Advertisement

ಕೊಪ ಅಮೆರಿಕ ಫೈನಲ್: ಬ್ರಝಿಲ್ ವಿರುದ್ಧ ಗೆದ್ದ ಅರ್ಜೆಂಟೀನಾ, ಕೊನೆಗೂ ಕಪ್ ಎತ್ತಿದ ಮೆಸ್ಸಿ

07:54 AM Jul 11, 2021 | Team Udayavani |

ರಿಯೋ ಡಿ ಜನೈರೋ: ಭಾರೀ ಕುತೂಹಲ ಮೂಡಿಸಿದ್ದ ಮೆಸ್ಸಿ ವರ್ಸಸ್ ನೇಯ್ಮರ್ ಕಾಳಗದಲ್ಲಿ ಮೆಸ್ಸಿ ಜಯಭೇರಿ ಸಾಧಿಸಿದ್ದಾರೆ. ಕೊಪ ಅಮೆರಿಕಾ ಫೈನಲ್  ನಲ್ಲಿ ಬ್ರಝಿಲ್ ವಿರುದ್ಧ ಗೆದ್ದ ಅರ್ಜೆಂಟೀನಾ ತಂಡ 15ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು. ಈ ಗೆಲುವಿನೊಂದಿಗೆ ಫುಟ್ ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯ ಅಂತಾರಾಷ್ಟ್ರೀಯ ಕಪ್ ಎಂಬ ಮರೀಚಿಕೆ ಇಂದಿಗೆ ಕೊನೆಯಾಗಿದೆ.

Advertisement

ಇಲ್ಲಿನ ಮರಾಕನ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 1-0 ಅಂತರದ ಗೆಲುವು ಸಾಧಿಸಿತು. 22ನೇ ನಿಮಿಷಕ್ಕೆ ಏಂಜಲ್ ಡಿ ಮರಿಯಾ ಬಾರಿಸಿದ ಗೋಲು ಮೆಸ್ಸಿ ಬಳಗಕ್ಕೆ ಮೇಲುಗೈ ನೀಡಿತು.

ಇದನ್ನೂ ಓದಿ:ಆ್ಯಶ್ಲಿ ಬಾರ್ಟಿ ಐತಿಹಾಸಿಕ ಸಾಧನೆ : ಒಂದು ಕಾಲದ ಕ್ರಿಕೆಟರ್‌, ಇಂದು ವಿಂಬಲ್ಡನ್‌ ವಿನ್ನರ್‌

ಕೂಟದಲ್ಲಿ ನಾಲ್ಕು ಗೋಲುಗಳೊಂದಿಗೆ ಹೆಚ್ಚು ಗೋಲು ಹೊಡೆದವರ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನವನ್ನು ಮೆಸ್ಸಿ ಪಡೆದಿದ್ದಾರೆ. ಬ್ರಝಿಲ್ ನ ದಿಗ್ಗಜ ನೇಯ್ಮರ್ ಕೂಡಾ ನಾಲ್ಕು ಗೋಲು ಬಾರಿಸಿದ್ದಾರೆ.

Advertisement

ಪಂದ್ಯ ಮುಗಿಯುತ್ತಿದ್ದಂತೆ ಭಾವುಕರಾಗಿದ್ದ ಮೆಸ್ಸಿಯನ್ನು ಸಹ ಆಟಗಾರರು ಎತ್ತಿಕೊಂಡು ಸಂಭ್ರಮಾಚರಣೆ ಮಾಡಿದರು. ವೈಯಕ್ತಿಕವಾಗಿ ಮತ್ತು ಕ್ಲಬ್ ಪರವಾಗಿ ಸಾಕಷ್ಟು ಹೆಸರು ಮಾಡಿರುವ ಲಿಯೋನೆಲ್ ಮೆಸ್ಸಿಗೆ ಅರ್ಜೆಂಟೀನಾ ಜೆರ್ಸಿಯಲ್ಲಿ ಇದು ಮೊದಲ  ಕಪ್.

Advertisement

Udayavani is now on Telegram. Click here to join our channel and stay updated with the latest news.

Next