Advertisement
ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಆನಂದಸಾಗರ ರೆಡ್ಡಿ, ಆಡಳಿತಾಧಿಕಾರಿ ಅನಸೂಯ, ಕಚೇರಿ ಅಧೀಕ್ಷಕ ಪ್ರಕಾಶ ಮಡಿವಾಳ, ಕಚೇರಿ ಅಧಿಧೀಕ್ಷ ಬಾಬುಕೋಟೆ, ಪ್ರಥಮ ದರ್ಜೆ ಸಹಾಯಕ ಪ್ರಕಾಶ ಮಾಳಗೆ, ಪ್ರಥಮ ದರ್ಜೆ ಸಹಾಯಕಿ ವರ್ಷಾ, ನಿವೃತ್ತ ಕಚೇರಿ ಅಧೀಕ್ಷಕ ಮಾಚೆ ಕಲ್ಲಪ್ಪ, ಹೊರಗುತ್ತಿಗೆ ಸಹಾಯಕ ಶಿವಾಜಿ ಎಂಬುವವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೂರು ದಾಖಲಾಗಿದೆ. ಬ್ರಿಮ್ಸ್ ನಿರ್ದೇಶಕ ಡಾ| ಸಿ. ಚನ್ನಣ್ಣ ಹಾಗೂ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ ಶೇಟ್ಕರ್ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಇಬ್ಬರು ಹೆಸರು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ. ತಡೆಯಾಜ್ಞೆ ತೆರವುಗೊಂಡ ನಂತರ ಆ ಇಬ್ಬರ ಹೆಸರಗಳು ಕೂಡ ಸೇರ್ಪಡೆಗೊಳ್ಳಲಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಪತ್ರ ಬರೆಸಿಕೊಂಡು ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಿದ್ದರು. ವಿವಿಧ ಆರೋಪಗಳನ್ನು ಹೊತ್ತಿದ್ದ ನಿರ್ದೇಶಕರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ ಎತ್ತಂಗಡಿ ಮಾಡಿದ ಘಟನೆ ಕೂಡ ನಡೆದಿತ್ತು. ನಂತರ ಈ ಕುರಿತು ನ್ಯಾಯಾಲಯದ ಮೋರೆ ಹೋಗಿದ್ದ ನಿರ್ದೇಶಕ ಮರಳಿ ಅದೇ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
Related Articles
ಸ್ಮರಿಸಬಹುದಾಗಿದೆ. ಪ್ರಕರಣ ದಾಖಲಿಸಿಕೊಂಡ ಎಸಿಬಿ ಅ ಧಿಕಾರಿಗಳು ಶೀಘ್ರದಲ್ಲಿಯೆ ತನಿಖೆ ಶುರು ಮಾಡುವ ಸಾಧ್ಯತೆಗಳು ಇವೆ.
Advertisement
ಬ್ರಿಮ್ಸ್ ಅಕ್ರಮಗಳ ಕುರಿತು ಜಿಲ್ಲಾ ಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ದೆಹಲಿಯಿಂದ ಅ ಧಿಕಾರಿಗಳ ತಂಡ ಬಂದ ಸಂದರ್ಭದಲ್ಲಿ ಇಲ್ಲಿನ ವೈದ್ಯರು ಹಾಜರಾಗದ ಕಾರಣ 19 ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬ್ರಿಮ್ಸ್ ಅವ್ಯವಸ್ಥೆ ಕುರಿತು ಸಚಿವ ಡಿ.ಕೆ. ಶಿವಕುಮಾರ ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಜು.30ರಂದು ಅಧಿಕಾರಿಗಳ ಸಭೆ ಕರೆದಿದ್ದು, ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಮಾಹಿತಿ ನೀಡಲಾಗುವುದು.ರಾಜಶೇಖರ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜುರಾಯಿ ಸಚಿವ ದುರ್ಯೋಧನ ಹೂಗಾರ