Advertisement

ಬರಹ ಸ್ಪಷ್ಟವಾಗಲು ತಿದ್ದುಪಡಿ ಅಗತ್ಯ

12:47 PM Mar 02, 2018 | |

ಬೀದರ: ಬರವಣಿಗೆ ಪಕ್ವವಾಗಲು ವಾಕ್ಯಗಳು ಸರಳ, ಸ್ಪಷ್ಟ ಮತ್ತು ಸ್ಪುಟವಾಗಿರಬೇಕು. ಪದೇ ಪದೇ ತಿದ್ದುವಂತಾದರೆ ಅದು ನಿಜವಾದ ಬರವಣಿಗೆ ರೂಪ ಪಡೆದುಕೊಳ್ಳುತ್ತದೆ ಎಂದು ಹಂಪಿ ಕನ್ನಡ ವಿವಿ ಉಪ ಕುಲಸಚಿವ ಡಾ| ಎಸ್‌.ವೈ. ಸೋಮಶೇಖರ ಸಲಹೆ ನೀಡಿದರು.

Advertisement

ನಗರದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ ಹಾಗೂ ಜಾಣ ಜಾಣೆಯರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಪ್ರಕಾಶನ, ಕರಡಚ್ಟು ತಿದ್ದುವುದರ ಕುರಿತ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಹಾಗೂ ಬರವಣಿಗೆ ಬೇರೆ ಬೇರೆಯಾಗಿರುತ್ತದೆ. ಪ್ರದೇಶವಾರು ಭಾಷೆ ಬದಲಾದರೂ ಬರವಣಿಗೆ ಬದಲಾಗುವುದಿಲ್ಲ ಎಂದರು.

ಭಾಷೆ ನಮ್ಮ ಬದುಕು ಆಸ್ವಾದಿಸಿದರೆ, ಬರವಣಿಗೆ ಅದನ್ನು ಶ್ರೀಮಂತಗೊಳಿಸುತ್ತದೆ. ಅದು ಪರಸ್ಪರ ಭಿನ್ನಾಭಿಪ್ರಾಯ ದೂರ ಮಾಡುತ್ತದೆ. ಜಾತಿ, ಧರ್ಮ, ಪ್ರಾಂತಗಳೆಂಬ ಭೇದ ಹತ್ತಿಕ್ಕುವ ಮೂಲಕ ಮಾನವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ದೊರಕಲು ಸಹಕರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕರಡಚ್ಚು ತಿದ್ದಲು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಕಮ್ಮಟ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿ, ಮಾಜಿ ಸಿಎಂ ಮೊಯ್ಲಿ ಅವರ ಕಾಲದಲ್ಲಿ ಪುಸ್ತಕ
ಪ್ರಾಧಿಕಾರ ರಚನೆಯಾಯಿತು. ಮಕ್ಕಳಿಗೆ ಪುಸ್ತಕ ಹಂಚುವ, ಅವರಿಗೆ ಕಮ್ಮಟ ಏರ್ಪಡಿಸುವ, ಪುಸ್ತಕ ಜಾತ್ರೆ ಹಾಗೂ ಪುಸ್ತಕ ಸಂತೆ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಂಡು ಅವರಲ್ಲಿ ಸಾಹಿತ್ಯದ ಬೇರು ಬಿತ್ತಲು, ಯುವ ಬರಹಗಾರರನ್ನು ಬೆಳಕಿಗೆ ತರಲು, ನಾಡಿನ ಸಾಹಿತಿಗಳು, ಸಂಶೋಧಕರು, ವಿದ್ವಾಂಸರು, ಕಲಾಕಾರರನ್ನು ಆಸ್ವಾದಿಸುವ ಕಾರ್ಯಕ್ಕಾಗಿ ಪುಸ್ತಕ ಪ್ರಾಧಿಕಾರ ರಚಿಸಲಾಗಿದೆ ಎಂದರು.

ಪ್ರಾಚಾರ್ಯ ಡಾ| ಎಂ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತುಬದ್ಧ ಜೀವನ ಅಗತ್ಯ. ಅದು ಅಧ್ಯಯನ ಚುರುಕುಗೊಳ್ಳಲು ಪ್ರಚೋದಿಸುತ್ತದೆ. ಪರಸ್ಪರ ಉತ್ತಮ ಸಂಪರ್ಕ ಹಾಗೂ ಸಂಬಂಧಗಳು ನಮ್ಮ ಭಾಷೆ ಹಾಗೂ ಬರವಣಿಗೆ ಒಂದುಗೂಡಿಸುತ್ತವೆ ಎಂದರು. ಡಾ| ಉಮಾಕಾಂತ ಪಾಟೀಲ ಮಾತನಾಡಿದರು. 

Advertisement

ಪ್ರೊ| ವೈಜಿನಾಥ ಚಿಕಬಸೆ ಮತ್ತು ಅನುರಾಧಾ ಚಂದ್ರಕಾಂತ ವೇದಿಕೆಯಲ್ಲಿದ್ದರು. ಎಂ.ಸುರೇಶ ಸ್ವಾಗತಿಸಿದರು. ರೋಜಲಿನ್‌ ನಿರೂಪಿಸಿದರು. ಪ್ರಿಯಾಂಕಾ ಪೋಲಾ ವಂದಿಸಿದರು. ಡಾ|ಸುರೇಖಾ ಬಿರಾದಾರ, ಡಾ| ಮಹಾನಂದಾ ಮಡಕಿ, ಡಾ| ಧನಲಕ್ಷ್ಮೀ ಪಾಟೀಲ, ಶ್ವೇತಾ ಬಿರಾದಾರ, ಮಾನಾ ಸಂಗೀತಾ, ಮಲ್ಲಮ್ಮ ಸಂತಾಜಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next