Advertisement

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

09:48 AM Apr 23, 2024 | Team Udayavani |

ಬೆಂಗಳೂರು/ ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ 171 ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಸಿನಿಮಾದ ಟೈಟಲ್‌ ರಿವೀಲ್‌ ಮಾಡುವ ಟೀಸರ್‌ ರಿಲೀಸ್‌ ಆಗಿದೆ.

Advertisement

ಲೋಕೇಶ್‌ ಕನಕರಾಜ್‌ – ರಜಿನಿಕಾಂತ್‌ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆಯನ್ನು ಹೆಚ್ಚಿಸಿದೆ. ಅನೌನ್ಸ್‌ ಆದ ದಿನದಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ರಜಿನಿಕಾಂತ್‌ ಸಿನಿಮಾದಲ್ಲಿ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼತಲೈವರ್‌ 171ʼ ಸಿನಿಮಾಕ್ಕೆ ʼಕೂಲಿʼ ಎನ್ನುವ ಟೈಟಲ್‌ ಇಡಲಾಗಿದೆ.

ʼಜೈಲರ್‌ʼ ಬಳಿಕ ರಜಿನಿಕಾಂತ್‌ ʼಲಾಲ್‌ ಸಲಾಂʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಆದರೆ ಈ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಇದೀಗ ʼಕೂಲಿʼಯಾಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ಚಿನ್ನ ಬಿಸ್ಕೆಟ್‌ ಇರುವ ಗ್ಯಾಂಗ್‌ ಸ್ಟರ್‌ ಅಡ್ಡಕ್ಕೆ ಬರುವ ರಜಿನಿಕಾಂತ್‌ ಅದನ್ನು ಎಸ್ಕೇಪ್‌ ಮಾಡಲು ಪುಡಿ ರೌಡಿಗಳನ್ನು ಅಟ್ಟಹಾಸ ಮಾಡುವ ಮಾಸ್‌ ದೃಶ್ಯಗಳನ್ನು ಪವರ್‌ ಫುಲ್‌ ಡೈಲಾಗ್ಸ್‌ ಗಳೊಂದಿಗೆ ಹಾಗೂ ಅನಿರುದ್ದ್ ಕ್ಲಾಸ್‌ ಮ್ಯೂಸಿಕ್‌ ನೊಂದಿಗೆ ತೋರಿಸಲಾಗಿದೆ.

Advertisement

ರಜಿನಿಕಾಂತ್‌ ಅವರ ಲುಕ್‌ ನೋಡಿ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.

ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಟೀಸರ್‌ ರಿಲೀಸ್‌ ಆಗಿದೆ. ಟೀಸರ್‌ ನಾಲ್ಕು ಭಾಷೆಯಲ್ಲೂ ಭರ್ಜರಿ ವೀಕ್ಷಣೆ ಕಂಡಿದೆ.

ಸಿನಿಮಾದ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸದ್ಯದ ಪ್ರಕಾರ ದಕ್ಷಿಣದ ಖ್ಯಾತ ಕಲಾವಿದರ ಜೊತೆ ಬಿಟೌನ್‌ ಸಿನಿರಂಗದ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸದ್ಯ ರಜಿನಿಕಾಂತ್‌ ಟಿ.ಜೆ ಜ್ಞಾನವೇಲ್‌ ಅವರ ʼ ವೆಟ್ಟೈಯನ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next