Advertisement

Winter Session: ಸರ್ಕಾರದ ವರ್ತನೆಗೆ ವಿಪಕ್ಷ ಸದಸ್ಯರ ಆಕ್ರೋಶ: ಸಭಾಪತಿ ಹೊರಟ್ಟಿ ಎಚ್ಚರಿಕೆ

08:15 PM Dec 16, 2024 | Team Udayavani |

ಸುವರ್ಣ ವಿಧಾನಸೌಧ: ಸದಸ್ಯರ ಪ್ರಶ್ನೆಗಳಿಗೆ ಸರ್ಕಾರ ಉತ್ತರವೇ ನೀಡದಿದ್ದರೆ ಯಾವ ಪುರುಷಾರ್ಥಕ್ಕೆ ಸದನ ನಡೆಸುತ್ತೀರಿ, ಅದರ ಬದಲು ಸದನ ಮುಂದೂಡಿ ಬಿಡಿ. ಇದುವರೆಗೆ ಸುಮಾರು 311 ಪ್ರಶ್ನೆಗಳಿಗೆ ಉತ್ತರವೇ ಬಂದಿಲ್ಲ ಎಂದು ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸೋಮವಾರ ವಿಧಾನಪರಿಷತ್‌ ಕಲಾಪದಲ್ಲಿ ಪ್ರಶ್ನೋತ್ತರ ಮುಗಿದ ನಂತರ ಲಿಖಿತ ಉತ್ತರ ಮಂಡನೆ ವೇಳೆ ಮಾತನಾಡಿದ ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ಇಲ್ಲಿವರೆಗೆ 311 ಪ್ರಶ್ನೆಗಳಿಗೆ ಉತ್ತರ ಒದಗಿಸಿಲ್ಲ. ಇಂದು ಮಂಡನೆಯಾದ 152 ಪ್ರಶ್ನೆಗಳಲ್ಲಿ ಕೇವಲ 50 ಪ್ರಶ್ನೆಗಳಿಗೆ ಮಾತ್ರ ಉತ್ತರ ಒದಗಿಸಿದ್ದು, ಶೇ.50ರಷ್ಟು ಉತ್ತರ ಬಂದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಅನೇಕ ವಿಪಕ್ಷ ಸದಸ್ಯರು ಇದಕ್ಕೆ ಧ್ವನಿಗೂಡಿಸಿ, ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ, ಸದಸ್ಯರ ಪ್ರಶ್ನೆಗಳಿಗೆ ಉತ್ತರ ವಿಳಂಬ ಬಗ್ಗೆ ಸಮಿತಿ ಮಾಡಲು ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು.

ಸದಸ್ಯರ ಅನಿಸಿಕೆಗೆ ಸ್ಪಂದಿಸಿದ ಸಭಾಪತಿ ಬಸವರಾಜ ಹೊರಟ್ಟಿ , ಉತ್ತರ ಒದಗಿಸದಿದ್ದರೆ ಸದನ ನಡೆಸುವುದು ಕಷ್ಟವಾಗುತ್ತದೆ. ಬುಧವಾರದೊಳಗಾಗಿ ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು. ಉತ್ತರ ಒದಗಿಸದ ಅಧಿಕಾರಿ ಹೆಸರನ್ನು ನನಗೆ ಹೇಳಿ. ಕಲಾಪದಲ್ಲಿ ಸೂಚಿತ ಸಚಿವರು, ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಸಭಾನಾಯಕ ಎನ್‌.ಎಸ್‌.ಬೋಸರಾಜ್‌ಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next