Advertisement

ಡಿ.09ಕ್ಕೆ ಕಾಟನ್‌ ಪೇಟೆ ಗೇಟ್ ರಿಲೀಸ್

04:35 PM Nov 21, 2022 | Team Udayavani |

“ಆರ್‌. ಎಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಆರ್‌. ಶ್ರೀನಿವಾಸ್‌ ನಿರ್ಮಾಣದ ಇಪ್ಪತ್ತನೆಯ ಚಿತ್ರ “ಕಾಟನ್‌ಪೇಟೆ ಗೇಟ್‌’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಡಿ.09ರಂದು ತೆರೆಕಾಣಲಿದೆ. ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕಾಟನ್‌ಪೇಟೆ ಗೇಟ್‌’ ಚಿತ್ರದ ಚಿತ್ರೀಕರಣ ಬೆಂಗಳೂರು, ಹೈದರಾಬಾದ್‌ ಸುತ್ತಮುತ್ತ ನಡೆಸಲಾಗಿದೆ.

Advertisement

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ಕಾಟನ್‌ ಪೇಟೆ ಗೇಟ್‌’ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣಪೇಟಾ ಗೇಟ್‌’ ಎಂದು ಹೆಸರಿಡಲಾಗಿದ್ದು, ವೈ. ರಾಜಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

“ಕಾಟನ್‌ಪೇಟೆ ಗೇಟ್‌’ ಚಿತ್ರದ ನಾಲ್ಕು ಹಾಡುಗಳಿಗೆ ಎನ್‌. ಎಸ್‌ ಪ್ರಸು ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಚಿಡತಾಲ ನವೀನ್‌ ಹಾಗೂ ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನವಿದೆ. ಚಿತ್ರಕ್ಕೆ ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ. ವೇಣುಗೋಪಾಲ್, ಯಶ್ವನ್‌, ಸುರಭಿ ತಿವಾರಿ, ಅನುಶಾ ಜೈನ್‌, ಸುಧೀಕ್ಷಾ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು “ಕಾಟನ್‌ಪೇಟೆ ಗೇಟ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next