Advertisement

ಲಸಿಕೆ ಹಾಕಿಸಿಕೊಂಡ ಜಿಲ್ಲಾಧಿಕಾರಿ

02:30 PM Feb 09, 2021 | Team Udayavani |

ಕೋಲಾರ: ಕೊರೊನಾ ಮುಕ್ತ ದೇಶವನ್ನಾಗಿ ಮಾಡಲು ಭಾರತವು ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್‌  ಮತ್ತು ಕೋವ್ಯಾಕ್ಸಿನ್‌ಗಳನ್ನು ಕಂಡು ಹಿಡಿದಿದ್ದು, ಈ ಲಸಿಕೆಗಳನ್ನು ಪಡೆಯುವುದರಿಂದ ಅಡ್ಡ ಪರಿಣಾಮವಿಲ್ಲ. ಯಾವುದೇ ಆತಂಕ ಬೇಡ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

Advertisement

ಸೋಮವಾರ ಜಿಲ್ಲಾ ಎಸ್‌.ಎನ್‌.ಆರ್‌ ಆಸ್ಪತ್ರೆಯಲ್ಲಿ ಕೋವಿಶೀಲ್ಡ್‌ ಕೊರೊನಾ ಲಸಿಕೆ ಹಾಕಿಸಿಕೊಂಡು  ಅವರು ಮಾತನಾಡಿದರು. ಸಾರ್ವಜನಿಕರು ಲಸಿಕೆಯ ಬಗ್ಗೆ ಅನುಮಾನ ಹಾಗೂ ಗೊಂದಲ ಇಟ್ಟುಕೊಳ್ಳಬೇಡಿ. ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಶೇ.65 ರಷ್ಟು ಪ್ರಗತಿ ಸಾ ಸಿದ್ದೇವೆ. ಇದುವರೆಗೆ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿರುವುದಿಲ್ಲ ಎಂದು ಮಾಹಿತಿ ನೀಡಿದರು.

ಲಸಿಕೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ನೋಂದಾಯಿತ ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆಯ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ. ಲಸಿಕೆ ಇಲ್ಲದಿದ್ದಾಗ ಲಸಿಕೆ ಯಾವಾಗ ಬರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೆವು. ಆದರೆ ಲಸಿಕೆ ಬಂದ ನಂತರ ಹಿಂಜರಿಕೆ ಏಕೆ? ಲಸಿಕೆಯನ್ನು ಸಾವಿರಾರು ಜನರ ಮೇಲೆ ಪ್ರಯೋಗ ಮಾಡಿ, ಯಶಸ್ವಿಯಾದ ನಂತರ ನೀಡಲಾಗುತ್ತಿದೆ. ಲಸಿಕೆಯಲ್ಲಿ ಎರಡು ಡೋಸ್‌ ಗಳನ್ನು ಪಡೆಯಬೇಕು. ಮೊದಲ ಡೋಸ್‌ ಪಡೆದ 28 ದಿನಗಳ ನಂತರ ಎರಡನೇ ಡೋಸ್‌ನ್ನು ಪಡೆಯಬೇಕು ಎಂದರು.

ಇದನ್ನೂ ಓದಿ :ಇಂದಿನ ಮಹಿಳೆಯರದು ಸೀತಾ ಮಾತೆ ಪಾಡು

ಲಸಿಕೆಯನ್ನು ಹಾಲುಣಿಸುವ ತಾಯಂದಿರು,ಗರ್ಭಿಣಿಯರು, ಶ್ವಾಸಕೋಶ ಸಂಬಂಧಿತ ಖಾಯಿಲೆಗಳನ್ನು ಹೊಂದಿರುವರು, ಅಲರ್ಜಿ ಹೊಂದಿರುವರು ಹಾಗೂ 18 ವರ್ಷ ಒಳಪಟ್ಟವರು ಪಡೆಯುವಂತಿಲ್ಲ ಎಂದು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next