Advertisement

ಕೊರೊನಾಗೆ ಕಲಬುರಗಿ ವೃದ್ಧ ಸಾವು: ಕುಟುಂಬದ ನಾಲ್ವರ ರಕ್ತ, ಕಫದ ಮಾದರಿ ಪರೀಕ್ಷೆಗೆ ರವಾನೆ

09:58 AM Mar 14, 2020 | Mithun PG |

ಕಲಬುರಗಿ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ ಒಟ್ಟು 46 ಜನರ ನಿಗಾ ವಹಿಸಲಾಗುತ್ತಿದೆ. ಇದರಲ್ಲಿ 36 ಜನರು ಗಂಭೀರ ಪರಿಣಾಮ ( ಹೈ ರಿಸ್ಕ್) ಮತ್ತು 15 ಜನರನ್ನು ಕಡಿಮೆ ಪರಿಣಾಮ (ಲೋ ರಿಸ್ಕ್) ಎಂದು ವಿಂಗಡಿಸಲಾಗಿದೆ. ಇವರಲ್ಲಿ ನಾಲ್ವರ ರಕ್ತ, ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್ ಗೆ  ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ ರಿಸ್ಕ್  ಎಂದು ಪರಿಗಣಿಸಿರುವ 31 ಜನರಿಗೆ ತಲಾ ಒಬ್ಬರಂತೆ ಅಧಿಕಾರಿಗಳನ್ನು ನೇಮಿಸಿ ನಿಗಾ ವಹಿಸಲಾಗುತ್ತಿದೆ. ಈ 31 ಜನರ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳ ಪತ್ತೆಗೆ ಆಯಾ ಅಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ. ಅಲ್ಲದೇ, ಮುನ್ನೆಚ್ಚರಿಕೆ ಕ್ರಮವಾಗಿ 31 ಜನರನ್ನೂ ಇಎಸ್ ಐ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಘಟಕದಲ್ಲಿ ದಾಖಲಿಸಲಾಗುತ್ತೆ ಎಂದರು.

ರಕ್ತ, ಕಫದ ಮಾದರಿ ಸಂಗ್ರಹಿಸಿದ ನಾಲ್ಕರೂ ಮೃತನ ಕುಟುಂಬದವರೇ ಆಗಿದ್ದು, ಇದರಲ್ಲಿ ಮೂವರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ಪರೀಕ್ಷಾ ವರದಿ ಬರುವ ಸಾಧ್ಯತೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next