Advertisement

ಶಾಂತಿಯುತ ಚುನಾವಣೆಗೆ ಸಹಕಾರ ಅಗತ್ಯ

03:57 PM Apr 03, 2018 | Team Udayavani |

ಸುರಪುರ: ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ಪಾರದರ್ಶಕ ಮತದಾನಕ್ಕಾಗಿ 319 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗುತ್ತಿದ್ದು, ಚುನಾವಣೆಯನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಲು ವಿವಿಧ ಪಕ್ಷಗಳ ಮುಖಂಡರು ಮತ್ತು ಮತ ಬಾಂಧವರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಚುನಾವಣಾಧಿಕಾರಿ ಪ್ರವೀಣ ಪ್ರಿಯಾ ಎನ್‌. ಡೇವಿಡ್‌ ತಿಳಿಸಿದರು.

Advertisement

ಇಲ್ಲಿಯ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅವರು, ಕ್ಷೇತ್ರದಲ್ಲಿ 224 ಸಾಮಾನ್ಯ, 50 ಸೂಕ್ಷ್ಮ, 45 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಎಲ್ಲ ಸೌಕರ್ಯಗಳ ವ್ಯವಸ್ಥೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು. ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 1,35.310 ಪುರುಷ, 1,33,348 ಮಹಿಳಾ ಮತ್ತು 20 ಇತರೆ ಮತದಾರರು ಸೇರಿ ಒಟ್ಟು 2,68,678 ಮತದಾರರಿದ್ದಾರೆ.

ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದಲ್ಲಿ ಅಥವಾ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳಲು ಏ. 14ರವರೆಗೆ ಮತದಾರ ಪಟ್ಟಿಗೆ ಸೇರ್ಪಡೆಗೆ ಅವಕಾಶವಿದೆ. ಅಂತವರು ಅನ್‌ಲೈನ್‌ ಮೂಲಕ ಹೆಸರು ಸೇರ್ಪಡೆ ಮಾಡಿಕೊಳಬೇಕು ಎಂದು ತಿಳಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಜಾಗೃತಿ ಇನ್ನಿತರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಂಚಾರಿ ಜಾಗೃತ ದಳ 8, ಎಸ್‌ಎಸ್‌ಟಿ ತಂಡ 10, ವಿಎಸ್‌ಟಿ ತಂಡ 5, ಸೆಕ್ಟರ್‌ ತಂಡ 19 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಒಟ್ಟು 5 ಚೆಕ್‌ ಪೋಸ್ಟ್‌ಗಳನ್ನು ರಚಿಸಲಾಗಿದ್ದು, ಬಂಡೋಳಿ ಚೆಕ್‌ ಪೋಸ್ಟ್‌ಗೆ ಯಲ್ಲಪ್ಪ ಕಾಡ್ಲುರು, ಐಬಿ ತಾಂಡಾ ನಾರಾಯಣಪುರ ಚೆಕ್‌ ಪೋಸ್ಟ್‌ಗೆ ಡಾ| ಸುರೇಶ ಹಚ್ಚಡ, ಮಾಳನೂರು ಚೆಕ್‌ ಪೋಸ್ಟ್‌ಗೆ ಅಬ್ದುಲ್‌ ರಹೀಮ್‌, ಹಗರಟಗಿ ಚೆಕ್‌ ಪೋಸ್ಟ್‌ಗೆ ಸುಭಾಶ್ಚಂದ್ರ, ಹೆಮನೂರ ಚೆಕ್‌ ಪೋಸ್ಟ್‌ಗೆ ಎನ್‌.ಡಿ. ರಘುನಾಥ ನೇಮಿಸಲಾಗಿದೆ.

Advertisement

ವೆಂಕಟೇಶ ಹೋತಪೇಟೆ ಸಹಾಯಕ ವೆಚ್ಚ ವಿಕ್ಷಕರಾಗಿ, ಚಂದ್ರಶೇಖರ ಪವಾರ್‌ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಪರಿಶೀಲನಾ ಸಮಿತಿ ತಂಡದ ಮುಖ್ಯಸ್ಥರಾಗಿ, ಚಂದ್ರಶೇಖರ ಜೇವರ್ಗಿ, ಜಿ.ಎಸ್‌. ಹಗರಗುಂಡಾ ಸಹಾಯಕರಾಗಿ ಸೇಮಿಸಲಾಗಿದೆ. 

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿದ್ದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಖಾಸಗಿ ಅವರು ಕೂಡ ಸಭೆ, ಸಮಾರಂಭಗಳಿಗೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಕಾನೂನು ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಾಕೀತು ಮಾಡಿದರು.

ಸಹಾಯಕ ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್‌ ಸುರೇಶ ಅಂಕಲಗಿ, ಗ್ರೇಡ್‌-2 ತಹಶೀಲ್ದಾರ್‌ ಸೊಫಿಯಾ ಸುಲ್ತಾನ್‌, ಪ್ರೊಬೇಷನರಿ ತಹಶೀಲ್ದಾರ್‌ ಲಿಂಗಣ್ಣ ಬಿರಾದಾರ್‌, ಸಹಾಯಕ ವೆಚ್ಚ ವೀಕ್ಷಕ ವೆಂಕಟೇಶ ಹೋತಪೇಟೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next