Advertisement
ಬುಧವಾರ ನಗರದಲ್ಲಿ ಕೋವಿಡ್ 19 ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಭೀತಿ ಕ್ರಮೇಣ ಇಳಿಮುಖವಾಗುತ್ತಿದೆ. ಜನರಲ್ಲಿ ಕೋವಿಡ್ ಲಕ್ಷಣಗಳು ಇರುವುದು ಕಡಿಮೆಯಾಗುತ್ತಿವೆ. ಈಗಾಗಲೇ 21 ಸೋಂಕಿತರ ಪೈಕಿ 2 ಸಂಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಂತಸದ ವಿಷಯವಾಗಿದೆ. 28 ದಿನಗಳ ಕ್ವಾರಂಟೈನ್ ಪೂರ್ಣಗೊಂಡವರನ್ನು ಮನೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್.ದೇಸಾಯಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟಯ 1303 ಜನರ ಮೇಲೆ ಮಾತ್ರ ನಿಗಾ ವಹಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1538 ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಈ ಪೈಕಿ 1236 ನೆಗಟಿವ್, 21 ಪಾಜಿಟಿವ್ ಹಾಗೂ 1 ಮೃತಪಟ್ಟ ಪ್ರಕರಣ ವರದಿಯಾಗಿದೆ. 253 ಸ್ಯಾಂಪಲ್‌ಗಳ ವರದಿ ಬಾಕಿ ಇವೆ. ಕೋವಿಡ್ ಚಿಕಿತ್ಸೆಗೆ ಬೇಕಾಗುವ ಮಟರಿಯಲ್ಸ್‌ಗಳು ಲಭ್ಯವಿದೆ ಎಂದರು.
ಕ್ಷೌರಿಕರಿಗೆ ಆಹಾರಧಾನ್ಯ ಕಿಟ್ : ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಜಿಲ್ಲೆಯ ಕ್ಷೌರಿಕರಿಗೆ ದಿನನಿತ್ಯದ ಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳ ಫುಡ್ ಕಿಟ್‌ಗಳನ್ನು ಬಾಗಲಕೋಟೆ ನಗರದ 145 ಕ್ಷೌರಿಕರಿಗೆ ನೀಡಲಾಯಿತು. ಜಿಲ್ಲೆಯ ಎಲ್ಲ ನಗರ-ಪಟ್ಟಣ ಪ್ರದೇಶದ ಕ್ಷೌರಿಕ ಕುಟುಂಬಗಳಿಗೆ ತಲಾ 1200 ಮೊತ್ತ ಆಹಾರಧಾನ್ಯಗಳ ಕಿಟ್ ಅನ್ನು ಎಸ್‌ಡಿಆರ್‌ಎಫ್ ನಿಧಿಯಿಂದ ನೀಡಲಾಗುತ್ತಿದೆ. –ಗೋವಿಂದ ಕಾರಜೋಳ, ಡಿಸಿಎಂ
1.13 ಕೋಟಿ ರೂ. ಸಂಗ್ರಹ : ಜಿಲ್ಲೆಯ ದಾನಿಗಳಿಂದ ಕೋವಿಡ್ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿ ಗೆ ಒಟ್ಟು 1,13,58,866 ರೂ.ಗಳ ಸಂಗ್ರಹವಾಗಿದೆ. ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 36,23,866 ರೂ. ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 77,35,000 ರೂ. ನೀಡಿದ್ದಾರೆ. -ಕ್ಯಾ.ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ
5 ಲಕ್ಷ ಮೊತ್ತದ ಮಾಸ್ಕ್ : ಜಿಲ್ಲೆಯ ಜನರಿಗೆ ಉಚಿತವಾಗಿ ವಿತರಿಸಲು ಸಂಸದರ ನಿಧಿಯಿಂದ 5 ಲಕ್ಷ ಮೊತ್ತದ ಮಾಸ್ಕ್ ನೀಡಲಾಗಿದೆ. ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳಿಂದ ಉತ್ಪಾದಿಸಿದ ಕಾಟನ್ ಬಟ್ಟೆಯ ಗುಣಮಟ್ಟದ ಮಾಸ್ಕ್ ಗಳನ್ನು ಜಿಲ್ಲೆಯ ಜನರಿಗೆ ನೀಡಲು ಅಧಿಕಾರಿಗಳಿಗೆ ನೀಡಲಾಗಿದೆ.- ಪಿ.ಸಿ. ಗದ್ದಿಗೌಡರ, ಸಂಸದರು