Advertisement

ಅವಿರೋಧ ಆಯ್ಕೆ? ಪರಿಷತ್‌ ಚುನಾವಣೆ: ತ್ರಿಪಕ್ಷ ಅಭ್ಯರ್ಥಿ ನಾಮಪತ್ರ

12:54 AM Jun 19, 2020 | Sriram |

ಬೆಂಗಳೂರು: ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ನಾಲ್ಕು, ಕಾಂಗ್ರೆಸ್‌ನಿಂದ ಎರಡು, ಜೆಡಿಎಸ್‌ನಿಂದ ಓರ್ವ ಅಭ್ಯರ್ಥಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿ ರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

Advertisement

ಬಿಜೆಪಿಯಿಂದ ಬೆಳ್ತಂಗಡಿಯ ಹಿರಿಯ ನಾಯಕ ಪ್ರತಾಪಸಿಂಹ ನಾಯಕ್‌, ಎಂ.ಟಿ.ಬಿ. ನಾಗರಾಜ್‌, ಸುನಿಲ್‌ ವಲ್ಯಾಪುರೆ, ಆರ್‌. ಶಂಕರ್‌, ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್‌, ನಸೀರ್‌ ಅಹಮದ್‌ ಹಾಗೂ ಜೆಡಿಎಸ್‌ನಿಂದ ಗೋವಿಂದರಾಜು ನಾಮಪತ್ರ ಸಲ್ಲಿಸಿದರು.

ಮೊದಲಿಗೆ ಜೆಡಿಎಸ್‌ನ ಗೋವಿಂದರಾಜು ಅವರು ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರ ಸ್ವಾಮಿ, ಮಾಜಿ ಸಚಿವರಾದ ಕೆ. ಶ್ರೀನಿವಾಸ ಗೌಡ, ಬಸವರಾಜ ಹೊರಟ್ಟಿ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಅನಂತರ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ. ಹರಿ ಪ್ರಸಾದ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವ ರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿ ಸಿ  ದರು. ಮತ್ತೂಬ್ಬ ಕಾಂಗ್ರೆಸ್‌ ಅಭ್ಯರ್ಥಿ ನಸೀರ್‌ ಅಹಮದ್‌ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಚಿವ ಯು.ಟಿ. ಖಾದರ್‌, ಶಾಸಕರಾದ ಎನ್‌.ಎ. ಹ್ಯಾರೀಸ್‌, ಖನೀಜ್‌ ಫಾತಿಮಾ ಉಪಸ್ಥಿತರಿದ್ದರು.

ಅನಂತರ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ರಾಜ್ಯಾಧ್ಯಕ್ಷ ನಳಿನ್‌, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬೈರತಿ ಬಸವರಾಜ್‌, ಕೋಟ ಶ್ರೀನಿವಾಸ ಪೂಜಾರಿ, ಎಸ್‌.ಟಿ. ಸೋಮಶೇಖರ್‌, ಮಾಜಿ ಸಚಿವ ಅರವಿಂದ ಲಿಂಬಾವಳಿ ಇದ್ದರು.

Advertisement

ಮುಖ್ಯಮಂತ್ರಿ ಗೈರು
ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಿಎಂ ಯಡಿಯೂರಪ್ಪ ಗೈರಾಗಿದ್ದರು. ಕಾಲು ನೋವಿನ ಕಾರಣ ವಿಶ್ರಾಂತಿಯಲ್ಲಿದ್ದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಜೂ. 22ಕ್ಕೆ ಅಧಿಕೃತ ಘೋಷಣೆ
ಪಕ್ಷೇತರ ಅಭ್ಯರ್ಥಿಯಾಗಿ ಯಡವನಹಳ್ಳಿ ಪಿ.ಸಿ. ಕೃಷ್ಣೇಗೌಡ ಎಂಬವರು ನಾಮಪತ್ರ ಸಲ್ಲಿ ಸಿದ್ದರಾದರೂ ಸೂಚಕರ ಸಹಿ ಇಲ್ಲ ಎನ್ನಲಾಗಿದೆ. ಶುಕ್ರವಾರ ನಾಮ ಪತ್ರಪರಿಶೀಲನೆ ನಡೆಯಲಿದ್ದು, 3 ಪಕ್ಷಗಳ ಏಳೂ ಮಂದಿ ಬಹುತೇಕ ಅವಿರೋಧ ಆಯ್ಕೆಯಾಗಬಹುದು. ನಾಮಪತ್ರ ವಾಪಸಾತಿಗೆ ಜೂ.22 ಕೊನೆಯ ದಿನಾಂಕ, ಅಂದು ಅಧಿಕೃತ ಘೋಷಣೆಯಾಗಬಹುದು ಎನ್ನಲಾಗಿದೆ.

ಬೆಂಬಲಿಗರ ಜಮಾವಣೆ
ನಾಮಪತ್ರ ಸಲ್ಲಿಕೆ ವೇಳೆ ಐವರಿಗೆ ಮಾತ್ರ ಪ್ರವೇಶವಿದ್ದ ಕಾರಣ ಅಭ್ಯರ್ಥಿಗಳ ಜತೆ ಬಂದಿದ್ದ ಬೆಂಬಲಿಗರು ವಿಧಾನಸೌಧ ಕಾರಿಡಾರ್‌ನಲ್ಲಿ ಜಮಾವಣೆಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಅವರನ್ನು ನಿಯಂತ್ರಿಸಲು ಸ್ಪೀಕರ್‌ ಕಚೇರಿ ಸಿಬಂದಿ ಮತ್ತು ಪೊಲೀಸರು ಸಾಕಷ್ಟು ಶ್ರಮಿಸಬೇಕಾಯಿತು.

ಬಿ.ಕೆ. ಹರಿಪ್ರಸಾದ್‌, ನಸೀರ್‌ ಅಹಮದ್‌ ವಿದ್ಯಾರ್ಥಿ ನಾಯಕರಿಂದ ರಾಷ್ಟ್ರಮಟ್ಟದ ವರೆಗೆ ಬೆಳೆದವರು. ಅವರ ಹಿರಿತನ ಮತ್ತು ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಅವರನ್ನು ವಿಧಾನಪರಿಷತ್‌ಗೆ ಕಳುಹಿಸಲು ತೀರ್ಮಾನಿಸಿದ್ದೇವೆ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪರಿಷತ್‌ನಲ್ಲಿ ತೆರವಾದ ಸ್ಥಾನಗಳಿಗೆ ಬಿಜೆಪಿ ನಾಲ್ಕು ಮಂದಿಗೆ ಅವಕಾಶ ಕಲ್ಪಿಸಿದೆ. ಸಿದ್ಧಾಂತದ ಮೂಲಕ ಕಾರ್ಯಕರ್ತರನ್ನು ಬೆಳೆಸಿದ ಪ್ರತಾಪ ಸಿಂಹ ನಾಯಕ್‌ ಮತ್ತು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣ ವಾದವರಿಗೂ ಅವಕಾಶ ನೀಡಲಾಗಿದೆ.
-ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದ್ದೇವೆ. ಪಕ್ಷ ನಿಷ್ಠೆ, ಸಂಘಟನ ಸಾಮರ್ಥ್ಯ ನೋಡಿ ಗುರುತಿಸಲಾಗಿದೆ.
– ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next