Advertisement

ಶಾಸಕ ಶಿವಲಿಂಗೇಗೌಡರಿಗೆ ಕೊರೊನಾ: ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

12:34 PM Jan 14, 2022 | Team Udayavani |

ಅರಸೀಕೆರೆ: ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಮತ್ತೇ ಕೊರೊನಾ ಪರೀಕ್ಷೆಯಿಂದ ಪಾಸಿಟಿವ್‌ ಕಂಡು ಬಂದಿದ್ದು ಗುರುವಾರ ಬೆಂಗಳೂರಿಗೆ ತೆರಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

Advertisement

ನಗರದ ತಾಲೂಕು ಆರೋಗ್ಯಾಧಿ ಕಾರಿಗಳ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಕೊರೊನಾ 3ನೇ ಅಲೆ ನಿ ಯಂತ್ರಣದ ಬಗ್ಗೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ರೋಗ ನಿಯಂತ್ರಣಕ್ಕೆ ಸಲಹೆ-ಸೂಚನೆ ನೀಡಿದ್ದರು.

ಬೂಸ್ಟರ್‌ ಡೋಸ್‌ ವಿತರಣೆ

ಸೋಮವಾರ ಬೆಳಗ್ಗೆ ಬೂಸ್ಟರ್‌ ಲಸಿಕೆ ಪಡೆದು ಜನರಲ್ಲಿ ಜಾಗೃತಿ ಮೂಡಿಸಿದ್ದರು. ಬುಧವಾರ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದ ಅವರಿಗೆ ಗುರುವಾರ ಪಾಸಿಟಿವ್‌ ಫ‌ಲಿತಾಂಶ ಬಂದಿರುವ ಕಾರಣ ಅವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿ ಸಲಾಗುತ್ತಿದೆ. ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಶಾಸಕರು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಬರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಕೊರೊನಾ ಪ್ರಥಮ ಹಂತದ ಅಲೆಯಲ್ಲಿ ಶಾಸಕರ ಪತ್ನಿ ಅವರಿಗೆ ಕೊರೊನಾ ಪಾಸಿಟಿವ್‌ ಬಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ಕೆಲವೇ ದಿನಗಳಲ್ಲಿ ಶಾಸಕರಿಗೂ ಪಾಸಿಟಿವ್‌ ದೃಢಪಟ್ಟಿದೆ. 15 ದಿನ ಹಾಸನ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು.

Advertisement

ಶಾಸಕರ ಪ್ರತಿಕ್ರಿಯೆ

ತಾವು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ವರದಿ ಬಂದಿದೆ. ಆದರೆ ತಮ್ಮ ದೇಹದಲ್ಲಿ ರೋಗ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆರೋಗ್ಯ ಕೂಡ ಚೆನ್ನಾಗಿದೆ, ಆದರೆ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಸೋಂಕಿತ ವ್ಯಕ್ತಿಗಳು ನಿಯಮ ಪಾಲನೆ ಮಾಡುವುದು ಕಡ್ಡಾಯ. ಹೀಗಾಗಿ ತಾವು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ಪರೀಕ್ಷೆಗಳ ಜತೆಗೆ ಸೂಕ್ತ ಚಿಕಿತ್ಸೆ ಪಡೆಯುತ್ತೇನೆ. ಕ್ಷೇತ್ರದ ಜನತೆ ಹಾಗೂ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಆತಂಕಕ್ಕೆ ಒಳಗಾಗ ‌ಬಾರದು. ದಯಮಯನಾದ ಭಗ ವಂ ತನ ಆಶೀರ್ವಾದದಿಂದ ಶೀಘ್ರ ಗುಣ ಮುಖರಾಗಿ ಹೊರ ಬರುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next