ಕಾಮಕಸ್ತೂರಿ ವಿದ್ ಎಳನೀರು
ಬೇಕಾಗುವ ಸಾಮಗ್ರಿ: ನೆನೆಸಿದ ಕಾಮಕಸ್ತೂರಿ ಬೀಜ- ನಾಲ್ಕು ಚಮಚ, ಗಂಜಿ ಮಿಶ್ರಿತ ಎಳನೀರು- ಒಂದು ಕಪ್, ಬಾಳೆಹಣ್ಣು – ಎರಡು, ಲಿಂಬೆಹಣ್ಣು- ಒಂದು, ಸಕ್ಕರೆ- ಸಿಹಿಗೆ ಬೇಕಷ್ಟು, ಏಲಕ್ಕಿಪುಡಿ- ಚಿಟಿಕಿ.
Advertisement
ತಯಾರಿಸುವ ವಿಧಾನ: ಸಬ್ಚ ಬೀಜಗಳನ್ನು ಸುಮಾರು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ. ಮಿಕ್ಸಿಂಗ್ ಬೌಲ್‌ಗೆ ಗಂಜಿಮಿಶ್ರಿತ ಎಳನೀರು ಹಾಕಿ, ಇದಕ್ಕೆ ಲಿಂಬೆರಸ, ಏಲಕ್ಕಿ ಮತ್ತು ಸಕ್ಕರೆ ಸೇರಿಸಿ ಬೇಕಷ್ಟು ನೀರು ಸೇರಿಸಿಕೊಂಡು ಮಿಶ್ರಮಾಡಿ. ನಂತರ ಸರ್ವ್ ಮಾಡುವಾಗ ಹೆಚ್ಚಿದ ಬಾಳೆಹಣ್ಣು ಮತ್ತು ನೆನೆಸಿಟ್ಟ ಸಬ್ಚ ಬೀಜಗಳನ್ನು ಸೇರಿಸಿ. ಬೇಕಿದ್ದರೆ ಐಸ್‌ಪೀಸ್ ಸೇರಿಸಬಹುದು. ಬಹಳ ಹೆಲ್ದಿಯಾದ ಇದರ ಸೇವನೆಯಿಂದ ದೇಹ ತಂಪಾಗುವುದರ ಜೊತೆಗೆ ಉರಿಮೂತ್ರ ಶಮನ.
ಬೇಕಾಗುವ ಸಾಮಗ್ರಿ: ಹೆಚ್ಚಿದ ಖರಬೂಜ- ಒಂದು ಕಪ್, ತಂಪಾದ ಹಾಲು- ಎರಡು ಕಪ್, ಅವಲಕ್ಕಿ- ಒಂದು ಹಿಡಿ, ಸಕ್ಕರೆ ಅಥವ ಬೆಲ್ಲ ರುಚಿಗೆ ಬೇಕಷ್ಟು, ನೆನೆಸಿಟ್ಟ ಸಬ್ಚ ಬೀಜಗಳು- ಮೂರು ಚಮಚ, ಏಲಕ್ಕಿ ಪುಡಿ ಚಿಟಿಕಿ. ತಯಾರಿಸುವ ವಿಧಾನ: ಖರಬೂಜಕ್ಕೆ ಹಾಲು, ಸಕ್ಕರೆ, ಅವಲಕ್ಕಿ ಮತ್ತು ಬೇಕಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಇದಕ್ಕೆ ಸಬ್ಚ ಬೀಜಗಳು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸರ್ವ್ ಮಾಡಬಹುದು.
Related Articles
ಬೇಕಾಗುವ ಸಾಮಗ್ರಿ: ನೆನೆಸಿದ ಸಬ್ಚಬೀಜ – ನಾಲ್ಕು ಚಮಚ, ತಂಪಾದ ದಪ್ಪಹಾಲು- ಎರಡು ಕಪ್, ಹೆಚ್ಚಿದ ಬಾಳೆಹಣ್ಣು, ಸಪೋಟಾ, ಪಪ್ಪಾಯ, ಖರ್ಬುಜ, ಸೇಬು ಇತ್ಯಾದಿ ಹಣ್ಣುಗಳ ಮಿಶ್ರಣ- ಎರಡು ಕಪ್, ಜೇನುತುಪ್ಪ- ಒಂದು ಚಮಚ, ಸಕ್ಕರೆ ರುಚಿಗೆ ಬೇಕಷ್ಟು, ಹೆಚ್ಚಿದ ಖರ್ಜೂರ, ಬಾದಾಮಿ- ಎರಡು ಚಮಚ, ಓಟ್ಸ್ – ಎರಡು ಚಮಚ.
Advertisement
ತಯಾರಿಸುವ ವಿಧಾನ: ಬಾಣಲೆ ಬಿಸಿಮಾಡಿ ಓಟ್ಸ್‌ನ್ನು ಸ್ವಲ್ಪ ಬೆಚ್ಚಗೆ ಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಆರಿದ ಮೇಲೆ ಇದಕ್ಕೆ ತಂಪಾದ ದಪ್ಪಹಾಲನ್ನು ಸೇರಿಸಿ. ಇದಕ್ಕೆ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಸೇರಿಸಿ ಸ್ವಲ್ಪ ಮ್ಯಾಶ್ ಮಾಡಿ. ನಂತರ, ರುಚಿಗೆ ಬೇಕಷ್ಟು ಸಕ್ಕರೆ, ಜೇನುತುಪ್ಪ, ಸಬ್ಚ ಬೀಜಗಳು ಹಾಗು ಡ್ರೈಫ್ರೂಟ್ಸ್ ಸೇರಿಸಿ ಮಿಶ್ರಮಾಡಿ. ಸರ್ವ್ ಮಾಡುವಾಗ ಮೇಲಿನಿಂದ ಕಾರ್ನ್ಫ್ಲೇಕ್ಸ್ ಹರಡಿ ಚೆರಿಯಿಂದ ಅಲಂಕರಿಸಬಹುದು.
ಕಾಮಕಸ್ತೂರಿ ವಿದ್ ಐಸ್ಕ್ರೀಮ್ಬೇಕಾಗುವ ಸಾಮಗ್ರಿ: ನೆನೆಸಿದ ಕಾಮಕಸ್ತೂರಿ ಬೀಜ- ಎರಡು ಚಮಚ, ಹೆಚ್ಚಿದ ಮಾವು, ಚಿಕ್ಕು, ಬನಾನ, ಸೇಬು, ಫೈನಾಪಲ್ ಇತ್ಯಾದಿ ಹಣ್ಣುಗಳ ಮಿಶ್ರಣ- ಆರು ಚಮಚ, ಐಸ್‌ಕ್ರೀಮ್- ಎರಡು ಕಪ್, ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ- ಎರಡು ಚಮಚ, ಒಣದ್ರಾಕ್ಷಿ- ಖರ್ಜೂರ- ಎರಡು ಚಮಚ, ಬೇಯಿಸದ ಫಲೂಡಸೇಮೆ- ಎರಡು ಚಮಚ. ತಯಾರಿಸುವ ವಿಧಾನ: ಸರ್ವಿಂಗ್ ಬೌಲ್‌ನಲ್ಲಿ ಮೇಲೆ ತಿಳಿಸಿದ ಎಲ್ಲಾ ಹಣ್ಣುಗಳನ್ನು ಹರಡಿ ಮೇಲಿನಿಂದ ಐಸ್‌ಕ್ರೀಮ್ ಹಾಕಿ ಅದರ ಮೇಲಿನಿಂದ ಡ್ರೈಫೂಟ್ಸ್ ಹಾಗೂ ಸೇಮೆ ಹರಡಿ ಮೇಲಿನಿಂದ ಪುನಃ ಐಸ್‌ಕ್ರೀಮ್ ಹರಡಿ ಚೆರಿಯಿಂದ ಅಲಂಕರಿಸಿ. ಗೀತಸದಾ