Advertisement
ಏಕೈಕ ಗೋಲನ್ನು ಲೌಟಾರೊ ಮಾರ್ಟಿನೆಜ್, ಹೆಚ್ಚುವರಿ ಸಮಯದ 112ನೇ ನಿಮಿಷದಲ್ಲಿ ಬಾರಿ ಸಿ ದರು. ಡಿ ಮಾರಿಯ ನೀಡಿದ ಪಾಸನ್ನು ಅವರು ಗೋಲಾಗಿಸುವಲ್ಲಿ ಯಶಸ್ವಿಯಾದರು.
ಇದು ಲೌಟಾರೊ ಹೊಡೆದ 5ನೇ ಗೋಲಾಗಿತ್ತು. ಕೂಟದ ಸರ್ವಾಧಿಕ ಗೋಲು ವೀರನೆಂಬ ಹೆಗ್ಗಳಿಕೆ ಯೊಂದಿಗೆ “ಗೋಲ್ಡನ್ ಬೂಟ್’ ಗೆದ್ದರು. 97ನೇ ನಿಮಿಷದಲ್ಲಿ ಅವರು ಬದಲಿ ಆಟಗಾರನಾಗಿ ಕಣಕ್ಕಿಳಿ ದಿದ್ದರು. ಕೊಲಂಬಿಯಾ ಗೋಲ್ ಕೀಪರ್ ಕ್ಯಾಮಿಲೊ ವರ್ಗಾಸ್ ಅವರನ್ನು ವಂಚಿಸಿ ಗೋಲು ಬಾರಿಸಿ ದೊಡನೆ ಲೌಟಾರೊ ಮಾರ್ಟಿನೆಜ್ ಮಾಡಿದ್ದೇನೆಂದರೆ, ಗಾಯಾಳಾಗಿ ಹೊರಗೆ ಕುಳಿತ್ತಿದ್ದ ಮೆಸ್ಸಿ ಅವರನ್ನು ತಬ್ಬಿಕೊಂಡದ್ದು. ಮೆಸ್ಸಿಗೆ ಪಾದದ ನೋವು
ಮೆಸ್ಸಿ ಮೊದಲಾರ್ಧದಲ್ಲೇ ಪಾದದ ನೋವಿಗೆ ಸಿಲುಕಿದ್ದರು. ಆದರೂ ಆಟ ಮುಂದುವರಿಸಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಅಂಗಳ ದಲ್ಲೇ ಬಿದ್ದವರಿಗೆ ಮತ್ತೆ ಆಡಲಿಳಿ ಯಲು ಸಾಧ್ಯ ವಾಗಲಿಲ್ಲ. ಬಲಗಾಲಿನ ಬೂಟನ್ನು ಕಳಚಿ ಮೈದಾನ ತೊರೆ ದರು. ಹೀಗೆ, ಮೆಸ್ಸಿ ಅವರ ಕೊನೆಯ ಕೊಪಾ ಅಮೆರಿಕ ಪಂದ್ಯ ಮಿಶ್ರ ಅನುಭವ ನೀಡಿತು. ಆರ್ಜೆಂಟೀನಾದ ಮತ್ತೋರ್ವ ಶ್ರೇಷ್ಠ ಆಟಗಾರ ಏಂಜೆಲ್ ಡಿ ಮಾರಿಯ ಕೂಡ ವಿದಾಯ ಹೇಳಿದರು.
Related Articles
2024ರ ಕೊಪಾ ಅಮೆರಿಕ ಪ್ರಶಸ್ತಿ ಜಯಿಸುವುದರೊಂದಿಗೆ ಲೆಜೆಂಡ್ರಿ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಇದು ಅವರಿಗೆ ಒಲಿದ ಸೀನಿಯರ್ ವಿಭಾಗದ 45ನೇ ಟ್ರೋಫಿಯಾಗಿದೆ. ಫುಟ್‌ಬಾಲ್ ಇತಿಹಾಸದಲ್ಲಿ ಇದೊಂದು ದಾಖಲೆ. ಈ ಸಂದರ್ಭದಲ್ಲಿ ಅವರು ಡ್ಯಾನಿ ಅಲ್ವೆಸ್ ಅವರ 44 ಟ್ರೋಫಿಗಳ ದಾಖಲೆ ಮುರಿದರು.
Advertisement