Advertisement

ಸಣ್ಣಪುಟ್ಟ ವ್ಯಾಪಾರ, ಉದ್ಯಮಕ್ಕೆ ಕೊರೊನಾ ಕಂಟಕ!

07:29 PM Apr 26, 2021 | Team Udayavani |

ಕುಣಿಗಲ್: ಕೋವಿಡ್ ಮಾರ್ಗಸೂಚಿ ಹಾಗೂವೀಕೆಂಡ್‌ ಕರ್ಫ್ಯೂ ತಾಲೂಕಿನ ಜನ ಸಾಮಾನ್ಯರಮೇಲೆ ದುಷ್ಟಪರಿಣಾಮ ಬೀರಿದೆ. ದಿನನಿತ್ಯದುಡಿದು ತಿನ್ನುವವರ ಬದುಕು ತೀವ್ರ ಸಂಕಷ್ಟಕ್ಕೆಸಿಲುಕಿದ್ದು, ಅವರ ನೆರವಿಗೆ ಸರ್ಕಾರ,ಜನಪ್ರತಿನಿಧಿಗಳು, ಪ್ರಗತಿ ಪರ ಸಂಘಟನೆಗಳುಬಾರದಿರುವುದು ದುರಾದೃಷ್ಟಕರ ಸಂಗತಿ.

Advertisement

ತಾಲೂಕಿನಲ್ಲಿ ಕೊರೊನಾ ಎರಡನೇ ಅಲೆವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರಹೊರಡಿಸಿದ ಕೊರೊನಾ ಮಾರ್ಗಸೂಚಿ, ಕರ್ಫ್ಯೂಜಾರಿಯಿಂದ ಬೀದಿ ಬದಿ ವ್ಯಾಪಾರಿಗಳ ಬದುಕುಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಕೊರೊನಾ ಅಬ್ಬರ,ಮತ್ತೂಂದೆಡೆ ವ್ಯಾಪಾರ ಇಲ್ಲ.

ಸಂಕಷ್ಟಗಳನ್ನುಎದರಿಸುತ್ತಾ ದಿನದೂಡುವಂತಹ ಪರಿಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದಾಗಿದೆ. ಕೊರೊನಾ ಅಲೆಗೆ ಬೆಚ್ಚಿಬಿದ್ದಿರುವ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಕರ್ಫ್ಯೂ ಹೀಗೆ ಮುಂದುವರಿದರೆ ಮುಂದೇನುಎಂಬ ಆತಂಕದಲ್ಲಿ ದಿನದ ದುಡಿಮೆಯನ್ನೇ ನಂಬಿಜೀವನ ನಡೆಸುವ ಜನರನ್ನು ಕಾಡುತ್ತಿದೆ.

ಕಳೆದ ವರ್ಷ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದ ಈಗಾಗಲೇ ಹೈರಾಣರಾಗಿರುವಜನತೆಗೆ ಇನ್ನೇನು ಕೊರೊನಾ ಹೋಯಿತ್ತು ಎಂದುನಿಟ್ಟುಸಿರುವ ಬಿಡುವ ಮುನ್ನವೇ ಕೋವಿಡ್‌ 2ನೇಅಲೆ ವಕ್ಕರಿಸಿ ನಾಗರಿಕರನ್ನು ಮತ್ತೆ ಭಯಭೀತಿಗೊಳಿಸಿದ್ದು, ಹಂತ-ಹಂತವಾಗಿ ಚೇತರಿಕೆ ಕಂಡರೂ,ಸಂಪೂರ್ಣ ಸುಧಾರಿಸಿಕೊಳ್ಳುವ ಮುನ್ನವೇ 2ನೇಅಲೆ ಶಾಕ್‌ ನೀಡಿದೆ.

ಅದರಲ್ಲೂ ಬೀದಿ ಬದಿವ್ಯಾಪಾರಿಗಳು, ಆಟೋ ರಿಕ್ಷಾ ಚಾಲಕರು, ಟೀಅಂಗಡಿ, ಹೋಟೆಲ್‌ ಹಾಗೂ ಗ್ಯಾರೇಜ್‌,ಶೋರೂಂನಲ್ಲಿ ಕೆಲಸ ಮಾಡುವ ಉದ್ಯೋಗಿಗಳುಮತ್ತು ಸಣ್ಣಪುಟ್ಟ ವ್ಯಾಪಾರ, ಉದ್ಯಮ ಕೊರೊನಾಕೆಂಗಣ್ಣಿಗೆ ಗುರಿಯಾಗಿವೆ.

Advertisement

ನೆಲಕಚ್ಚಿದ ವ್ಯಾಪಾರ ವಹಿವಾಟು: ಮೊದಲೇಸಾರಿಗೆ ಮುಷ್ಕರದ ಬಿಸಿ ವ್ಯಾಪಾರಿಗಳ ಮೇಲೆಬಿದ್ದಿದ್ದು, ಜನರು ಗ್ರಾಮೀಣ ಪ್ರದೇಶದಿಂದಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಮಧ್ಯೆ ಕೊರೊನಾ ಉಲ್ಬಣದಿಂದ ಜನರು ಪಟ್ಟಣಕ್ಕೆಬರುತ್ತಿಲ್ಲ. ಹಾಗಾಗಿ ವ್ಯಾಪಾರ ವಹಿವಾಟುಸಂಪೂರ್ಣ ನೆಲಕಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.ಕಳೆದ ವರ್ಷ ಕೊರೊನಾ, ಲಾಕ್‌ಡೌನ್‌ಗೆತುತ್ತಾದ ಜನರಿಗೆ ಸಂಸದ ಡಿ.ಕೆ.ಸುರೇಶ್‌, ಶಾಸಕಡಾ.ರಂಗನಾಥ್‌ ಡಿ.ಕೆ.ಚಾರಿಟಬಲ್‌ ಟ್ರಸ್ಟ್‌ನಿಂದಧವಸ, ಧಾನ್ಯ, ಹಣ್ಣು, ತರಕಾರಿ, ವಿಟಮಿನ್‌ಮಾತ್ರೆಗಳು ನೀಡಿದ್ದರು.

ಅಲ್ಲದೆ ಮಾಜಿ ಸಚಿವಡಿ.ನಾಗರಾಜಯ್ಯ ಹಾಗೂ ಬಿಜೆಪಿಯಕಾರ್ಯಕರ್ತರು ಸಂತ್ರಸ್ತರಿಗೆ ನೆರವಾದರೂ ಇತ್ತಾಸರ್ಕಾರ ಕಾರ್ಮಿಕ ಇಲಾಖೆಯಿಂದ ದಿನಸಿ ಕಿಟ್‌ವಿತರಿಸಿತ್ತು. ತಾಲೂಕು ಆಡಳಿತ ನಿರಾಶ್ರಿತ ಕೇಂದ್ರಪ್ರಾರಂಭಿಸಿ ಸಂತ್ರಸ್ತರ ನೆರವಿಗೆ ಮುಂದಾಗಿತ್ತು.

ಆದರೆ, ಕಳೆದ ಬಾರಿಗಿಂತ ಈಗ ಕೊರೊನಾಎರಡನೇ ಅಲೆ ವ್ಯಾಪಾಕವಾಗಿ ಹರಡಿದ್ದು,ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಸಕಡಾ.ಎಚ್‌.ಡಿ.ರಂಗನಾಥ್‌ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವಕಾರ್ಯದಲ್ಲಿ ತೋಡಗಿರುವುದು ಜನರ ಪ್ರಶಂಸೆಗೆಕಾರಣವಾಗಿದೆ.

ನೆರವಿಗೆ ಧಾವಿಸಲಿ: ಕಳೆದ ಬಾರಿ ಕೊರೊನಾಹಾಗೂ ಲಾಕ್‌ಡೌನ್‌ ವೇಳೆ ಸಂತ್ರಸ್ತರಿಗೆ ಸಹಾಯಮಾಡಲು ತಾ ಮುಂದು, ನಾ ಮುಂದು ಎಂದುರಾಜಕೀಯ ಪಕ್ಷಗಳು, ವಿವಿಧ ಸಂಘಟನೆ ಸಹಾಯಹಸ್ತಕ್ಕೆ ಮುಂದಾಗಿದ್ದವು. ಆದರೆ, ಈಗ ಯಾರುಮುಂದೆ ಬಾರದಿರುವುದು ದುರಾದೃಷ್ಟಕರ. ಈಗಾಲಾದರೂ ನೊಂದ ಜನರ ನೆರವಿಗೆ ಸರ್ಕಾರ,ಜನಪ್ರತಿನಿಧಿಗಳು, ಸಂಘಟನೆಗಳು ಮುಂದಾಗಲುಮನಸ್ಸು ಮಾಡಿ ಮಾನವೀಯತೆಮೆರೆಯಬೇಕಾಗಿದೆ.

ಕೆ.ಎನ್‌.ಲೋಕೇಶ್

Advertisement

Udayavani is now on Telegram. Click here to join our channel and stay updated with the latest news.

Next