Advertisement

ಉತ್ತಮ ಆರೋಗ್ಯಕ್ಕಾಗಿ ಅಡುಗೆ ತೈಲಗಳು

11:41 AM Mar 26, 2019 | pallavi |

ಎಣ್ಣೆ ಮುಕ್ತ ಅಡುಗೆಗಳು ನಾಲಗೆಗೆ ರುಚಿ ಕೊಡುವುದಿಲ್ಲ. ಆದರೆ ಅತಿಯಾದ ಎಣ್ಣೆ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಕೊಲೆಸ್ಟ್ರಾಲ್‌ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಕಲ್ಪನೆ ಅನೇಕರಲ್ಲಿದೆ. ತೂಕ ಇಳಿಸಬೇಕು ಎಂಬ ಪ್ರಯತ್ನಿಸುವವರು ತಿನ್ನುವ ಆಹಾರ, ಆಹಾರಕ್ಕೆ ಬಳಸುವ ಅಡುಗೆ ಎಣ್ಣೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಅಡುಗೆ ಎಣ್ಣೆಯಲ್ಲಿ ಸ್ಯಾಚುರೇಟೆಟ್‌ ಮತ್ತು ಅನ್‌ಸ್ಯಾಚುರೇಟೆಡ್‌ ಎರಡೂ ರೀತಿಯ ಕೊಬ್ಬಿನ ಮಿಶ್ರಣವಿದೆ. ತೂಕ ಇಳಿಸಬಯಸುವವರು ಕೊಬ್ಬಿನಾಂಶದಿಂದ ದೂರವಿರಬೇಕು. ಆದರೆ ಎಲ್ಲ ಕೊಬ್ಬಿನಾಂಶ ದೇಹಕ್ಕೆ ಕೆಟ್ಟದಲ್ಲ. ಡಯೆಟ್‌ ಯೋಜನೆಯಲ್ಲಿ ಕೆಳಗೆ ಹೇಳಿರುವ ಅಡುಗೆ ಎಣ್ಣೆಗಳನ್ನು ಅಡುಗೆಗೆ ಬಳಸಬಹುದು. ಇವುಗಳು ತೂಕ ಇಳಿಸಿಕೊಳ್ಳುವ ಯೋಜನೆಗೆ ಅಡ್ಡಿಪಡಿಸಲಾರವು.

Advertisement

  ಆಲಿವ್‌ ಎಣ್ಣೆ
ಆಲಿವ್‌ ಎಣ್ಣೆಯೂ ಆರೋಗ್ಯಕರ ಎಣ್ಣೆಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು ಆಹಾರಗಳಲ್ಲಿ ಆಲಿವ್‌ ಎಣ್ಣೆ ಬಳಕೆ ಉತ್ತಮ. ಸಂಸ್ಕರಿಸಿದ ಆಲಿವ್‌ ಎಣ್ಣೆಯು ಹೆಚ್ಚುವರಿ ಕಚ್ಚಾ ಆಲಿವ್‌ ಎಣ್ಣೆಯಷ್ಟು ಒಳ್ಳೆಯದಲ್ಲ. . ಸ್ಲಿಮ್‌ ಆಗಿರಲು ನಿಂಬೆ ರಸಕ್ಕೆ ಸ್ವಲ್ವ ಆಲಿವ್‌ ಎಣ್ಣೆ ಬೆರೆಸಿ ನಿತ್ಯ ಅರ್ಧ ಕಪ್‌ ಕುಡಿದರೆ ಉತ್ತಮ. ಇದು ಹಸಿವಿನ ಪ್ರಮಾಣವನ್ನು ಕುಗ್ಗಿಸುತ್ತದೆ. ಇದರೊಂದಿಗೆ ರೋಗನಿರೋಧಕ ಶಕ್ತಿ ವೃದಿಗೆ, ಹೃದಯ ಆರೋಗ್ಯಕ್ಕೆ ಒಳ್ಳೆಯದು.

  ಕಾನೋಲಾ ಎಣ್ಣೆ
ಕಾನೋಲಾ ಎಣ್ಣೆಯಲ್ಲಿ ಒಮೆಗಾ- 3 ಕೊಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವ ಈ ತೈಲ ಆರೋಗ್ಯಕ್ಕೆ ಒಳ್ಳೆಯದು. ಇದು ಲೋ ಬಿಪಿ ಹಾಗೂ ಹೃದಯದ ಆರೋಗ್ಯಕ್ಕೆ ಉತ್ತಮ.

  ಬೀಜಗಳ ಎಣ್ಣೆ
ಬಾದವಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೇಬೀಜದ ಎಣ್ಣೆಗಳ ಮಿತವಾದ ಬಳಕೆಯೂ ಕೂಡ ತೂಕ ಇಳಿಸಿಕೊಳ್ಳಲು ಸಹಕಾರಿ. ಕೆಲವು ಬೀಜಗಳ ಎಣ್ಣೆಗಳು ಹೆಚ್ಚಿನ ಏಕವರ್ಧಿಕ ಕೊಬ್ಬಿನಾಂಶವನ್ನು ಹೊಂದಿದೆ. ಅಡುಗೆಗೆ ಬಳಸುವ ಎಣ್ಣೆಯಲ್ಲಿ ಎಷ್ಟು ಕ್ಯಾಲೋರಿಗಳಿರುತ್ತವೆ ಎಂಬುದನ್ನು ಮೊದಲೇ ತಿಳಿದಿರಬೇಕು. ತಾತ್ವಿಕವಾಗಿ ಒಂದು ಚಮಚ ಎಣ್ಣೆಯಲ್ಲಿ 120 ಕ್ಯಾಲೋರಿಗಳಿರುತ್ತವೆ. ಆದ್ದರಿಂದ ಎಣ್ಣೆಯನ್ನು ಮಿತವಾಗಿ ಸೇವಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next