Advertisement

ಮುಂಜಾಗೃತಿಯಿಂದ ಕೊರೊನಾ ನಿಯಂತ್ರಣ

06:25 PM Jun 23, 2021 | Team Udayavani |

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಕಣ್ಣು,ಕಿವಿ ಕಳೆದುಕೊಂಡಿದೆ. ಜನರಆರೋಗ್ಯ, ಆರ್ಥಿಕ ಪರಿಸ್ಥಿತಿಯಬಗ್ಗೆ ಕಾಳಜಿಯೇ ಇಲ್ಲವಾಗಿದೆಎಂದು ಮಾಜಿ ಸಚಿವ ಹಾಗೂಶಾಸಕ ಕೃಷ್ಣಬೈರೇಗೌಡ ಹೇಳಿದರು.

Advertisement

ತಾಲೂಕಿನ ಘಾಟಿ ಕ್ಷೇತ್ರದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕಾಂಗ್ರೆಸ್‌ ಪಕ್ಷದವತಿಯಿಂದ ದಿನಸಿ ಕಿಟ್‌ ವಿತರಿಸಿಮಾತನಾಡಿ, ರಾಜ್ಯದಲ್ಲಿ ಕೋವಿಡ್‌ಲಸಿಕೆ ಸೇರಿದಂತೆ ಆರೋಗ್ಯಕ್ಕೆಸಂಬಂಧಿಸಿದ ಎಲ್ಲಾ ರೀತಿಯಸೌಲಭ್ಯಗಳಿಂದ ಜನರು ವಂಚಿತರಾಗಿದ್ದಾರೆ. ಇದರ ಪರಿಣಾಮವೇಕೊರೊನಾ ಸಂದರ್ಭದಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಸರ್ಕಾರ ಮುಂಜಾಗೃತೆವಹಿಸಿದ್ದರೆ ಸಾವುಗಳ ಸಂಖ್ಯೆಯನ್ನುಕಡಿಮೆ ಮಾಡಿಕೊಳ್ಳಲು ಅವಕಾಶವಿತ್ತು ಎಂದು ಹೇಳಿದರು.

ವಾರಿಯರ್ಸ್‌ ಕೆಲಸ ಶ್ಲಾಘನೀಯ:ಕೊರೊನಾ ಸಂಕಷ್ಟದಲ್ಲಿ ಸೋಂಕಿತರಸೇವೆಯಲ್ಲಿ ಆಶಾ, ಅಂಗನವಾಡಿಕಾರ್ಯಕರ್ತರ ಕೆಲಸ ಶ್ಲಾಘನೀಯ. ಕಾಂಗ್ರೆಸ್‌ ಪಕ್ಷದ ವತಿಯಿಂದ ರಾಜ್ಯದ ವಿವಿಧ ಕಡೆಗಳಲ್ಲಿಬಡವರು ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ದಿನಸಿಕಿಟ್‌ ಸೇರಿದಂತೆ ಅಗತ್ಯ ಸಹಾಯಮಾಡಲಾಗುತ್ತಿದೆ ಎಂದರು.

ಶಾಸಕಕೃಷ್ಣಬೈರೇಗೌಡ ಅವರನ್ನುತೂಬಗೆರೆ ಹೋಬಳಿ ಕಾಂಗ್ರೆಸ್‌ಸಮಿತಿವತಿಯಿಂದ ಅಭಿನಂದಿಸಲಾಯಿತು. ಶಾಸಕ ಟಿ.ವೆಂಕಟರಮಣಯ್ಯ, ವಿಧಾನ ಪರಿಷತ್‌ಸದಸ್ಯ ಎಸ್‌.ರವಿ, ಕಾಂಗ್ರೆಸ್‌ತೂಬಗೆರೆ ಬ್ಲಾಕ್‌ ಸಮಿತಿ ಅಧ್ಯಕ್ಷಎನ್‌.ರಂಗಪ್ಪ, ಕಾಂಗ್ರೆಸ್‌ ಹಿರಿಯಮುಖಂಡ ಎ.ಸಿ.ಶ್ರೀನಿವಾಸ್‌,ಮುನ್ನನರಸಿಂಹಯ್ಯ, ಆಂಜಿನಪ್ಪ,ಜಗನ್ನಾಥಚಾರ್‌, ಗೋಪಾಲ್‌ನಾಯಕ್‌, ಹೋಬಳಿ ಅಧ್ಯಕ್ಷಶ್ರೀಧರ್‌, ದೇವನಹಳ್ಳಿ ತಾಲೂಕುಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌,ಉಪಾಧ್ಯಕ್ಷ ಶಾಂತಕುಮಾರ್‌,ಒಬಿಸಿ ತಾಲೂಕುಅಧ್ಯಕ್ಷಜಗನ್ನಾಥ್‌ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next