Advertisement

ಹುಬ್ಬೇರಿಸಿದ ಪದಾಧಿಕಾರಿಗಳ ವೆಚ್ಚ

11:10 AM Aug 17, 2017 | Team Udayavani |

ತಿಂಗಳ ಹಿಂದಷ್ಟೇ ಭಾರತ ಕ್ರಿಕೆಟ್‌ ತಂಡದ ಕ್ರಿಕೆಟಿಗರ ವೇತನದ ವಿವರವನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಆಡಳಿತಾಧಿಕಾರಿಗಳು ಈಗ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿ ಸೇರಿ ಹಲವರ ಖರ್ಚುವೆಚ್ಚದ ವಿವರವನ್ನು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಗಳು ಹುಬ್ಬೇರಿಸುವಂತಿವೆ. ಸರ್ವೋಚ್ಚ ನ್ಯಾಯಾಲಯದಿಂದ ಪದಚ್ಯುತಿಗೊಂಡಿರುವ ಮಾಜಿ ಕಾರ್ಯದರ್ಶಿ ಅಜಯ್‌ ಶಿರ್ಕೆ ತಮ್ಮ ಖರ್ಚುವೆಚ್ಚವಾಗಿ ಒಂದೇ ಒಂದು ರೂಪಾಯಿ ಕೂಡ ಪಡೆದಿಲ್ಲವೆನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.

Advertisement

ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ತಮ್ಮ 2 ವರ್ಷ 3 ತಿಂಗಳ (2015-16, 2016-17, 2017 ಏಪ್ರಿಲ್‌-ಜೂನ್‌)  ಖರ್ಚುವೆಚ್ಚವಾಗಿ ಬಿಸಿಸಿಐನಿಂದ 1.56 ಕೋಟಿ ರೂ. ಪಡೆದಿದ್ದಾರೆ. ಆದರೆ ಖಜಾಂಚಿ ಅನಿರುದ್ಧ ಚೌಧರಿ ಇದೇ ಅವಧಿಯಲ್ಲಿ 1.71 ಕೋಟಿ ರೂ. ಪಡೆದಿದ್ದಾರೆ. ಇದು ಅಚ್ಚರಿ ಮೂಡಿಸಿದೆ. ಕಾರ್ಯದರ್ಶಿಗಿಂತ ಹೆಚ್ಚು ಹಣ ಖಜಾಂಚಿಗೆ ಪಾವತಿಯಾಗಿರುವುದು ಪ್ರಶ್ನಾರ್ಥಕವಾಗಿದೆ. ಈ ಇಬ್ಬರಿಗೆ ಹಣವನ್ನು ಹಲವು ವಿಭಾಗದಡಿ ಪಾವತಿಸಲಾಗಿದೆ.  ಅಮಿತಾಭ್‌ಗೆ ವಿಮಾನವೆಚ್ಚವಾಗಿ 65 ಲಕ್ಷ ರೂ., ದಿನಭತ್ಯೆ, ಪ್ರವಾಸ ಭತ್ಯೆಯಾಗಿ 42.25 ಲಕ್ಷ ರೂ., ವಿದೇಶಿ ವಿನಿಮಯವಾಗಿ 29 ಲಕ್ಷ ರೂ., ಹೆಚ್ಚುವರಿ 1.31 ಲಕ್ಷ ರೂ. ನೀಡಲಾಗಿದೆ.

ಖಜಾಂಚಿ ಚೌಧರಿಗೆ ಬರೀ ವಿಮಾನವೆಚ್ಚ 60.29 ಲಕ್ಷ ರೂ., ದಿನಭತ್ಯೆ-ಪ್ರವಾಸಿ ಭತ್ಯೆಯಾಗಿ 75 ಲಕ್ಷ ರೂ. ನೀಡಲಾಗಿದೆ! ಮತ್ತೂಂದು ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಇದೇ ಅವಧಿಯಲ್ಲಿ 6.52 ಲಕ್ಷ ರೂ. ಪಡೆದಿದ್ದಾರೆ. ಮತ್ತೂಂದು ಕಡೆ ಪದಚ್ಯುತ ಅಧ್ಯಕ್ಷ ಅನುರಾಗ್‌ ಠಾಕೂರ್‌ ಕೇವಲ 24 ಲಕ್ಷ ರೂ. ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next