Advertisement

Corruption Case; ಚಂದ್ರಬಾಬು ನಾಯ್ಡುಗೆ ನಾಲ್ಕು ವಾರಗಳ ಕಾಲ ಜಾಮೀನು ನೀಡಿದ ಹೈಕೋರ್ಟ್

11:54 AM Oct 31, 2023 | Team Udayavani |

ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಬಹುಕೋಟಿ ಸ್ಕಿಲ್ ಡೆವೆಲಪ್ ಮೆಂಟ್ ಭ್ರಷ್ಟಾಚಾರ ಹಗರಣದಲ್ಲಿ ಚಂದ್ರಬಾಬು ನಾಯ್ಡು ಜೈಲು ಸೇರಿದ್ದರು.

Advertisement

ಅನಾರೋಗ್ಯದ ಕಾರಣದಿಂದ ಹೈಕೋರ್ಟ್ ನಾಯ್ಡು ಅವರಿಗೆ ಜಾಮೀನು ಜಾರಿ ಮಾಡಿದೆ.

ಅ.18ರಂದು ನಾಯ್ಡು ಕುಟುಂಬಿಕರು ಮತ್ತು ಕೆಲ ಟಿಡಿಪಿ ನಾಯಕರು ಅವರನ್ನು ರಾಜಮಹೇಂದ್ರವರಂ ನ ಸೆಂಟ್ರಲ್ ಜೈಲಿನಲ್ಲಿ ಭೇಟಿ ಮಾಡಿದ್ದರು. ಬಳಿಕ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:Kerala Serial Blasts; ಕೇವಲ 3000 ರೂ ಖರ್ಚಿನಲ್ಲಿ ಬಾಂಬ್ ತಯಾರಿಸಿದ್ದ ಡೊಮಿನಿಕ್!

ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ, ಪುತ್ರ ಲೋಕೇಶ್ ಮತ್ತು ಸೊಸೆ ಬ್ರಾಹ್ಮಣಿ ಅವರು ಜೈಲಿನಲ್ಲಿ ನಾಯ್ಡು ಅವರನ್ನು ಭೇಟಿ ಮಾಡಿದ್ದರು. ಅವರೊಂದಿಗೆ ಪಕ್ಷದ ನಾಯಕರಾದ ಚಿನರಾಜಪ್ಪ, ರಾಮಮೋಹನ್ ನಾಯ್ಡು, ಬುಚ್ಛಯ್ಯ ಚೌಧರಿ ಮತ್ತು ಕಾಲ ವೆಂಕಟರಾವ್ ಮತ್ತಿತರು ಇದ್ದರು.

Advertisement

” ಔಷಧಿಗಳಿಂದ ಅವರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ತೋರುತ್ತಿದೆ. ವೈದ್ಯಕೀಯ ಪರೀಕ್ಷೆ ಹಾಗೂ ವೈದ್ಯರ ಸೂಚನೆಗಳನ್ನು ಜೈಲು ಅಧಿಕಾರಿಗಳಿಂದ ಲಿಖಿತವಾಗಿ ಕೇಳಿದ್ದೇವೆ. ಈ ಬಗ್ಗೆ ಭುವನೇಶ್ವರಿ ಕೂಡ ಪತ್ರ ಬರೆದಿದ್ದಾರೆ. ಪ್ರತಿಯನ್ನು ನೀಡಿದರೆ ನಾವು ಅವರ (ನಾಯ್ಡು) ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ಪಡೆಯುತ್ತೇವೆ” ಎಂದು ಟಿಡಿಪಿ ನಾಯಕರು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next