ವಾಷಿಂಗ್ಟನ್: ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಎಲ್ಲ ದೇಶಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮೂಲಕ ಭಾರತ ಜಾಗತಿಕ ಸೇವೆ ಒದಗಿಸಲಿದೆ ಎಂಬ ಭರವಸೆ ಇದೆ ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಲೀನಾ ಜಾರ್ಜಿವಾ ಹೇಳಿದರು.
ಜಾಗತಿಕ ಆರ್ಥಿಕತೆ ವಿಷಯದಲ್ಲಿ ಪ್ರಸ್ತುತ ವಿಶ್ವವು ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಆದರೆ ಭಾರತವು ಜಾಗತಿಕ ಸರಾಸರಿಗಿಂತ ಉತ್ತಮವಾಗಿ ನಿರ್ವಹಣೆ ತೋರುತ್ತಿದೆ ಮತ್ತು ಉತ್ತಮ ಆರ್ಥಿಕತೆ ಹೊಂದಿದೆ ಎಂದರು.
ಕಳೆದ ವರ್ಷ ಡಿ.1ರಂದು ಭಾರತ ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿತು. ಸೆ.9, 10ರಂದು ನವದೆಹಲಿಯಲ್ಲಿ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆ ನಡೆಯಲಿದೆ.