ಬಾಗೇಪಲ್ಲಿ: ತಾಲೂಕು ವ್ಯಾಪ್ತಿಯಲ್ಲಿರುವ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾ ರಗಳನ್ನು ದಾಖಲೆ ಸಮೇತ ಬಯಲಿಗೆಳೆದು ಅಕ್ರಮಗಳನ್ನು ಸಾಬೀತು ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತಾಲೂಕು ಸಮಿತಿ ಅಧ್ಯಕ್ಷ ಎನ್.ಶಿವಕುಮಾರ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತಾಲೂಕು ಸಮಿತಿವತಿಯಿಂದ ಅಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಶುದ್ಧ ಕುಡಿವ ನೀರು ಸೇರಿದಂತೆ ಕನಿಷ್ಠ ಸೌಕರ್ಯಗಳಿಲ್ಲ, ಸರ್ಕಾರಿ ಕಚೇರಿಗಳಲ್ಲಿ ದಲ್ಲಾಳಿಗಳಿಲ್ಲದೆ ಜನರಿಗೆ ಯವುದೇ ರೀತಿಯ ಸರ್ಕಾರಿ ಕೆಲಸಗಳು ಆಗುತ್ತಿಲ್ಲ, ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಬಾರ್‌ಗಳು ಓಪನ್ ಆಗುತ್ತಿದ್ದು ಯುವಕರು ಕುಡಿತದ ದುಚ್ಚಟಕ್ಕೆ ಬಲಿಯಾಗುತ್ತಿದ್ದಾರೆ.
ಪಟ್ಟಣದ ಗೂಳೂರು ರಸ್ತೆಯಲ್ಲಿರುವ ಶಾಸಕ ಎಸ್. ಎನ್.ಸುಬ್ಟಾರೆಡ್ಡಿರವರ ಮನೆಗೆ ಹೋಗುವ ರಸ್ತೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಲವು ರಸ್ತೆಗಳು ಗುಣಿಗಳು ಬಿದ್ದು ಹದಗೆಟ್ಟಿದ್ದರೂ ಅದೇ ರಸ್ತೆಗಳಲ್ಲಿ ನಿತ್ಯ ಸಂಚರಿಸುವ ಶಾಸಕರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಬಾಗೇಪಲ್ಲಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪಾರ್ಕ್ ಜಾಗ, ಗುಂಡು ತೋಪು, ಗೋಮಾಳ ಜಮೀನುಗಳ ಒತ್ತುವರಿಯನ್ನು ನಿಯಂತ್ರಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಪೂರ್ಣ ವಿಫಲರಾಗಿದ್ದರೂ ಅಕ್ರಮಗಳ ಬಗ್ಗೆ ಪ್ರಶ್ನೆ ಮಾಡಬೇಕಾಗಿರುವ ಚುನಾಯಿತ ಜನಪ್ರತಿನಿಧಿಗಳು ಮೌನವಹಿಸಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.
ತಾಲೂಕಿನ ರಾಗಿ ಖರೀ ಕೇಂದ್ರದಲ್ಲಿ 3500 ಮೂಟೆಗಳಷ್ಟು ಗೋಮಾಲ್ ನಡೆದಿದೆ. ರಾಗಿ ಖರೀದಿಸದೆ, ಇಲಾಖೆಗೆ ತಪ್ಪು ದಾಸ್ತಾನು ಲೆಕ್ಕ ತೋರಿಸಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಕೊಂಟ್ಯಾಂ ತರ ರೂ. ದೋಚಿದ್ದಾರೆ. ಪತ್ತೆಹಚ್ಚಿರುವುದಾಗಿ ಸ್ಥಳೀಯ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಹೇಳಿದ್ದರು. ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಏನಾಯಿತು ಎಂಬುದು ಇನ್ನೂ ಗೊತ್ತಾಗಿಲ್ಲ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದು ಸತ್ಯ ಹೊರಬರಬೇಕಿದೆ ಎಂದರು.
ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಜಿಲ್ಲಾ ಉಪಾಧ್ಯಕ್ಷ ನಾಗಪ್ಪ, ತಾಲೂಕು ಉಪಾಧ್ಯಕ್ಷ ಆರ್.ರಾಧಮ್ಮ, ಕಾರ್ಯದರ್ಶಿ ಬಿ. ಶ್ರೀನಿವಾಸ್, ಕಾರ್ಯಕರ್ತರಾದ ಮುನಿಗಂಗಾಧರ, ರವಿ, ಇಷಾನ್, ಮಣಿ, ಇಸ್ಮಾಯಿಲ್, ಶಶಾಂಕ್ ಇತರರಿದ್ದರು.