ಬ್ರೆಜಿಲ್: ಆಕ್ಸ್ ಫರ್ಡ್ ಸಹಯೋಗದೊಂದಿಗೆ ಅಸ್ಟ್ರಾಜೆನೆಕಾ ಕಂಪನಿ ಸಂಶೋಧಿಸಿದ ಕೋವಿಡ್ 19 ಸೋಂಕು ನಿವಾರಣೆಯ ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಬ್ರೆಜಿಲ್ ಆರೋಗ್ಯ ಅಧಿಕಾರಿಗಳು ಬುಧವಾರ (ಅಕ್ಟೋಬರ್ 21, 2020) ತಿಳಿಸಿದ್ದಾರೆ. ಆದರೆ ಅಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ ಕೋವಿಡ್ ಲಸಿಕೆ ಪರೀಕ್ಷೆ ಮುಂದುವರಿಯಲಿದೆ ಎಂದು ಹೇಳಿದೆ.
ಅಸ್ಟ್ರಾಜೆನೆಕಾ ಕೋವಿಡ್ ಸೋಂಕು ಲಸಿಕೆಯ ಪ್ರಯೋಗಕ್ಕೊಳಗಾಗಿದ್ದ ಬ್ರೆಜಿಲ್ ವ್ಯಕ್ತಿ ಸಾವಿಗೀಡಾಗಿರುವುದಾಗಿ ಸಾವೊ ಪೌಲೋದಲ್ಲಿರುವ ಫೆಡರಲ್ ಯೂನಿರ್ವಸಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಬ್ರೆಜಿಲ್ ಆರೋಗ್ಯ ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ.
3ನೇ ಹಂತ ತಲುಪಿದ 10 ಲಸಿಕೆಗಳು:
ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ, ಮಾಡೆರ್ನಾ, ಪಿಫೈಝರ್ ಮತ್ತು ಬಯೋ ಎನ್‌ಟೆಕ್, ಜಾನ್ಸೆನ್ ಫಾರ್ಮಾಸುಟಿಕಲ್ ಕಂಪನಿ (ಜಾನ್ಸನ್ ಆ್ಯಂಡ್ ಜಾನ್ಸನ್), ಗಾಮಾಲೆಯಾ ರಿಸರ್ಚ್ ಇನ್‌ಸ್ಟಿಟ್ಯೂಟ್, ಸಿನೋವ್ಯಾಕ್, ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್, ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್, ಕ್ಯಾನ್‌ಸಿನೊ, ನೊವೊವ್ಯಾಕ್ಸ್ ಈ 10 ಸಂಸ್ಥೆಗಳು ಶೋಧಿಸಿರುವ ಲಸಿಕೆ 3ನೇ ಹಂತದ ಪ್ರಯೋಗದಲ್ಲಿವೆ. ವಿವಿಧ ದೇಶಗಳಲ್ಲಿ ಇದರ ಪ್ರಯೋಗ ಸಾಗಿದೆ. ರಷ್ಯಾ “ಸ್ಪುಟ್ನಿಕ್ 5′ ಲಸಿಕೆ ಆವಿಷ್ಕರಿಸಿದ್ದರೂ, ವಿಶ್ವಾಸಾರ್ಹತೆ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ:ಜೇಮ್ಸ್ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್
ಲಸಿಕೆ ಖರೀದಿಗೆ ರೆಡೀನಾ?
ಸಿರಿವಂತ ದೇಶಗಳು ಈಗಾಗಲೇ ಲಸಿಕೆ ಖರೀದಿ ಒಪ್ಪಂದಕ್ಕೆ ಸಹಿಹಾಕಿ ಕಾದು ಕುಳಿತಿವೆ. ಮತ್ತೆ ಕೆಲವು ದೇಶಗಳು ಲಸಿಕೆ ಪರಿಣಾಮ ನೋಡಿಕೊಂಡು ನಿರ್ಧರಿಸುವ ಸಾಧ್ಯತೆ ಇದೆ. ಆದರೆ, ಈ ಖರೀದಿ ಸ್ಪರ್ಧೆಯಲ್ಲಿ ಬಡರಾಷ್ಟ್ರಗಳು ಭಾರೀ ಹಿಂದುಳಿದಿವೆ.
ಭಾರತ: ವಿಶ್ವದ 2ನೇ ಸೋಂಕಿತ ರಾಷ್ಟ್ರ ಭಾರತ ಇದುವರೆಗೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಆದರೆ, ಇದಕ್ಕಾಗಿ ಹಣ ಮೀಸಲಿಟ್ಟು ಕೊಂಡಿದೆ. ಅ.4ರಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿರುವಂತೆ, 2021ರಲ್ಲಿ ಲಸಿಕೆ ತಯಾರಾದ ತಕ್ಷಣ 40 50 ಕೋಟಿ ಲಸಿಕೆ ಖರೀದಿಗೆ ಸರಕಾರ ಯೋಜಿಸಿದೆ. ಮೊದಲ ಹಂತದಲ್ಲಿ ಈ ಲಸಿಕೆ 20,25 ಲಕ್ಷ ಮಂದಿಗೆ ಸಾಕಾಗಲಿದೆ. ಯಾವ ಸಂಸ್ಥೆಯಿಂದ ಖರೀದಿಸುವುದು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.