ ಕೋರಿತ್ತು. ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಆರೋಪಿಯನ್ನು ಎನ್‌ಐಎ ಕಸ್ಟಡಿಗೆ ನೀಡಿ ಅ.30ರಂದು ಆದೇಶಿಸಿದೆ.  

ಕಳೆದ ಮಾರ್ಚ್‌ನಲ್ಲಿ ಚಿಕ್ಕೋಡಿ ಅಶೋಕ್‌ ಕಂಬಾರ್‌ ಸೇರಿದಂತೆ ಇನ್ನಿತರರನ್ನು ಬಂಧಿಸಿದ ಖೋಟಾನೋಟು ಚಲಾವಣೆ ಪ್ರಕರಣದ ಆರೋಪಿಯಾಗಿರುವ ಶುಕ್ರುದ್ಧೀನ್‌, ಖೋಟಾ ನೋಟು  ಸರಬರಾಜು ಮಾಡುತ್ತಿದ್ದ. ಇತರೆ ಆರೋಪಿಗಳ ಜತೆ ನಿರಂತರ ಸಂಪರ್ಕ ಹೊಂದಿದ್ದಾನೆ. 

ಜತೆಗೆ, ಭಾರತದ ಆರ್ಥಿಕ ಸ್ಥಿತಿಗೆ ತೊಂದರೆ ಉಂಟು ಮಾಡುವ ಸಲುವಾಗಿ ಬಾಂಗ್ಲಾ ಗಡಿಯ ಮೂಲಕ ಖೋಟಾನೋಟು ತರಿಸಿಕೊಂಡು ರಾಜ್ಯಕ್ಕೆ ಕಳುಹಿಸಿಕೊಡುತ್ತಿದ್ದ. ಹೀಗಾಗಿ, ಆರೋಪಿಯ ಜತೆ ಮತ್ತಷ್ಟು ಜನ ಭಾಗಿಯಾಗಿರುವ ಸಾಧ್ಯತೆಯಿದೆ. ಅಲ್ಲದೆ, ಆರೋಪಿಯನ್ನು ವಿಚಾರಣೆಗೊಳಪಡಿಸಿ ಖೋಟಾನೋಟು ದಂಧೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಿದೆ. ಹೀಗಾಗಿ 10 ದಿನಗಳ ವಶಕ್ಕೆ ನೀಡುವಂತೆ ಎನ್‌ಐಎ ಮಾಡಿದ್ದ ಮನವಿಗೆ ನ್ಯಾಯಲಯ ಮಾನ್ಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next