Advertisement

ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ

07:27 PM Jun 29, 2022 | Team Udayavani |

ಕಾರವಾರ : ಇಲ್ಲಿನ ನಗರಸಭೆಯಿಂದ 173 ಕಾಮಗಾರಿಗಳು ನಡೆಯುತ್ತಿರುವಾಗಲೇ ಟೆಂಡರ್ ಕರೆಯಲಾಗಿದೆ . ಇದು ಕಮಿಷನ್ ವಹಿವಾಟಿನ ಭ್ರಷ್ಟಾಚಾರ ಎಂದು ಆರೋಪಿಸಿ ಮಾಜಿ ಶಾಸಕ ಸತೀಶ ಸೈಲ್ ಪೌರಾಯುಕ್ತ ಆರ್.ಪಿ.ನಾಯಕ್ ರನ್ನು ತರಾಟೆಗೆ ತೆಗೆದುಕೊಂಡರು. ಟೆಂಡರ್ ಕರೆಯದೇ ಕಾಮಗಾರಿ ಮಾಡಿಸಿದ್ದಕ್ಕೆ ಸ್ಪಷ್ಟೀಕರಣವನ್ನು ಲಿಖಿತ ರೂಪದಲ್ಲಿ ಕೊಡುವಂತೆ ಒತ್ತಾಯಿಸಿ ಪೌರಾಯುಕ್ತರ ಕೊಠಡಿಯಲ್ಲಿ ಬುಧುವಾರ ಸಂಜೆಯವರೆಗೂ ಧರಣಿ ನಡೆಸಿದರು.

Advertisement

ಕಾರವಾರದ ವಿವಿಧ ವಾರ್ಡ್ ಗಳಲ್ಲಿ ಕಾಮಗಾರಿಗಳನ್ನು ಈಗಾಗಲೆ ಕೆಲವನ್ನು ಪೂರ್ಣಗೊಳಿಸಲಾಗಿದೆ. ಆದರೆ ಕಾಮಗಾರಿ ಮುಗಿದ ಬಳಿಕ ಟೆಂಡರ್ ಕರೆಯಲಾಗಿದೆ. ಇದು ಭ್ರಷ್ಟಾಚಾರ. ಹಾಗೂ ಕಮಿಷನ್ ವ್ಯವಹಾರದ ಸಂಕೇತ . ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ. ವಿಪ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಕೆಲಸ ಪೂರ್ಣವಾದ ಬಳಿಕ ಯಾಕೆ ಟೆಂಡರ್ ಕರೆಯುವ ಅವಶ್ಯಕತೆಯಿತ್ತು ಎಂದು ಪ್ರಶ್ನಿಸಿದರು.

ಪೌರಾಯುಕ್ತ ಆರ್.ಪಿ.ನಾಯ್ಕ, ಜನರ ಹಾಗೂ ನಗರಸಭೆ ಪ್ರತಿನಿಧಿಗಳ ಒತ್ತಾಯದ ಮೇಲೆ ತುರ್ತಾಗಿ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಗಿದೆ ಎನ್ನುತ್ತಿದ್ದಂತೆ , ಆಕ್ರೋಶಗೊಂಡ ಮಾಜಿ ಶಾಸಕ ಸತೀಶ್ ಸೈಲ್, ಒಂದೋ ಎರಡೋ ಕೆಲಸವಾಗಿದ್ದರೆ ತುರ್ತು ಎಂದು ಹೇಳಬಹುದಿತ್ತು. ಆದರೆ 173 ಕಾಮಗಾರಿ ತುರ್ತಾಗಿ ಮಾಡುವ ಅವಶ್ಯಕತೆಯಿತ್ತೇ? ನಿಮ್ಮದೇ ದರ್ಬಾರ್ ಆಗಿದೆ. ನಿಮ್ಮನ್ನು ನಿಯಂತ್ರಿಸುವವರು ಯಾರೂ ಇಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

ಅಭಿಯಂತರರ ಬಳಿ ಲಿಖಿತವಾಗಿ ಬರೆದುಕೊಂಡುವಂತೆ ಕೇಳಲು ಹೋದಾಗ ಪೌರಾಯುಕ್ತರು ಅವಕಾಶ ನೀಡಲಿಲ್ಲ. ಅಲ್ಲದೇ ತಾವು ಲಿಖಿತ ರೂಪದಲ್ಲಿ ಮೊದಲು ಬರೆದುಕೊಡಿ, ಬಳಿಕ ನಾವು ಸ್ಪಷ್ಟನೆ ಕೊಡುತ್ತೇವೆ ಎಂದು ಮಾಜಿ ಶಾಸಕರಿಗೆ ಸೈಲ್ ಅವರಿಗೆ ಪೌರಾಯುಕ್ತ ಆರ್.ಪಿ.ನಾಯ್ಕ ಹೇಳಿದರು. ಇದರಿಂದ ಕೋಪಗೊಂಡ ಮಾಜಿ ಶಾಸಕ ಸೈಲ್, ಪೌರಾಯುಕ್ತರ ಕೊಠಡಿಯಲ್ಲಿ ನೆಲದಲ್ಲಿ ಕುಳಿತು ಧರಣಿ ಆರಂಭಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next