Advertisement
1.ಏನಿದು ಸಿಒಪಿ 26?ಜಾಗತಿಕ ತಾಪಮಾನ ಬದಲಾವಣೆ ವಿಚಾರವಾಗಿ ಪ್ರತಿವರ್ಷವೂ ಸಭೆ ಸೇರಿ, ಇದನ್ನು ಕಡಿಮೆ ಮಾಡಿಕೊಳ್ಳಲು ಒಂದಷ್ಟು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಕಾನ್ಫರೆನ್ಸ್ ಆಫ್ ಪಾರ್ಟೀಸ್ ಎಂದು ಹೆಸರಿಸಲಾಗಿದೆ. ಇದರಲ್ಲಿ 190 ಸದಸ್ಯ ರಾಷ್ಟ್ರಗಳಿವೆ.
1995ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ಮೊದಲ ಸಭೆ ನಡೆಯಿತು. 1997ರಲ್ಲ ಜಪಾನ್‌ನ ಕ್ಯೂಟೋದಲ್ಲಿ ಮೂರನೇ ಸಿಒಪಿ ಶೃಂಗ ನಡೆದು, ಗ್ಯಾಸ್ ಎಮಿಶನ್ ಕಡಿಮೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.ಇದನ್ನು 2005ರಲ್ಲಿ ಕ್ಯೂಟೋ ಪ್ರೊಟೋಕಾಲ್ ಅನ್ನು ಜಾರಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು. 3.ಪ್ಯಾರೀಸ್ ಶೃಂಗ ಏಕೆ ಪ್ರಾಮುಖ್ಯ?
2015ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ ಸಿಒಪಿ 21ರಲ್ಲಿ ಬಹುಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ ಇಳಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಲ್ಲದೇ, ಜಾಗತಿಕ ತಾಪಮಾನ ಹೆಚ್ಚಲು ಭಾರತ ಮತ್ತು ಚೀನ ದೇಶಗಳೇ ಕಾರಣ ಎಂದು ಹೇಳಿದ್ದರು.
Related Articles
Advertisement
4.ಭಾರತಕ್ಕೆ ಏಕೆ ಮುಖ್ಯ?ಭಾರತದಲ್ಲಿ ಪ್ರತೀ ವರ್ಷವೂ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುತ್ತಲೇ ಇದೆ. ಜತೆಗೆ ತಾಪಮಾನ ಕಡಿಮೆ ಮಾಡುವ ಒಪ್ಪಂದಕ್ಕೂ ಭಾರತ ಒಪ್ಪಿದೆ. ಆದರೆ, ಈ ನಿಟ್ಟಿನಲ್ಲಿ ಭಾರತ ತೆಗೆದುಕೊಳ್ಳಬಹುದಾದ ಕ್ರಮಗಳಿಗೆ ಅಮೆರಿಕದಂಥ ಮುಂದುವರಿದ ದೇಶಗಳು ಪರಿಹಾರ ನೀಡಬೇಕು ಎಂಬುದು ಭಾರತದ ಒತ್ತಾಯ. ಏಕೆಂದರೆ ಸೋಲಾರ್ ಎನರ್ಜಿ ಬಳಕೆ ಮಾಡಬೇಕು ಎಂದಾದರೆ ಇದಕ್ಕೆ ಬೇಕಾದ ಪರಿಕರಗಳನ್ನು ಮುಂದುವರಿದ ದೇಶಗಳು ಕಡಿಮೆ ಹಣದಲ್ಲಿ ನೀಡಬೇಕು ಎಂಬ ಆಗ್ರಹವಿದೆ. ಇದು ಇನ್ನೂ ಚರ್ಚೆಯ ಹಂತದಲ್ಲಿದೆ.