Advertisement

ಮಹಾರಾಷ್ಟ್ರದ 10 ಜಿಲ್ಲೆಗಳಲ್ಲಿ ಕೊರೊನಾ ಕಟ್ಟೆಚ್ಚರ

11:14 PM Apr 23, 2023 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಎಚ್ಚೆತ್ತಿರುವ ಅಲ್ಲಿನ ಆರೋಗ್ಯ ಸಚಿವ ತಾನಾಜಿ ಸಾವಂತ್‌ ಸಭೆಯೊಂದನ್ನು ನಡೆಸಿದ್ದಾರೆ. ಅಪಾಯದ ಪ್ರಮಾಣ ಗರಿಷ್ಠವಿರುವ ಪುಣೆ, ಮುಂಬೈ, ಥಾಣೆ ಸೇರಿ ಒಟ್ಟು 10 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ತಾಕೀತು ಮಾಡಿದ್ದಾರೆ.

Advertisement

ಕೊರೊನಾ ಕಾರ್ಯಪಡೆಯನ್ನೂ ಪುನರ್ರಚನೆ ಮಾಡಿದ್ದಾರೆ. ಇದು ಆ ರಾಜ್ಯ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರ ಲಕ್ಷಣವಾಗಿದೆ. “ಪ್ರತಿನಿತ್ಯ ನಡೆಸುವ ಕೊರೊನಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಕೊರೊನಾ ಪರೀಕ್ಷೆ ಸಂಬಂಧ ಇತ್ತೀಚೆಗೆ ನಡೆಸಿರುವ ಪರೀಕ್ಷಾರ್ಥ ಪ್ರದರ್ಶನದಲ್ಲಿ ಹಲವು ದೋಷಗಳು ಕಂಡುಬಂದಿವೆ. ಅವನ್ನೆಲ್ಲ ಸರಿಪಡಿಸಿಕೊಳ್ಳಬೇಕು. ಮೆಟ್‌ಮಾರ್ಫಿನ್‌ ಮಾತ್ರೆಗಳಿಂದ ಕೊರೊನಾ ರೋಗಿಗಳಿಗೆ ಲಾಭವಿದೆ. ಆದರೆ ಅದನ್ನು ಶಿಷ್ಟಾಚಾರ ಪಟ್ಟಿಯಲ್ಲಿ ಸೇರಿಸಿಲ್ಲ’ ಎಂದು ಡಾ.ಗಂಗಾ ಖೇಡ್ಕರ್‌ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಗಮನ ಹರಿಸಿ ಎಂದು ಸಚಿವ ತಾನಾಜಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next