Advertisement

ಆನೆಕಾಲು ರೋಗದಿಂದ ಮುಕ್ತಿ ಗೆ ಸಹಕಾರ ಅಗತ್ಯ

07:47 PM Dec 16, 2020 | Adarsha |

ಯಾದಗಿರಿ: ಆನೆಕಾಲು ರೋಗದಿಂದ ಮುಕ್ತಿ ಪಡೆಯಲು ಜಿಲ್ಲಾದ್ಯಂತ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಭೇಟಿ ರೋಗ ಹರಡದಂತೆ ತ್ರಿವಳಿ ಗುಳಿಗೆಗಳನ್ನು ನುಂಗಿಸಲಿದ್ದು, ಜನತೆ ಸಹಕರಿಸುವಂತೆ ಜಿಪಂ ಸಿಇಒ ಶಿಲ್ಪಾ ಶರ್ಮಾ ಕರೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಆನೆಕಾಲು ರೋಗ ನಿರ್ಮೂಲನೆಗಾಗಿ 2ನೇ ಸುತ್ತಿನ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಳಿಗೆಗಳ ಸೇವನೆಯಿಂದ ವಂಚಿತರಾದವರಿಗೆ ಮಾಪ್‌-ಆಪ್‌ ಕಾರ್ಯಕ್ರಮದ ಮೂಲಕ ಗುಳಿಗೆಗಳನ್ನು ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಫಲಾನುಭವಿಗಳು ತ್ರಿವಳಿ ಗುಳಿಗೆಗಳನ್ನು ಸೇವಿಸಿ ಆನೆಕಾಲು ರೋಗದಿಂದ ಮುಕ್ತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:ಮತದಾರ ಪಟ್ಟಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ

ಜಿಲ್ಲೆಯಲ್ಲಿ 2,46,769 ಮನೆಗಳಿದ್ದು, 13,0,2331 ಜನರಿಗೆ ಗುಳಿಗೆ ನುಂಗಿಸಬೇಕಿರುತ್ತದೆ. 2,258 ಸಿಬ್ಬಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಮೇಲ್ವಿಚಾರಣೆಗಾಗಿ 226 ಜನರನ್ನು ನಿಯೋಜಿಸಲಾಗಿದೆ ಎಂದರು.

Advertisement

ರಾಷ್ಟ್ರೀಯ ನೀತಿ ಆಯೋಗದ ಸದಸ್ಯ ಡಾ| ವಿ.ಕೆ. ಪೌಲ್‌ ಮಾತನಾಡಿ, ರಾಷ್ಟ್ರದ ಏಳ್ಗೆಗೆ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಆನೆಕಾಲು ರೋಗವನ್ನು 2021ರೊಳಗೆ ಸಂಪೂರ್ಣ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ ಎಂದರು.

ಎನ್‌ವಿಬಿಡಿಸಿಪಿ ಹೆಚ್ಚುವರಿ ನಿರ್ದೇಶಕ ಡಾ| ನೂಪುರ್‌ ರಾಯ್‌, ಎನ್‌.ವಿ.ಬಿ.ಡಿ.ಸಿ.ಪಿ ಸಹ ನಿರ್ದೇಶಕ ಡಾ| ರಮೇಶ್‌.ಕೆ.ಕೌಲಗುಡ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಇಂದುಮತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next