Advertisement

ಮಾತೃಪೂರ್ಣ ನ್ಯೂನತೆ ಸರಿಪಡಿಸಿ

03:29 PM Nov 30, 2017 | Team Udayavani |

ಹಾವೇರಿ: ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ ನೇತೃತ್ವದಲ್ಲಿ ಕಾರ್ಯಕರ್ತೆಯರು ಬುಧವಾರ
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

Advertisement

ಗರ್ಭಿಣಿಯರಿಗೆ, ಬಾಣಂತಿಯರಿಗೆ ಅಪೌಷ್ಠಿಕತೆ, ರಕ್ತಹಿನತೆಯನ್ನು ದೂರ ಮಾಡಲು, ಶಿಶು ಮರಣ ತಡೆಗಟ್ಟಲು ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ. ಆದರೆ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಕೆಲ ನೂನ್ಯತೆಗಳಿದ್ದು, ಸರ್ಕಾರ ಅವುಗಳನ್ನು ಸರಿಪಡಿಸಿದರೆ, ಸರ್ಕಾರ ಯೋಜನೆ ಸಾರ್ಥಕವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಗಿ ಮೊಟ್ಟೆ ವಿತರಣೆಗೆ ಸರ್ಕಾರ 5 ರೂ. ನೀಡುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಪ್ರತಿದಿನ ಮೊಟ್ಟೆ ಧಾರಣೆ ಏರಿಳಿತವಾಗುತ್ತದೆ. ಇದರಿಂದ ಮೊಟ್ಟೆ ಬೆಲೆ ಹೆಚ್ಚಾದಾಗ, ಹೆಚ್ಚಿನ ಹಣವನ್ನು ಕಾರ್ಯಕರ್ತೆಯರ ಹೊರೆಯಾಗುತ್ತಿದೆ. ಇದರಿಂದ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಲು ತೊಂದರೆಯಾಗುತ್ತದೆ. ಇದರ ಜೊತೆಗೆ ಸರ್ಕಾರ 20ಕ್ಕಿಂತ ಹೆಚ್ಚು ಗರ್ಭಿಣಿ,
ಬಾಣಂತಿಯರು ಇದ್ದ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಮತ್ತೂಬ್ಬ ಸಹಾಯಕಿಯನ್ನು ನೀಡಬೇಕು. ಇದರಿಂದ ಗರ್ಭೀಣಿಯವರಿಗೆ ಹೆಚ್ಚಿನ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಕೋರಿದ್ದಾರೆ. ಮಾತೃಪೂರ್ಣ ಯೋಜನೆ ಸರಾಗವಾಗಿ ನಡೆಯಲು ಅಡುಗೆ ಸಾಮಾಗ್ರಿ ಕೊಳ್ಳಲು ಪ್ರತಿ ಅಂಗನವಾಡಿ ಕೇಂದ್ರಕ್ಕೆ  7000 ರೂ. ಬಿಡುಗಡೆ ಮಾಡಿದೆ. ಅವುಗಳ ವಿತರಣೆ
ಗುತ್ತಿಗೆ ಪಡೆದ ಗುತ್ತಿಗೆದಾರ ಕಳಪೆ ಸಾಮಗ್ರಿಗಳನ್ನು ವಿತರಣೆ ಮಾಡಿದ್ದಾರೆ. ಇನ್ನು ಬಹುತೇಕ ಕೇಂದ್ರಗಳಿಗೆ ಇಲ್ಲಿಯವರೆಗೆ ಸಾಮಾಗ್ರಿಗಳನ್ನು ವಿತರಣೆ ಮಾಡಿಲ್ಲ. ಇದರ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣ ಗಮನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಆರೋಗ್ಯ ಸುರಕ್ಷಾ ಯೋಜನೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರಿಗೆ ವಿಸ್ತರಣೆ ಮಾಡಿದೆ. ಆದರೆ ಯಾವ ಆಸ್ಪತ್ರೆಯಲ್ಲಿ ಸೌಲಭ್ಯ ಪಡೆಯಬೇಕು ಎಂದು ಮಾಹಿತಿ ನೀಡಿಲ್ಲ. ಅದಕ್ಕಾಗಿ ಜಿಲ್ಲಾಡಳಿತ ಯೋಜನೆ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಲು, ಜಿಲ್ಲೆಯಲ್ಲಿರುವ ಅಂತಹ ಆಸ್ಪತ್ರೆಗಳನ್ನು ಮಾಹಿತಿ ಒದಗಿಸಬೇಕು. ಸರ್ಕಾರ ಮರಣ
ಪರಿಹಾರ ಮೊತ್ತವನ್ನು 50 ಸಾವಿರ ರೂ. ಹೆಚ್ಚಳ ಮಾಡಿದೆ. ಆ ಹಣವನ್ನು ಮೃತ ಕುಟುಂಬಕ್ಕೆ ವಿಳಂಬ ಮಾಡದೇ ನೀಡಬೇಕು. ಅಲ್ಲದೇ ಮನವಿಯಲ್ಲಿ ನಮೂದಿಸಿರುವ ಎಲ್ಲ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿದರು. 

ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸುನಂದಾ ರೇವಣಕರ, ಲಲಿತಾ ನಾಗನಗೌಡ್ರ, ಜಿನತ ವಸ್ತ್ರದ, ಮಂಜುಳಾ ರೊಡ್ಡನವರ, ಚನ್ನಮ್ಮ ಪಾಟೀಲ, ಮಂಜುಳಾ ಭಜಂತ್ರಿ, ಭಾರತಿ ಹಿರೇಮಠ, ರಾಜೇಶ್ವರಿ ಪಾಟೀಲ, ಸರೋಜಾ ರಿತ್ತಿ, ನೀಲಮ್ಮ ಲಮಾಣಿ, ನೀಲಮ್ಮ ಹೊಸಳ್ಳಿ, ಗೀತಾ ಶೆಟ್ಟರ ಇನ್ನಿತರರಿದ್ದರು. 

Advertisement

ಮುಂಗಡ ಆರ್ಥಿಕ ನೆರವು ನೀಡಲು ಆಗ್ರಹ
ರಾಣಿಬೆನ್ನೂರ: ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಮನವಿ ಸಲ್ಲಿಸಿದರು. ನಗರದ ಕೆಇಬಿ ಗಣೇಶ
ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಿ.ಬಿ ರಸ್ತೆ, ಬಸ್‌ ನಿಲ್ದಾಣ ಸರ್ಕಲ್‌, ಹಲಗೇರಿ ಕ್ರಾಸ್‌, ಕುರುಬಗೇರಿ ಕ್ರಾಸ್‌, ದರ್ಗಾ ಸರ್ಕಲ್‌, ಎಂ.ಜಿ. ರಸ್ತೆ, ಪೋಸ್ಟ್‌ ಸರ್ಕಲ್‌ ಮೂಲಕ ಹಾಯ್ದು ತಹಶೀಲ್ದಾರ್‌ ಕಚೇರಿಗೆ ಆಗಮಿಸಿತು.

ಕಾರ್ಯಕರ್ತರು ತಮ್ಮ ಬೇಡಿಕೆಗಳಾದ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಮಾತೃಪೂರ್ಣ ಯೋಜನೆಯನ್ನು ಜಾರಿಗೆ
ತಂದಿರುವುದು ಸರಿಯಷ್ಟೆ, ಆದರೆ ಆ ಯೋಜನೆ ಪೂರ್ಣಗೊಳಿಸಲು ಮುಂಗಡವಾಗಿ ಆರ್ಥಿಕ ನೆರವು ನೀಡಬೇಕೆಂದು ಮನವಿಯಲ್ಲಿ
ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಶೀಲ್ದಾರ್‌ ರಾಮಮೂರ್ತಿ ಮಾತನಾಡಿ, ತಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು. ಆಶಾ ಮುದಿಗೌಡರ, ರೇಣುಕಾ ತಳವಾರ, ಕವಿತಾ ಬಾರ್ಕಿ, ಶಾಂತಾ ದೊಡ್ಡಗೌಡ್ರ, ನಾಗಮ್ಮ ಮುದುಕಣ್ಣನವರ, ಮೀರಾ ಬಾವಾ, ಸಾವಿತ್ರಾ ಕಾಟಿ, ಭಾರತಿ ಕೋಪರ್ಡೆ, ನಾಗರತ್ನಾ ಎಲಿಗಾರ, ಚಂದ್ರಕಲಾ ಆರ್‌.ಪಿ. ಸುಮಂಗಲಾ ಹಲಗೇರಿ, ಸುಲ್ತಾನ್‌ಬಾನು ಅತ್ತಿಗೇರಿ, ಮಹಾಲಕ್ಷೀ ಚಲವಾದಿ, ಕಮಲಾ ಕಾಸಂಬಿ, ಮಂಜುಳಾ ರಾಜನಹಳ್ಳಿ,
ಪುಷ್ಪಾ ಬಿಷ್ಠಣ್ಣನವರ, ಜಯಶ್ರೀ ಲೋಕನಗೌಡ್ರ, ಶೀತಾ ದಂಡಗಿಹಳ್ಳಿ, ಶಶಿಕಲಾ ಅಂಕಸಾಪುರ, ಸುನಂದಾ ತುಮ್ಮಿನಕಟ್ಟಿ, ಗೀತಾ ಕರೇಗೌಡ್ರ, ರಾಧಾ ಕುಲ್ಕರ್ಣಿ, ಶಕುಂತಲಾ ಹೊಂಬರಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next