Advertisement

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

02:30 AM Jul 07, 2022 | Team Udayavani |

ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್‌ ದರವನ್ನು 50 ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14 ಕೆಜಿ ತೂಕದ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರ 1,055.50 ರೂ.ಗೆ ಹೆಚ್ಚಿದಂತಾಗಿದೆ.

Advertisement

ಪ್ರಸಕ್ತ ವರ್ಷ ಇದು ನಾಲ್ಕನೇ ಬಾರಿಯ ದರ ಪರಿಷ್ಕರಣೆಯಾಗಿದೆ.

2021ರ ಜೂನ್‌ ಬಳಿಕ ಒಂದು ವರ್ಷದ ಅವಧಿಯಲ್ಲಿ 244 ರೂ. ಏರಿಕೆ ಯಾದಂ ತಾಗಿದೆ. ಈ ಪೈಕಿ ಮಾರ್ಚ್‌ ಬಳಿಕವೇ 153.50 ರೂ. ಹೆಚ್ಚಳವಾಗಿದೆ.

ಮಾ.22, ಮೇ 7ರಂದು 50 ರೂ., ಮೇ 19ರಂದು 3.50 ರೂ. ದರ ಹೆಚ್ಚಿಸಲಾಗಿತ್ತು. ಇನ್ನೊಂದೆಡೆ, 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್‌ ದರವನ್ನು 8.50 ರೂ. ಇಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next