Advertisement

ವಿಕ್ರಾಂತ್‌ ರೋಣ ರಿಲೀಸ್‌ ಗೆ ಕೌಂಟ್ ಡೌನ್: 4000 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆ

02:36 PM Jul 25, 2022 | Team Udayavani |

ಕಿಚ್ಚ ಸುದೀಪ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ವಿಕ್ರಾಂತ್‌ ರೋಣ’ ರಿಲೀಸ್‌ಗೆ ಕೌಂಟ್‌ ಡೌನ್‌ ಶುರುವಾಗಿದೆ. ಇದೇ ಜು. 28ಕ್ಕೆ “ವಿಕ್ರಾಂತ್‌ ರೋಣ’ ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ಕಿಚ್ಚನ ಹೊಸ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಪ್ರೇಕ್ಷಕರು ಮಾತ್ರವಲ್ಲದೆ, ಸಿನಿಮಂದಿ ಕೂಡ ಕಾತುರರಾಗಿದ್ದಾರೆ.

Advertisement

ಇನ್ನು “ವಿಕ್ರಾಂತ್‌ ರೋಣ’ ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಹೀಗೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಹಾಗಾದ್ರೆ, “ವಿಕ್ರಾಂತ್‌ ರೋಣ’ ಎಷ್ಟು ಸ್ಕ್ರೀನ್‌ಗಳಲ್ಲಿ ತೆರೆ ಕಾಣುತ್ತಿದೆ, ಬಿಡುಗಡೆ ತಯಾರಿ ಹೇಗಿದೆ ಎಂಬ ಬಗ್ಗೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಮುಂಗಡ ಬುಕ್ಕಿಂಗ್‌ ಆರಂಭ: “ವಿಕ್ರಾಂತ್‌ ರೋಣ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಸಿನಿಮಾದ ಕ್ರೇಜ್‌ ಹೆಚ್ಚಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅಡ್ವಾನ್ಸ್‌ ಬುಕ್ಕಿಂಗ್‌ಗೂ ಆಗ್ರಹಿಸುತ್ತಿದ್ದಾರೆ. ಅದರಂತೆ, ಭಾನುವಾರದಿಂದ ಆನ್‌ಲೈನ್‌ನಲ್ಲಿ “ವಿಕ್ರಾಂತ್‌ ರೋಣ’ ಸಿನಿಮಾದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ.

ಅಬ್ಬರದ ಪ್ರಚಾರ: ಕರ್ನಾಟಕ ಮಾತ್ರವಲ್ಲದೆ, “ವಿಕ್ರಾಂತ್‌ ರೋಣ’ ಬಿಡುಗಡೆಯಾಗುತ್ತಿರುವ ಭಾರತದ ಬಹುತೇಕ ಎಲ್ಲ ನಗರಗಳಲ್ಲಿ, ಪ್ರಚಾರದ ಸಲುವಾಗಿ “ವಿಕ್ರಾಂತ್‌ ರೋಣ’ ಸಿನಿಮಾದ ವಿಶೇಷ ಟ್ಯಾಬ್ಲೋಗಳು ಸಂಚಾರಿಸುತ್ತಿವೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದ ಅನೇಕ ನಗರಗಳ ಪ್ರಮುಖ ಚತ್ರಮಂದಿರಗಳ ಮುಂದೆ “ವಿಕ್ರಾಂತ್‌ ರೋಣ’ ಸಿನಿಮಾದ ದೊಡ್ಡ ಕಟೌಟ್‌ಗಳು, ಪೋಸ್ಟರ್‌ ಗಳು ಕೂಡ ರಾರಾಜಿಸುತ್ತಿವೆ

4000ಕ್ಕೂ ಅಧಿಕ ಸ್ಕ್ರೀನ್‌ : “ವಿಕ್ರಾಂತ್‌ ರೋಣ’ ಸಿನಿಮಾ ಭಾರತ ಮತ್ತು ವಿದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಭಾರತದಲ್ಲಿ ಮತ್ತು ಭಾರತದ ಹೊರಗೆ ಎರಡೂ ಕಡೆ ಸೇರಿ ಸುಮಾರು 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ “ವಿಕ್ರಾಂತ್‌ ರೋಣ’ ಬಿಡುಗಡೆಯಾಗುತ್ತಿದೆ ಎನ್ನುವುದು ಚಿತ್ರತಂಡದ ಕಡೆಯಿಂದ ಬಂದಿರುವ

Advertisement

ಮಾಹಿತಿ. “ಈಗಾಗಲೇ ಸುಮಾರು 4 ಸಾವಿರ ಸ್ಕ್ರೀನ್ಸ್‌ ನಲ್ಲಿ “ವಿಕ್ರಾಂತ್‌ ರೋಣ’ ಬಿಡುಗಡೆ ಖಚಿತವಾಗಿದ್ದು, ಅನೇಕ ಕಡೆಗಳಿಂದ ವಿತರಕರು ಮತ್ತು ಪ್ರದರ್ಶಕರಿಂದ ಸಿನಿಮಾಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಸಿನಿಮಾದ ರಿಲೀಸ್‌ಗೆ ಇನ್ನೂ ಎರಡು-ಮೂರು ದಿನಗಳು ಬಾಕಿಯಿರುವುದರಿಂದ, ಸ್ಕ್ರೀನ್ಸ್‌ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆ ನಿರ್ಮಾಪಕ ಜಾಕ್‌ ಮಂಜುನಾಥ್‌.

ಇದನ್ನೂ ಓದಿ:ಬಾಲಿವುಡ್‌ ಜೋಡಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್‌ಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಚಿತ್ರರಂಗದ ಮೂಲಗಳ ಪ್ರಕಾರ ಕರ್ನಾಟಕದಲ್ಲಿಯೇ “ವಿಕ್ರಾಂತ್‌ ರೋಣ’ ಬರೋಬ್ಬರಿ 450ಕ್ಕೂ ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಯಾಗಲಿದೆ. ಉಳಿದಂತೆ ಆಂಧ್ರ-ತೆಲಂಗಾಣದಲ್ಲಿ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡರೆ, ತಮಿಳುನಾಡಿನಲ್ಲಿ 300ಕ್ಕೂ ಸ್ಕ್ರೀನ್ಸ್‌ ಮತ್ತು ಕೇರಳದಲ್ಲಿ ಸುಮಾರು 200ಕ್ಕೂ ಹೆಚ್ಚು ಸ್ಕ್ರೀನ್ಸ್‌ ನಲ್ಲಿ “ವಿಕ್ರಾಂತ್‌ ರೋಣ’ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇನ್ನು ಹಿಂದಿಯಲ್ಲಿ 1500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ “ವಿಕ್ರಾಂತ್‌ ರೋಣ’ ಅಬ್ಬರಿಸುವ ಸಾಧ್ಯತೆಯಿದೆ. ಬಾಲಿವುಡ್‌ನ‌ಲ್ಲಿ ಇತ್ತೀಚೆಗೆ ತೆರೆಕಂಡ “ಶಂಶೇರಾ’ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡದ ಕಾರಣ, ಮತ್ತಷ್ಟು ಸ್ಕ್ರೀನ್‌ಗಳು “ವಿಕ್ರಾಂತ್‌ ರೋಣ’ನ ಪಾಲಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next