Advertisement

ಹುಕ್ಕಾಬಾರ್‌, ಬೀದಿನಾಯಿ ಕಡಿವಾಣಕ್ಕೆ ಪಾಲಿಕೆ ನಿರ್ಣಯ

01:07 PM Jan 18, 2022 | Team Udayavani |

ಮೈಸೂರು: ನಗರದ ಹಲವೆಡೆ ಉಪಟಳ ನೀಡುತ್ತಿರುವ ಬೀದಿನಾಯಿಗಳಿಗೆ ಕಡಿವಾಣ ಮತ್ತು ಯುವಸಮೂಹವನ್ನು ದುಶ್ಚಟಕ್ಕೆ ನೂಕುತ್ತಿರುವ ಹುಕ್ಕಾ ಬಾರ್‌ಪರವಾನಗಿ ರದ್ದುಪಡಿಸಲು ನಗರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಮೇಯರ್‌ ಸುನಂದಾ ಫಾಲನೇತ್ರ ಅಧ್ಯಕ್ಷತೆಯಲ್ಲಿ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿಸೋಮವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ಬಳಿಕಮೇಲಿನ 2 ನಿರ್ಣಯ ಕೈಗೊಳ್ಳಲಾಯಿತು.

ಕಾಂಗ್ರೆಸ್‌ ನಾಯಕ ಅಯೂಬ್‌ ಖಾನ್‌ ಮಾತನಾಡಿ,ನಗರದಲ್ಲಿ ಯುವ ಸಮೂಹವನ್ನು ದುಶ್ಚಟಕ್ಕೆ ನೂಗುತ್ತಿರುವಹುಕ್ಕಾಬಾರ್‌ಗಳ ಪರವಾನಗಿಯನ್ನು ಕೂಡಲೇರದ್ದುಪಡಿಸಬೇಕೆಂದು ಆಗ್ರಹಿಸಿದರು. ನ್ಯಾಯಾಲಯದಆದೇಶದ ಪ್ರಕಾರ 18 ವರ್ಷ ಮೇಲ್ಪಟ್ಟವರಿಗೆ ಹುಕ್ಕಾಬಾರ್‌ ಪ್ರವೇಶ ನೀಡಬೇಕು. ಆದರೆ 12 ವರ್ಷದ ಮಕ್ಕಳುವ್ಯಸನಿಗಳಾಗುತ್ತಿದ್ದಾರೆ. ಹುಕ್ಕಾಬಾರ್‌ ನೆಪದಲ್ಲಿ ಏನೇನುಸೇವಿಸುತ್ತಿದ್ದಾರೋ ತಿಳಿಯದು ಎಂದರು. ಇದಕ್ಕೆ ಆಡಳಿತಪಕ್ಷದ ನಾಯಕ ಶಿವಕುಮಾರ್‌ ದನಿಗೂಡಿಸಿದರು. ಕೆ.ವಿ.ಶ್ರೀಧರ್‌, ಹುಕ್ಕಾಬಾರ್‌ ಬಂದ್‌ ಮಾಡಬೇಕೆಂದರು.

ಬಿಜೆಪಿ ಸದಸ್ಯ ಸಂಪತ್‌ ಸುಬ್ಬಯ್ಯ ಮಧ್ಯಪ್ರವೇಶಿಸಿ,ಹುಕ್ಕಾಬಾರ್‌ ನಡೆಸುವವರು ನ್ಯಾಯಾಲಯದಿಂದ ತಡೆತರಬಹುದು. ನಿಷೇಧಿಸುವುದು ಕಷ್ಟಸಾಧ್ಯ ಎಂದು ಸಭೆಯ ಗಮನಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಅಯೂಬ್‌ ಖಾನ್‌, ಹುಕ್ಕಾಬಾರ್‌ ಮುಂದುವರಿದರೆ 65 ವಾರ್ಡಿನ ಎಲ್ಲ ಸದಸ್ಯರುಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಸಿದರು. ಬಳಿಕ ಮೇಯರ್‌ ಸುನಂದ ಫಾಲನೇತ್ರ ಮಾತನಾಡಿ, ಮೈಸೂರು ನಗರದಲ್ಲಿರುವ ಹುಕ್ಕಾಬಾರ್‌ ಉದ್ದಿಮೆ ಪರವಾನಗಿ ರದ್ದುಪಡಿಸುತ್ತೇವೆ. ಪಾಲಿಕೆ ಆರೋಗ್ಯಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆನಡೆಸಿ ಮುತ್ತಿಗೆ ಹಾಕಬೇಕು ಎಂದು ಸೂಚಿಸಿದರು.

Advertisement

ಬೀದಿ ನಾಯಿ ಹಾವಳಿ: ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಕಾರ್ಯಾಚರಣೆನಡೆಸಲಾಗುವುದು. ಒಂದು ತಿಂಗಳಲ್ಲಿ ಪ್ರತಿದಿನ 2 ವಾರ್ಡ್ ಗಳಲ್ಲಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೊಡಿಸಿ ನಿಯಂತ್ರಣಕ್ಕೆ ತರುವುದಾಗಿ ತಿಳಿಸಿದರು.

ಪೆಟ್‌ ಪಾರ್ಕ್‌ ನಿರ್ಮಾಣ: ನಗರದಲ್ಲಿ ಪೆಟ್‌ ಪಾರ್ಕ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇಲ್ಲಿ ಹಂದಿ ಸಾಗಾಣೆಗೆಅನುಕೂಲ ಕಲ್ಪಿಸಲಾಗುವುದು. ಅದಕ್ಕಾಗಿರಾಯನಕೆರೆಯಲ್ಲಿ 5 ಎಕರೆ ಜಾಗ ಮೀಸರಿಸಲಾಗಿದೆ.49 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗುವುದು.ಸಾಗಣೆ ಮತ್ತು ನಿರ್ವಹಣೆಗೆ ಬಗ್ಗೆ ಮುಂದಿನ ದಿನಗಳಲ್ಲಿಚರ್ಚಿಸುತ್ತೇವೆ ಎಂದು ಡಾ.ನಾಗರಾಜ್‌ ಮಾಹಿತಿ ನೀಡಿದರು.

ಕೊನೆ ಸಭೆ ಸಹಕರಿಸಿ: ಬಹುಶಃ ಇದು ನನ್ನ ಅವಧಿಯ ಕೊನೆಯ ಸಭೆಯಾಗಲಿದೆ. ಆದ್ದರಿಂದ ಎಲ್ಲರೂ ಸಹಕಾರನೀಡುವಂತೆ ಸಭೆಯ ನಡುವೆ ಸದಸ್ಯರಲ್ಲಿ ಮೇಯರ್‌ಸುನಂದಾ ಫಾಲನೇತ್ರ ಅವರು ಮನವಿ ಮಾಡಿದರು.

ಬಿಡಾಡಿ ಹಂದಿ, ಹಸುಗಳಿಗೆ ದಂಡ :

ಕಳೆದ ವರ್ಷ ಬಿಡಾಡಿ ಹಂದಿಗಳಿಗೆ 14 ಸಾವಿರ ರೂ. ದಂಡ ವಿಧಿಸಿದ್ದೇವೆ. ಹಸುಗಳಿಗೆ 29,760 ರೂ. ದಂಡ ಹಾಕಿದ್ದೇವೆ. ಒಂದು ನಾಯಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ 870 ರೂ. ಖರ್ಚು ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ಸಭೆಗೆ ಮಾಹಿತಿ ನೀಡಿದರು.

ಪ್ರತಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಜಟಾಪಟಿ :

ಮೈಸೂರು: ಕೌನ್ಸಿಲ್‌ ಸಭೆ ಆರಂಭವಾಗುತ್ತಿದ್ದಂತೆ ನಗರ ಪಾಲಿಕೆಯಲ್ಲಿ ಪ್ರತಿಪಕ್ಷ ಯಾವುದು ಎಂಬ ಕುರಿತು ಜೆಡಿಎಸ್‌ ಸದಸ್ಯರು ಪ್ರಶ್ನಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿ ಆಡಳಿತ ನಡೆಸುತ್ತಿರುವುದರಿಂದ ನಾವೇ ಇಲ್ಲಿ ಪ್ರತಿಪಕ್ಷ ಎಂದು ಜೆಡಿಎಸ್‌ ಸದಸ್ಯರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸದಸ್ಯ ಆಯೂಬ್‌ಖಾನ್‌,ತಾವು 3 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಜೆಡಿಎಸ್‌ ನಾಯಕರಿಗೆ ಸವಾಲು ಹಾಕಿದರು. ನಂತರ ಕಾಂಗ್ರೆಸ್‌ ಸದಸ್ಯ ಆರಿಫ್ ಹುಸೇನ್‌ ಮಾತನಾಡಿ, ನಾವು (ಕಾಂಗ್ರೆಸ್‌- ಜೆಡಿಎಸ್‌) ಅನುದಾನ, ಕಷ್ಟ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರೆ ನಿಮ್ಮವರು (ಬಿಜೆಪಿ ಸದಸ್ಯರು) ಏನೂ ಮಾತನಾಡದೆ ಕುಳಿತಿದ್ದಾರೆ ಎಂದುಮೇಯರ್‌ ಅವರನ್ನು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಮಾ.ವಿ.ರಾಮಪ್ರಸಾದ್‌, ನಾವು ಪರಮಾಧಿಕಾರವನ್ನು ಮೇಯರ್‌ ಅವರಿಗೆ ನೀಡಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next