Advertisement

ಪಾಕಿಸ್ತಾನದಲ್ಲೊಂದು ಬ್ರಹ್ಮಾಂಡ ಭ್ರಷ್ಟಾಚಾರ!

10:26 AM Sep 17, 2022 | Team Udayavani |

ಇಸ್ಲಾಮಾಬಾದ್‌: ಭಾರತದಲ್ಲಿ ಭ್ರಷ್ಟಾಚಾರ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಪಾಕಿಸ್ತಾನದಲ್ಲಿ ಭಾರತಕ್ಕಿಂತ 100 ಪಟ್ಟು ಹೆಚ್ಚು ಭ್ರಷ್ಟಾಚಾರವಿದೆ!

Advertisement

ಇದಕ್ಕೊಂದು ತಾಜಾ ಉದಾಹರಣೆ ಈಗ ಸಿಕ್ಕಿದೆ. ಸಿಂಧೂ ನದಿಗೆ ಅಡ್ಡಲಾಗಿ ಡಯಮರ್‌-ಭಾಷಾ ಅಣೆಕಟ್ಟು ಕಟ್ಟಲು ಪಾಕ್‌ ಸರ್ಕಾರ ತೀರ್ಮಾನಿಸಿತ್ತು. ಇದರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಪಾಕ್‌ ಸರ್ಕಾರ ದೇಣಿಗೆ ರೂಪದಲ್ಲಿ ಬರೋಬ್ಬರಿ 318 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿಚಿತ್ರವೆಂದರೆ ಅದಕ್ಕಾಗಿ ಜಾಹೀರಾತು ನೀಡಲು 502 ಕೋಟಿ ರೂ.ಗಳನ್ನು ವ್ಯಯಿಸಿದೆ!

ಇದಕ್ಕೂ ಮಿಗಿಲಾಗಿ ಪಾಕಿಸ್ತಾನಿ ನಾಗರಿಕರನ್ನು ದಿಗ್ಭ್ರಮೆಗೊಳಿಸಿದ್ದು ಪಾಕ್‌ ನಿವೃತ್ತ ಸರ್ವೋಚ್ಚ ನ್ಯಾಯಮೂರ್ತಿ ಸಖೀಬ್‌ ನಿಸಾರ್‌ ನೀಡಿದ ಹೇಳಿಕೆ. 2018ರಲ್ಲಿ ಅವರು ಅಧಿಕಾರದಲ್ಲಿದ್ದಾಗ ಜನರಿಂದ ಹಣ ಸಂಗ್ರಹಿಸಲು ನಿಧಿಯೊಂದನ್ನು ಸ್ಥಾಪಿಸಿದ್ದರು. 2019ರಲ್ಲಿ ಅವರು ನಿವೃತ್ತರಾದರು. ಇದೀಗ ಅವರು, ಹಣ ಸಂಗ್ರಹಿಸಲು ಕರೆ ನೀಡಿದ್ದು ಅಣೆಕಟ್ಟು ಕಟ್ಟಲಿಕ್ಕಲ್ಲ, ಜನಜಾಗೃತಿ ಮೂಡಿಸಲಿಕ್ಕೆ ಎಂದು ಹೇಳಿದ್ದಾರೆ. ಅವರಿಗೆ ಪಾಕಿಸ್ತಾನ ಸಂಸದೀಯ ಸಮಿತಿ ಸಮನ್ಸ್‌ ನೀಡಿದೆ.

ಅಂದಹಾಗೆ ಪಾಕಿಸ್ತಾನದ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಲು ಕಾರಣವಾಗಬಲ್ಲ ಈ ಅಣೆಕಟ್ಟು ನಿರ್ಮಾಣಕ್ಕೆ ತಗುಲುವ ಒಟ್ಟು ವೆಚ್ಚ 1.116 ಲಕ್ಷ ಕೋಟಿ ರೂ.! 1980ರಲ್ಲೇ ಮುಗಿಯಬೇಕಾದ ಈ ಅಣೆಕಟ್ಟು, ಇನ್ನೂ ಶುರುವಾಗಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next